ದಳಪತಿ ವಿಜಯ್- ಸಂಗೀತಾ ಡಿವೋರ್ಸ್ ವಿಚಾರ ನಿಜಾನಾ? ಇಲ್ಲಿದೆ ಸಾಕ್ಷಿ

Public TV
2 Min Read
VIJAY

ಳಪತಿ ವಿಜಯ್ (Thalapathy Vijay) ವಿಚ್ಛೇದನದ (Divorce) ವದಂತಿ ಕಳೆದ ನಾಲ್ಕೈದು ತಿಂಗಳ ಹಿಂದೆ ಭಾರೀ ಚರ್ಚೆಯಲ್ಲಿದ್ದ ವಿಷಯ. ಇದೀಗ ಆ ವದಂತಿಗೆ ತುಪ್ಪ ಸುರಿಯೋ ಥರ ಘಟನೆಯೊಂದು ನಡೆದಿದೆ. ಮಕ್ಕಳ ಸಮೇತ ಲಂಡನ್‌ಗೆ ತೆರಳಿದ್ದಾರೆ ಎನ್ನಲಾದ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಚೆನೈನಲ್ಲೇ ವಿಜಯ್ ಪತ್ನಿ ಸಂಗೀತಾ ಪ್ರತ್ಯಕ್ಷವಾಗಿದ್ದಾರೆ..? ಯಾರ್ ಜೊತೆ, ಎಲ್ಲಿ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

VIJAY 1

ದಳಪತಿ ವಿಜಯ್…ಕಾಲಿವುಡ್ ಸಿನಿ ಪ್ರೇಮಿಗಳ ಆರಾಧ್ಯ ದೈವ. ವಿಜಯ್ ಸಿನಿಮಾಗಳು ಬಂತಂದ್ರೆ ಅಕ್ಷರಶಃ ಜಾತ್ರೆಯೇ ನಡೆಯುತ್ತೆ… ತಾನಾಯ್ತ ತನ್ನ ಕುಟುಂಬವಾಯ್ತು ಎಂದಿದ್ದ ವಿಜಯ್ ವೈಯಕ್ತಿಕ ಜೀವನ ಕಳೆದ ಎರಡ್ಮೂರು ತಿಂಗಳ ಹಿಂದೆ ಭಾರೀ ಚರ್ಚೆಗೆ ಬಂತು. ಕಾರಣ ವಿಜಯ್ ಪತ್ನಿ ಜೊತೆ ವಿಚ್ಛೇದನ ಪಡೆದಿದ್ದಾರೆ ಅನ್ನೋದೇ ಕಾಲಿವುಡ್‌ನ ಗಲ್ಲಿ ಗಲ್ಲಿಯಲ್ಲಿ ಗುಸು ಗುಸು ಚರ್ಚೆಯಾಗುತ್ತಿದ್ದ ವದಂತಿ. ಇದನ್ನೂ ಓದಿ:ನಟನೆ ಜೊತೆಗೆ ನಿರ್ದೇಶನಕ್ಕಿಳಿದ ʼಗರುಡ’ ಖ್ಯಾತಿಯ ಸಿದ್ದಾರ್ಥ್ ಮಹೇಶ್

dalapathi vijay 3

ವಿಜಯ್ ಸಂಗೀತಾ ವಿಚ್ಛೇದನ ವದಂತಿಗೆ ಸಾಕ್ಷಿ ಅನ್ನೋ ಥರ ಘಟನೆಗಳೆಲ್ಲಾ ನಡೆದ್ವು… ಕಾರಣ ಯಾವುದೇ ಕಾರ್ಯಕ್ರಮದಲ್ಲೂ ಪತ್ನಿ ಜೊತೆ ವಿಜಯ್ ಕಾಣಿಸ್ಕೊಂಡಿರಲಿಲ್ಲ…ಹಿಂದೆಲ್ಲಾ ಸಿನಿಮಾದ ಆಡಿಯೋ ರಿಲೀಸ್ ಟ್ರೈಲರ್ ರಿಲೀಸ್ ಕಾರ್ಯಕ್ರಮಗಳಿಗೆಲ್ಲಾ ವಿಜಯ್ ಜೊತೆ ಮುದ್ದು ಮಡದಿ ಸಂಗೀತಾ ಇರ್ತಿದ್ರು. ಆದರೆ ಇತ್ತೀಚೆಗಿನ ವಿಜಯ್ ನಡವಳಿಕೆ ಪತ್ನಿ ಸಂಗೀತಾರಿಂದ ದೂರಾಗಿದ್ದಾರೆನ್ನುವುದನ್ನ ಸಾಬೀತು ಪಡಿಸುವಂತಿತ್ತು.

