ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ತಾರಾ ಜೋಡಿ ಮದುವೆ ಸಂಭ್ರಮದಲ್ಲಿದೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಆರತಕ್ಷತೆ (Tharun Sudhir Sonal Monteiro Wedding Reception) ಇಂದು ನಡೆಯುತ್ತಿದೆ. ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ನವಜೋಡಿಯ ಆರತಕ್ಷತೆಗೆ ಸಿದ್ಧವಾಗಿದೆ.
ಮಗನ ಮದುವೆ ಸಂಭ್ರಮದ ಬಗ್ಗೆ ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ್ದಾರೆ. ಮಗನ ಮದುವೆಯನ್ನ ಬಾಸ್ ಮಾಡಿಸಿದ್ದು. ಎಲ್ಲವೂ ಅವರದ್ದೇ ತಯಾರಿ ಆಗಿತ್ತು ಎಂದು ಮದುವೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರಣ ಎಂದು ಹೇಳಿದ ಅವರು, ಸೊಸೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಮುಂದೆ ಚೆನ್ನಾಗಿ ನೋಡಿಕೊಳ್ತೀನಿ. ನಮಗೆ ಹೆಣ್ಣುಮಗಳಿಲ್ಲ. ಅವಳೇ ಮಗಳ ಥರ ಎಂದರು. ಇದನ್ನೂ ಓದಿ: ಸೋನಲ್ ಜೊತೆ ತರುಣ್ ರೊಮ್ಯಾಂಟಿಕ್ ಫೋಟೋಶೂಟ್- ಮದುವೆ ಬಗ್ಗೆ ಕೊಟ್ರು ಗುಡ್ ನ್ಯೂಸ್
ನನ್ನ ಮಗ ಮದುವೆಯಾಗ್ತಿರೋದು ತುಂಬಾ ಖುಷಿಯಾಗ್ತಿದೆ. ಆದರೆ ಈಗ ಯಜಮಾನ್ರಿಲ್ಲ ಅನ್ನೋದೇ ಬೇಸರ. ಅವರು ಅಲ್ಲಿಂದಲೇ ನೋಡಿ ಖುಷಿ ಪಟ್ಟಿರ್ತಾರೆ ಎಂದು ಮಾಲತಿ ಸುಧೀರ್ ಅವರು ಹೇಳಿದ್ದಾರೆ. ಮಗ ಡೈರೆಕ್ಟರ್ ಅಲ್ವೇ.. ಹಾಗಾಗಿ ಕ್ರಿಯೇಟಿವ್ ಆಗಿ ಹೀಗೆ ಪ್ಲ್ಯಾನ್ ಮಾಡಿದಾನೆ ಎಂದು ಸಂಭ್ರಮಿಸಿದ್ದಾರೆ.
ತರುಣ್ ಫ್ರೆಂಡ್ ಲ್ಯಾಪ್‌ಟಾಪಲ್ಲಿ ಫೋಟೋ ತೋರಿಸ್ದ!: ತರುಣ್ ಬಂದು ನನಗೆ ಸೋನಲ್ ಜೊತೆಗಿನ ಪ್ರೀತಿ ಬಗ್ಗೆ ಹೇಳಿಲ್ಲ. ಅವನ ಸ್ನೇಹಿತ ಬಂದು ಲ್ಯಾಪ್‌ಟಾಪ್‌ನಲ್ಲಿ ತೋರಿಸ್ದ. ನೋಡಿ ಅಮ್ಮ ಇವರೇ ತರುಣ್ ಮದುವೆ ಆಗ್ತಿರೋ ಹುಡುಗಿ ಅಂದ. ಹೌದಾ, ಕೊನೆಗೂ ಮದುವೆಗೆ ಒಪ್ಪಿಕೊಂಡ ಅಂತ ನನಗೆ ಖುಷಿ ಆಯ್ತು ಎಂದು ಮಾಲತಿ ಹೇಳಿದರು. ಇದನ್ನೂ ಓದಿ: ಗುಡ್‌ನ್ಯೂಸ್ ಕೊಟ್ಟ ʻಕಾಟೇರʼ ನಿದೇರ್ಶಕ; ತರುಣ್ ಸುಧೀರ್ – ಸೋನಲ್ ಮದುವೆ ಡೇಟ್ ಫಿಕ್ಸ್