ತಮಿಳಿನ ಸ್ಟಾರ್ ನಟ ವಿಜಯ್ ದಳಪತಿ (Vijay Thalapathy) ಕೊನೆಯ ಸಿನಿಮಾ ಕುರಿತು ಇದೀಗ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾದಲ್ಲಿ ವಿಜಯ್ ಕಡೆಯದಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಬಾಬಿ ಡಿಯೋಲ್ (Bobby Deol) ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಹೀರೋ ಆದ ‘ಶ್ರೀಗೌರಿ’ ಸೀರಿಯಲ್ ವಿಲನ್- ‘ಪೀಟರ್’ ಚಿತ್ರಕ್ಕೆ ಡಾಲಿ, ವಿಜಯ್ ಸೇತುಪತಿ ಸಾಥ್
- Advertisement -
ವಿಜಯ್ ನಟನೆಯ 69ನೇ ಸಿನಿಮಾದಲ್ಲಿ ‘ಅನಿಮಲ್’ (Animal) ಖ್ಯಾತಿಯ ನಟ ಬಾಬಿ ಡಿಯೋಲ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟನನ್ನು ಚಿತ್ರತಂಡ ಸಂಪರ್ಕಿಸಿದೆ. ವಿಜಯ್ ಸಿನಿಮಾದಲ್ಲಿ ನಟಿಸುವ ಕುರಿತು ಬಾಬಿ ಡಿಯೋಲ್ ಜೊತೆ ಒಂದು ಹಂತದ ಮಾತುಕತೆಯಾಗಿದ್ದು, ಕಥೆ ಮತ್ತು ಪಾತ್ರದ ಕುರಿತು ಚರ್ಚೆಯಾಗಿದೆ ಎನ್ನಲಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.
- Advertisement -
- Advertisement -
ಅಂದಹಾಗೆ, ‘ದಳಪತಿ 69’ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್ ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ಸಂಭಾವನೆ.
- Advertisement -
ಇನ್ನೂ ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ ‘ದಿ ಗೋಟ್’ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.
2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸಿ ಕೊಡಬೇಕಾಗಿದೆ. ಹೀಗಾಗಿ ಶೀಘ್ರದಲ್ಲೇ ‘ದಳಪತಿ 69’ ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿ ಇದೆ. ಇನ್ನು ವಿಜಯ್ ಪಡೆದುಕೊಳ್ತಿರುವ 275 ಕೋಟಿ ಸಂಭಾವನೆ ಸುದ್ದಿಯಂತೂ ಇನ್ನುಳಿದ ಸ್ಟಾರ್ ನಟರಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿಯವರೆಗೆ 200 ಕೋಟಿ ಸಂಭಾವನೆಯನ್ನ ಭಾರತದಲ್ಲಿ ಸ್ಟಾರ್ ನಟರು ನೇರವಾಗಿ ಪಡೆದಿರಲಿಲ್ಲ. ಶೇರ್ ರೂಪದಲ್ಲಿ ಬಂದಿರೋ ಆದಾಯದಲ್ಲಿ ಲೆಕ್ಕ ಚುಕ್ತಾ ಮಾಡಿಕೊಳ್ತಿದ್ದರು. ಅದನ್ನೇ ಸಂಭಾವನೆಯಾಗಿ ಲಾಭ ಗಳಿಸಿಸುತ್ತಿದ್ದ ಹಲವರು ನಟರ ಉದಾಹರಣೆ ಇದೆ. ಆದರೆ ಈಗ ವಿಜಯ್ ಭರ್ತಿ 275 ಕೋಟಿ ಮೊತ್ತದ ರೂಪದಲ್ಲೇ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೀಡು ಮಾಡಿದೆ.