ಬೆಂಗಳೂರು: ಬಿಬಿಎಂಪಿಯ ಥಣಿಸಂದ್ರದ ವಾರ್ಡ್ ಸದಸ್ಯೆ ಮೇಲೆ ಅವರ ಪತಿಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಥಣಿಸಂದ್ರದ ಮಮತಾ ಹಲ್ಲೆಗೊಳಗಾದ ಕಾರ್ಪೊರೇಟರ್. ಇವರ ಪತಿ ವೆಂಕಟೇಶ್ ಅಲಿಯಾಸ್ ಪಳನಿಯವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮಮತಾರವರನ್ನು ಖಾಸಗಿ ಆಸ್ಪತ್ರೆಗೆ ದಾಖಲುಮಾಡಲಾಗಿದೆ.
ಹಣಕಾಸಿನ ಹಾಗೂ ಆಸ್ತಿ ವಿಚಾರಕ್ಕೆ ದಂಪತಿ ನಡುವೆ ಹಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು, ಅಲ್ಲದೇ ಒಂದು ತಿಂಗಳ ಹಿಂದೆಯೂ ಸಹ ದಂಪತಿ ನಡುವೆ ಗಲಾಟೆ ನಡೆದಾಗ ಪೊಲೀಸ್ ಠಾಣೆಯಲ್ಲೇ ರಾಜಿ-ಪಂಚಾಯ್ತಿ ನಡೆದಿತ್ತು. ಇಂದು ಪುನಃ ದಂಪತಿ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಕುಪಿತಗೊಂಡ ಪತಿ ವೆಂಕಟೇಶ್ ಮಮತಾರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಘಟನೆ ಸಂಬಂಧ ಕೊತ್ತನೂರು ಠಾಣೆಯಲ್ಲಿ ಮಮತಾರವರು ಪತಿ ವಿರುದ್ಧ ದೂರು ದಾಖಲಿಸಿದ್ದಾರೆ.
https://www.youtube.com/watch?v=lor92Qn3hjI