ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ – ಸೋನಲ್ ಮಂಥೆರೋ ಆರತಕ್ಷತೆ (Tharun Sudhir Sonal Monteiro Wedding Reception) ಬೆಂಗಳೂರಿನಲ್ಲಿ ನಡೆಯತ್ತಿದೆ. ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯುತ್ತಿದ್ದು, ರಿಸೆಪ್ಷನ್‌ಗೆ ಬಂದವರಿಗೆ ಅದ್ಧೂರಿ ಭೋಜನ ಏರ್ಪಡಿಸಲಾಗಿದೆ.
ಮದುವೆ ಹಾಗೂ ಆರತಕ್ಷತೆಗೆ 10 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಬಾಣಸಿಗರು 4 ಕಿಚನ್‌ಗಳಲ್ಲಿ ಅಡುಗೆ ಸಿದ್ಧ ಮಾಡುತ್ತಿದ್ದಾರೆ.
ರಿಸೆಪ್ಷನ್ ಸ್ಪೆಷಲ್ ಮೆನು ಏನೇನು?
20ಕ್ಕೂ ಅಧಿಕ ಬಗೆಯ ಸ್ವೀಟ್‌ಗಳು, ತರಹೇವಾರಿ ದೋಸೆಗಳು, ರೊಟ್ಟಿಗಳು, ಶ್ಯಾವಿಗೆ ಸೇರಿದಂತೆ ವಿವಿಧ ಖಾದ್ಯಗಳು ಸಿದ್ಧವಾಗಿದೆ. ಮಂಗಳೂರು- ಉತ್ತರ ಕರ್ನಾಟಕ ಮಿಕ್ಸ್ ಸ್ಟೈಲ್ ಫುಡ್, ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಫುಡ್ ರಿಸೆಪ್ಷನ್ ಊಟದ ಮೆನುವಿನಲ್ಲಿದೆ. (Tharun Sonal Wedding Recepton Menu)
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ತರುಣ್ ಮದುವೆ ರಿಸೆಪ್ಷನ್ ಕ್ಯಾಟರಿಂಗ್ ಮುಖ್ಯಸ್ಥ ಸುಭಾಷ್, ನಾವು ಈ ಅಡುಗೆ ವಹಿಸಿಕೊಂಡಿದ್ದಕ್ಕೆ ಸಂತೋಷವಿದೆ. ತರುಣ್ ಸರ್ ಹಾಗೂ ಸೋನಲ್ ಮೇಡಂ ಈ ಹಿಂದೆ ನಮ್ಮ ಕ್ಯಾಟರಿಂಗ್ ಅಡುಗೆ ರುಚಿ ನೋಡಿದ್ದಾರೆ. ಸೋನಲ್ ಮೇಡಮ್‌ಗಾಗಿಯೇ ಹಲಸಿನ ಹಲ್ವಾ, ತರುಣ್ ಗೋಸ್ಕರ ಒಂದು ಸ್ಪೆಷಲ್ ಸ್ಪೈಸಿ ಐಟಂ ಮಾಡ್ತಿದೀವಿ. ಎಷ್ಟು ಜನ ಬಂದ್ರೂ ಮ್ಯಾನೇಜ್ ಮಾಡ್ತೀವಿ. ಯಾರಿಗೂ ಊಟ ಕಡಿಮೆ ಆಗಬಾರದು ಎಂಬ ಹಾಗೆ ಪ್ರಿಪೇರ್ ಮಾಡ್ತಿದ್ದೇವೆ ಎಂದರು.
ಮಂಗಳೂರು – ಉತ್ತರ ಕರ್ನಾಟಕ ಮಿಕ್ಸ್ ಸ್ಟೈಲ್ ಆಹಾರ, ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಫುಡ್ ರಿಸೆಪ್ಷನ್ ಊಟದ ಮೆನುವಿನ ಸ್ಪೆಷಲ್ ಐಟಂಗಳು ಎಂದು ಸ್ಪೆಷಲ್ ಮೆನು ಬಗ್ಗೆ ಸುಭಾಷ್ ವಿವರಿಸಿದ್ದಾರೆ.