ಬೆಂಗಳೂರು: ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಕ್ರೇಜಿ ಅಭಿಮಾನಿ ತಮ್ಮ ನೆಚ್ಚಿನ ನಟಿ ಸಿಗರೇಟ್ ಹೊಡೆಯುವ ಸ್ಟೈಲ್ ಫೋಟೋವನ್ನು ತಮ್ಮ ಆಟೋ ಹಿಂದೆ ಹಾಕಿದ್ದಾರೆ. ಅದ್ದಕ್ಕೆ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ನಟಿಯ ಪರಿಚಯದ ದೃಶ್ಯದಲ್ಲಿ ರಾಧಿಕಾ ಸಿಗರೇಟ್ ಬಾಯಲ್ಲಿಟ್ಟು ಧಮ್ ಎಳೆಯುವಂತೆ ಚಿತ್ರೀಕರಿಸಲಾಗಿತ್ತು. ರಾಧಿಕಾ ಸಿಗರೇಟ್ ಬಾಯಲ್ಲಿಟ್ಟ ಪೋಸ್ಟರ್ ಕೂಡ ಅಂದು ಭಾರೀ ವೈರಲ್ ಆಗಿತ್ತು. ಇದೇ ಪೋಸ್ಟರ್ ನ್ನು ರಾಧಿಕಾ ಇತ್ತೀಚೆಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ರಾಧಿಕಾ ಒಂದೊಂದು ಸಿನಿಮಾದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಇಷ್ಟ ಆಗಬಹುದು. ಆದರೆ ಅಭಿಮಾನಿಯೊಬ್ಬರಿಗೆ ರಾಧಿಕಾ ಸಿಗರೇಟ್ ಸೇದುವ ಫೋಟೋ ಇಷ್ಟವಾಗಿದೆ. ರಾಧಿಕಾ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಸಿಗರೇಟ್ ಸೇದುವ ಫೋಟೋವೊಂದನ್ನು ಅಭಿಮಾನಿ ಆಟೋರಿಕ್ಷಾ ಹಿಂಬದಿಯಲ್ಲಿ ಅಂಟಿಸಿಕೊಂಡಿದ್ದಾರೆ.
Advertisement
ಅಭಿಮಾನಿ ರಾಧಿಕಾ ಅವರ ಫೋಟೋ ಮೇಲೆ ‘ಐ ಲೈಕ್ ಯು’ ಅಂತ ಬರೆದುಕೊಂಡಿದ್ದಾರೆ. ಈ ಆಟೋ ನೋಡಿದ ರಾಧಿಕಾ, ಕೂಡಲೇ ಫೋಟೋ ಕ್ಲಿಕ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ `ನನ್ನ ಈ ಅವತಾರವನ್ನೂ ಇಷ್ಟಪಡುತ್ತೀರಿ ಅಂತಾದ್ರೆ ಧನ್ಯವಾದ’ ಎಂಬುದಾಗಿ ಬರೆದು ನಕ್ಕಿದ್ದಾರೆ.
Advertisement
ರಾಧಿಕಾ ಪಂಡಿತ್ ಅವರು ತಮ್ಮ ಇಂಥಹ ಫೋಟೋ ವೈರಲ್ ಆಗುತ್ತಿರುವುದನ್ನು ನೋಡಿ ನಕ್ಕು ಸುಮ್ಮನಾಗಿದ್ದಾರೆ.