thalapathy vijay 2

ವಿಜಯ್ ಸಂಗೀತಾ ವಿಚ್ಛೇದನದ ವದಂತಿ ನಡುವೆಯೇ ಸಂಗೀತಾ ಈಗ ಚೆನೈನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಅದೂ ಒಂದು ಸಿನಿಮಾ ಸಲುವಾಗಿ ಅನ್ನೋದೇ ವಿಶೇಷ. ಚೆನೈನ ಥಿಯೇಟರ್‌ವೊಂದಕ್ಕೆ ಸಂಗೀತಾ ಚಿತ್ರ ನೋಡಲು ಆಗಮಿಸಿದ್ದರು. ಅಂಗರಕ್ಷಕರು ಸುತ್ತುವರೆದಿದ್ರು. ಮಾಸ್ಕ್ ಧರಿಸಿದ್ರು ಸಂಗೀತಾ…ಆದರೂ ವಿಜಯ್ ಪತ್ನಿಯನ್ನ ಗುರುತು ಹಿಡಿಯುವುದು ಕಷ್ಟವೇ ಹೇಳಿ. ಹೀಗೆ ಎಲ್ಲರ ಕಣ್ಣುಮುಚ್ಚಿ ನಡೆದುಬಂದಿದ್ದೇ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

VIJAY

ವಿಜಯ್ ಪತ್ನಿ ಸಂಗೀತಾ ಪತಿಯಿಂದ ದೂರಾಗಿ ಇಬ್ಬರ ಮಕ್ಕಳ ಜೊತೆ ಲಂಡನ್‌ಲ್ಲಿ(London) ನೆಲೆಸಿದ್ದಾರೆ ಎನ್ನಲಾಗಿತ್ತು. ಮಾತಿಗೆ ಒತ್ತು ಕೊಡುವಂತೆ ಸಂಗೀತಾ ಕಳೆದ ನಾಲ್ಕೈದು ತಿಂಗಳಿಂದ ಸಾರ್ವಜನಿಕಾವಾಗಿ ಕಾಣಿಸ್ಕೊಂಡಿರಲಿಲ್ಲ. ವಿಜಯ್ ಜೊತೆ ಕಾಣಿಸ್ಕೊಳ್ಳೋದಿರಲಿ ಸಿಂಗಲ್ ಆಗಿಯೂ ಎಲ್ಲಿಯೂ ಪ್ರತ್ಯಕ್ಷವಾಗಿರಲಿಲ್ಲ. ಆದರೆ ಇದೀಗ ಶಿವಕಾರ್ತಿಕೇಯನ್ ಅಭಿನಯದ ಮಾವೀರನ್ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಲು ಸಂಗೀತಾ ಆಗಮಿಸಿದ್ರು. ಶಿವಕಾರ್ತಿಕೇಯನ್ (Sivakarthikeyan) ಪತ್ನಿ ಆರತಿ ಜೊತೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಅಲ್ಲಿಗೆ ವಿಜಯ್ ಪತ್ನಿ ಸಿಂಗಲ್ ಆಗಿ ಬಂದು ಸಿನಿಮಾ ನೋಡಿರೋ ಸಂಗತಿ ವದಂತಿಗೆ ತುಪ್ಪ ಸುರಿದಂತಾಗಿದೆ.

ಒಂದಂತೂ ನಿಜವಾಗಿದೆ..ಸಂಗೀತಾ ಚೆನೈನಲ್ಲೇ ಇದ್ದಾರೆ…ಇದರಿಂದ ಅನುಮಾನ ಡಬಲ್ ಆಗುತ್ತಿದೆ. ಚೆನೈನಲ್ಲೇ ಇದ್ದರೂ ಇಲ್ಲಿಯವರೆಗೆ ಸಂಗೀತಾ ಏಕೆ ಕಾಣಿಸ್ಕೊಂಡಿರಲಿಲ್ಲ. ವಿಚ್ಛೇದನದ ಸುದ್ದಿ ಭಾರೀ ಮುನ್ನಲೆಗೆ ಬಂದಿದ್ದರೂ ಪತಿ- ಪತ್ನಿ ಮಾತನಾಡದಿದ್ದರೂ ನೋಟದಲ್ಲಾದ್ರೂ ತೋರಿಸಬಹುದಿತ್ತು. ಆದರೆ ಏಕಾಏಕಿ ದಳಪತಿ ಪತ್ನಿಯ ಈ ಎಂಟ್ರಿ ಅನುಮಾನ ಹೆಚ್ಚಿಸುತ್ತಿದೆ. ಎನೇ ಆಗ್ಲಿ ಸಂಸಾರ ಚೆನ್ನಾಗಿರಲಿ ಎಂಬುದೇ ದಳಪತಿ ಫ್ಯಾನ್ಸ್ ಕೋರಿಕೆ.

Share This Article