ವಿಜಯ್ (Vijay) ಈಗ ರಾಜಕೀಯ ಭಾಷಣದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನವಾಣೆಯನ್ನು (Tamil Nadu Election) ಗುರಿಯಾಗಿಸಿಕೊಂಡಿರುವ ವಿಜಯ್ ರಾಜ್ಯದ ಪ್ರಚಾರವನ್ನೂ ಮಾಡುತ್ತಿದ್ದಾರೆ. ಜನ ಸಂಘಟನೆ ಗುರಿಯಾಗಿಸಿಕೊಂಡಿರುವ ವಿಜಯ್‌ಗೆ ಈಗ ಸಿನಿಮಾ ಬಗ್ಗೆ ಯೋಚನೆ ಇಲ್ಲ. ಆದರೆ ದೀಪಾವಳಿಗೆ (Deepavali) ಅಭಿಮಾನಿಗಳಿಗೆ ʼಗಿಫ್ಟ್ʼ ನೀಡಲಿದ್ದಾರೆ.
ಮುಂದಿನ ವರ್ಷಾರಂಭದಲ್ಲೇ ವಿಜಯ್ ಜನನಾಯಕನ್ (Jana Nayagan) ಚಿತ್ರದ ಮೂಲಕ ಚಿತ್ರಮಂದಿರಗಳನ್ನು ಅಲಂಕರಿಸಲಿದ್ದಾರೆ. ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಡಿಸೆಂಬರ್ 27 ರಂದು ಮಲೇಶಿಯಾದಲ್ಲಿ ಏರ್ಪಡಿಸೋದಕ್ಕೆ ಯೋಜನೆಯೂ ಆಗಿದೆ. ಅದಕ್ಕೂ ಮುನ್ನ ವಿಜಯ್ ಕಡೆಯಿಂದ ಅಭಿಮಾನಿಗಳಿಗೆ ಬಂಪರ್ ಗಿಫ್ಟ್, ಸರ್ಪ್ರೈಸ್ ಆಗಿ ಪ್ಲ್ಯಾನ್ ಆಗಿದೆ ಎಂಬ ಸುದ್ದಿ ಕೇಳಿಬಂದಿದೆ. ಇದನ್ನೂ ಓದಿ: ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ರಾಣಿ ಮುಖರ್ಜಿ ಕತ್ತಲ್ಲಿ ಮಗಳ ಹೆಸರಿನ ಚೈನ್
ಟಿವಿಕೆ ಹೆಸರಲ್ಲಿ ಹೊಸ ಪಕ್ಷ ಕಟ್ಟಿರುವ ವಿಜಯ್ ಪಕ್ಷ ಸಂಘಟನೆಯಲ್ಲಿ ತೊಡಗಿರುವ ವೇಳೆಯೇ ಸಿನಿಮಾ ಅಭಿಮಾನಿಗಳನ್ನು ಬ್ಯಾಲೆನ್ಸ್ ಮಾಡಲು ವಿಜಯ್ ಇದೇ ದೀಪಾವಳಿಗೆ ಮುಂಬರುವ `ಜನನಾಯಕನ್’ ಚಿತ್ರದ ಮೊದಲ ಹಾಡನ್ನ ರಿಲೀಸ್ ಮಾಡಲಿದ್ದಾರೆ. ವಿಶೇಷ ಅಂದ್ರೆ ಇದು ವಿಜಯ್ ಧ್ವನಿಯಲ್ಲೇ ಮೂಡಿ ಬಂದಿದೆ. ಇದನ್ನೂ ಓದಿ: ಭೈರಪ್ಪ 3 ತಿಂಗಳಿನ ಹಿಂದೆ ಡಿಸ್ಟಾರ್ಜ್ ಆಗಿ 3 ದಿನದ ಹಿಂದೆ ಅಡ್ಮಿಟ್ ಆಗಿದ್ರು: ಡಾ. ಶೈಲಾ
ಮಾಸ್ ಪ್ರೇಕ್ಷಕರ ಮಹಾನಟ ವಿಜಯ್ ಫ್ಯಾನ್ಸ್‌ಗಾಗಿ ಈ ಟ್ರೀಟ್ ಕೊಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ಈ ವಿಚಾರವಾಗಿ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಮಾಣ ಸಂಸ್ಥೆ ಕಡೆಯಿಂದ ಅಧಿಕೃತವಾಗಿ ಪ್ರಕಟವಾಗಲಿದೆ.