ಲಕ್ನೋ: ಅಮೆರಿಕದಿಂದ ಕಾನ್ಪುರದ ತನ್ನ ಮನೆಯಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದಿರುವುದು ಎಲ್ಲೆಡೆ ವೈರಲ್ ಸುದ್ದಿಯಾಗಿದೆ.
ನ್ಯೂಜೆರ್ಸಿಯಲ್ಲಿ ನೆಲೆಸಿರುವ ಭಾರತೀಯ ಕುಟುಂಬವು ಕಾನ್ಪುರದಲ್ಲಿರುವ ಅವರ ಮನೆಯಲ್ಲಿ ಕಳ್ಳತನವಾಗುತ್ತಿರುವುದನ್ನು ಸಿಸಿಟಿವಿ ಲೈವ್ ದೃಶ್ಯಾವಳಿಗಳಲ್ಲಿ ವೀಕ್ಷಿಸಿದ್ದಾರೆ. ತಕ್ಷಣ ಕುಟುಂಬವು ಕಾನ್ಪುರ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಒಬ್ಬ ಕಳ್ಳನನ್ನು ಹಿಡಿದಿದ್ದು ಉಳಿದವರು ತಪ್ಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕರು!
Advertisement
Advertisement
ಏನಿದು ಪ್ರಕರಣ?
ನ್ಯೂಜೆರ್ಸಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿರುವ 38 ವರ್ಷದ ವಿಜಯ್ ಅವಸ್ತಿ ಅವರ ಫೋನಿಗೆ ಕಾನ್ಪುರದಲ್ಲಿದ್ದ ಅವರ ನಿವಾಸದ ಸಿಸಿಟಿವಿಯ ಲೈವ್ ಅನ್ನು ಕನೆಕ್ಟ್ ಮಾಡಿಕೊಂಡಿದ್ದಾರೆ. ಆಗ ಸಿಸಿಟಿವಿ ಲೈವ್ ನಿಂದ ರಾತ್ರಿ ಎಚ್ಚರಿಕೆ ಸಿಗ್ನಲ್ ಬಂದಿದ್ದು, ತಕ್ಷಣ ವಿಜಯ್ ಕುಟುಂಬದವರು ಏನಾಗುತ್ತಿದೆ ಎಂದು ದೃಶ್ಯವನ್ನು ವೀಕ್ಷಿಸಿದ್ದಾರೆ. ಆ ದೃಶ್ಯದಲ್ಲಿ ಕಳ್ಳರು ತಮ್ಮ ಮನೆಗೆ ನುಗ್ಗುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ವಿಜಯ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ಕಳ್ಳರು ಮನೆ ಒಳಗೆ ನುಗ್ಗದಂತೆ ತಡೆಯಲು ವಿಜಯ್ ಮನೆಗೆ ಅಳವಡಿಸಿದ ಮೈಕ್ ಸಹಾಯ ಪಡೆದ್ದರು. ಈ ವಿಚಾರ ತಿಳಿಯದ ಕಳ್ಳರು ಮನೆ ಬೀಗ ಒಡೆದು ಒಳಗೆ ನುಗ್ಗಿದ್ದಾರೆ.
Advertisement
ಮಾಹಿತಿ ತಿಳಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದು, ಕಳ್ಳರ ಮೇಲೆ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಒಬ್ಬನಿಗೆ ಗಾಯವಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ. ಬಂಧಿತ ವ್ಯಕ್ತಿಯನ್ನು ಹಮೀರ್‍ಪುರ ಜಿಲ್ಲೆಯ ಸೋನು ಎಂದು ಗುರುತಿಸಲಾಗಿದೆ.
ವಿಜಯ್ ಅವರ ಇಬ್ಬರು ಸಹೋದರಿಯರಾದ ಪೂನಂ ಮತ್ತು ಪ್ರೀತಿ ನಗರದ ಬರ್ರಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮನೆಯ ಕೀ ಇಬ್ಬರ ಬಳಿಯೂ ಇರುತ್ತವೆ. ಪೊಲೀಸರು ಕೂಡಲೇ ಅವರನ್ನು ಕರೆಸಿ ವಸ್ತುಗಳನ್ನು ಪರಿಶೀಲಿಸಿದರು.
ಡಿಸಿಪಿ ಪ್ರಮೋದ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಮನೆಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಳ್ಳ ಚೇತರಿಕೊಂಡ ತಕ್ಷಣ ಅವನನ್ನು ವಿಚಾರಣೆಗೆ ಒಳಪಡಿಸುತ್ತೇವೆ. ತಪ್ಪಿಸಿಕೊಂಡ ಕಳ್ಳರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಬಾಂಬ್ ಮಾಡುವುದನ್ನ ಕಲಿತು ಪತ್ನಿ ಮೇಲೆ ಅತ್ಯಾಚಾರ ಮಾಡಿದವನನ್ನ ಕೊಂದ!
ವಿಜಯ್ ಅವರ ಮನೆಯಲ್ಲಿ ಬಾಡಿಗೆದಾರರು ವಾಸಿಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರು ತಮ್ಮ ಗ್ರಾಮಕ್ಕೆ ಹೋಗಿದ್ದಾರೆ. ಈ ಸಮಯವನ್ನು ನೋಡಿಕೊಂಡ ಆರೋಪಿಗಳು ಕಳ್ಳತನ ಮಾಡಲು ಬಂದಿದ್ದಾರೆ ಎಂದು ತಿಳಿಸಿದರು.