ರಜನಿಕಾಂತ್ (Rajanikanth) ಗರಂ ಆಗಿದ್ದಾರೆ. ಅದು ಬೇರಾರ ವಿರುದ್ಧವೂ ಅಲ್ಲ. ದಿ ಗ್ರೇಟ್ ಡೈರೆಕ್ಟರ್ ಲೋಕೇಶ್ ಕನಕರಾಜ್ (Lokesh Kanagaraj) ವಿರುದ್ಧ. ‘ವಿಕ್ರಮ್’ನಂತ (Vikram) ಸೂಪರ್ ಹಿಟ್ ಕೊಟ್ಟ ಲೋಕೇಶ್ ಅವರು ಈಗ ತಲೈವಾ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಮುಂದಿನ ತಿಂಗಳೇ ಶೂಟಿಂಗ್ ಆರಂಭ. ಈ ಹೊತ್ತಲ್ಲಿ ತಲೈವ, ಕತೆ ಬದಲಾವಣೆ ಮಾಡಿ ಎಂದಿದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ.
ರಜನಿಕಾಂತ್ ಅಷ್ಟು ಬೇಗ ಎಲ್ಲವನ್ನೂ ಒಪ್ಪಲ್ಲ. ಈಗಾಗಲೇ ಕೆಲವು ಸಿನಿಮಾಗಳನ್ನು ಯಾರದ್ದೋ ಮುಲಾಜಿಗೆ ಬಿದ್ದು ನಟಿಸಿದ್ದಾರೆ. ಅದರಿಂದ ಸೋಲಿನ ನೋವು ಕೂಡ ತಿಂದಿದ್ದಾರೆ. ಫೆ.9ರಂದು ರಿಲೀಸ್ ಆಗಿರೋ ‘ಲಾಲ್ ಸಲಾಂ’ (Lal Salam) ಮಕಾಡೆ ಮಲಗಿದೆ. ಅಫ್‌ಕೋರ್ಸ್ ಇದರಲ್ಲಿ ಅವರು ಅತಿಥಿ ನಟ. ಹೀಗಿರುವಾಗ ಲೋಕೇಶ್ ಜೊತೆ ಮಾಡುತ್ತಿರುವ ಚಿತ್ರಕ್ಕೆ ಕೊನೇ ಗಳಿಗೆಯಲ್ಲಿ ಕತೆ ಬದಲಿಸಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ ತಲೈವಾ. ಅದಕ್ಕಾಗಿ ಹೊಸ ತಂಡ ಕಟ್ಟಿ ಇದ್ದ ಕತೆಯಲ್ಲೇ ಮುಖ್ಯ ಬದಲಾವಣೆ ಮಾಡುತ್ತಿದ್ದಾರೆ ಡೈರೆಕ್ಟರ್ ಲೋಕೇಶ್. ಕಾರಣ ಮೊದಲಿದ್ದ ಕತೆಯಲ್ಲಿ ಸಿಕ್ಕಾಪಟ್ಟೆ ಹಿಂಸಾತ್ಮಕ ದೃಶ್ಯ ಮತ್ತು ರಕ್ತಪಾತ ಇತ್ತು. ಅದನ್ನು ಕಮ್ಮಿ ಮಾಡಿ ಎಂದು ನಿರ್ದೇಶಕರಿಗೆ ತಲೈವಾ ಕಿವಿಹಿಂಡಿದ್ದಾರೆ.
- Advertisement
- Advertisement
ಲೋಕೇಶ್ ಸಿನಿಮಾಗಳಲ್ಲಿ ಹಿಂಸೆ, ಡ್ರಗ್ಸು ಇತ್ಯಾದಿ ಅಂಶ ಹೆಚ್ಚಾಗಿರುತ್ತವೆ. ಅದಕ್ಕಾಗಿ ಮೊದಲೇ ರಜನಿ ಕಂಡೀಷನ್ ಹಾಕಿದ್ದರು. ಲೋಕೇಶ್ ಕೂಡ ಇದರಲ್ಲಿ ಡ್ರಗ್ಸ್ ಎಳೆ ಇರುವುದಿಲ್ಲ ಎಂದಿದ್ದರು. ಅದಕ್ಕೆ ರಜನಿಕಾಂತ್ ಮುಂಚೆಯೇ ಎಚ್ಚರಿಕೆ ನೀಡಿದ್ದಾರೆ. ತಲೈವಾ ಮಾತಿಗೆ ಲೋಕೇಶ್ ಓಕೆ ಎಂದಿದ್ದಾರೆ. ಇನ್ನೇನು ಏಪ್ರಿಲ್ ತಿಂಗಳಲ್ಲಿ ಸಿನಿಮಾ ಶುರು. ‘ಲಿಯೋ’ದಲ್ಲಿ ಯಾಕೋ ಲೋಕೇಶ್ ಎಡವಿದ್ದರು.
ಇದೀಗ ತಲೈವಾ ಸಲಹೆಯನ್ನು ಲೋಕೇಶ್ ಯಾವ ರೀತಿ ತೆಗೆದುಕೊಂಡು ಸಿನಿಮಾ ಸರಿದೂಗಿಸಿಕೊಂಡು ಹೋಗ್ತಾರೆ. ‘ತಲೈವರ್ 171’ ಚಿತ್ರದ ಮೂಲಕ ರಜನಿಕಾಂತ್ ಮತ್ತು ಲೋಕೇಶ್ ಇಬ್ಬರಿಗೂ ಸಕ್ಸಸ್ ಸಿಗುತ್ತಾ ಕಾದುನೋಡಬೇಕಿದೆ.