ನವದೆಹಲಿ: ಟೀಂ ಇಂಡಿಯಾದ ಆಟಗಾರ ಶಿಖರ್ ಧವನ್ (Shikhar Dhawan) ದೇಶೀಯ ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ.
As I close this chapter of my cricketing journey, I carry with me countless memories and gratitude. Thank you for the love and support! Jai Hind! 🇮🇳 pic.twitter.com/QKxRH55Lgx
— Shikhar Dhawan (@SDhawan25) August 24, 2024
38 ವರ್ಷದ ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ವೃತ್ತಿ ಜೀವನದುದ್ದಕ್ಕೂ ಅವರಿಗೆ ಪ್ರೀತಿ ಮತ್ತು ಬೆಂಬಲ ನೀಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
Advertisement
ವಿಡಿಯೋದಲ್ಲಿ ಹೇಳಿದ್ದೇನು?
ಮೊದಲಿಗೆ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತಿದ್ದೇನೆ. ಭಾರತ ತಂಡವನ್ನು ಸೇರಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಸೇರಿದ ನಂತರ ಇಡೀ ತಂಡ, ಕುಟುಂಬ, ಅಭಿಮಾನಿಗಳಿಂದ ಬೆಂಬಲ ಸಿಕ್ಕಿತು. ಈಗ ವಿದಾಯ ಹೇಳುವ ಸಮಯ ಬಂದಿದೆ.
Advertisement
Advertisement
ನನ್ನ ದೇಶಕ್ಕಾಗಿ ನಾನು ಸಾಕಷ್ಟು ಆಡಿದ್ದೇನೆ ಎಂಬ ತೃಪ್ತಿ ನನಗಿದೆ. ನನಗೆ ಈ ಅವಕಾಶವನ್ನು ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCI) ಮತ್ತು ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಇಂಗ್ಲೆಂಡ್ ತಂಡದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಪುತ್ರ
Advertisement
ದೆಹಲಿಯಲ್ಲಿ ಡಿಸೆಂಬರ್ 5, 1985 ರಲ್ಲಿ ಜನಿಸಿದ ಶಿಖರ್ ಧವನ್ ಎಡಗೈ ಆಟಗಾರರಾಗಿ ಹಲವು ಬಾರಿ ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭಿಸಿದ್ದರು. 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಏಕದಿನಕ್ಕೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಶಿಖರ್ ಧವನ್ 2021ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.
167 ಏಕದಿನ ಪಂದ್ಯಗಳ 164 ಇನ್ನಿಂಗ್ಸ್‌ನಿಂದ 6,793 ರನ್ ಹೊಡೆದಿರುವ ಶಿಖರ್ ಧವನ್ 34 ಟೆಸ್ಟ್ ಪಂದ್ಯಗಳ 58 ಇನ್ನಿಂಗ್ಸ್‌ನಿಂದ 2,315 ರನ್ ಗಳಿಸಿದ್ದಾರೆ. 68 ಟಿ20 ಪಂದ್ಯಗಳಿಂದ 1,759 ರನ್ ಹೊಡೆದಿದ್ದಾರೆ.
2021ರ ಶ್ರೀಲಂಕಾ ಸರಣಿಯಲ್ಲಿ ಕೊನೆಯ ಟಿ20 ಮತ್ತು ಕೊನೆಯ ಏಕದಿನ ಪಂದ್ಯವಾಡಿದ್ದರು. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡಿದ್ದಾರೆ. ಆರಂಭಿಕ ಮತ್ತು ಮಧ್ಯಮ ಕ್ರಮಾಂಕದಲ್ಲಿ ಆಟಗಾರರ ಮಧ್ಯೆ ಈಗ ಭಾರೀ ಪೈಪೋಟಿ ಇರುವ ಕಾರಣ ನಂತರದ ದಿನಗಳಲ್ಲಿ ಶಿಖರ್ ಧವನ್ ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ.
2012ರಲ್ಲಿ ಆಸ್ಟ್ರೇಲಿಯಾದಲ್ಲಿರುವ ಆಯೇಷಾ ಅವರನ್ನು ಧವನ್ ಮದುವೆಯಾಗಿದ್ದರು. ಆಯೇಷಾಗೆ ಎರಡನೇ ಮದುವೆಯಾಗಿತ್ತು. ಪತ್ನಿಯಿಂದ ನಾನು ಮಾನಸಿಕ ಹಿಂಸೆಗೆ ಗುರಿಯಾಗಿದ್ದೇನೆ ಎಂದು ಹೇಳಿ ಶಿಖರ್ ಧವನ್ ವಿಚ್ಛೇದನ ಪಡೆದಿದ್ದರು.