ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಮತ್ತು ಚೆನ್ನೈನಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ, ನಟ ವಿಕ್ರಮ್ ಅವರೊಂದಿಗೆ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಕ್ಲಬ್‍ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಫೋಟೋದಲ್ಲಿ ನಟ ವಿಕ್ರಮ್ ಹಾಗೂ ಎಂಎಸ್ ಧೋನಿ ಒಟ್ಟಿಗೆ ನಿಂತು ಪೋಸ್ ನೀಡುತ್ತಿದ್ದಾರೆ. ಈ ಫೋಟೋ ಭಾರೀ ವೈರಲ್ ಆಗಿದೆ.
View this post on Instagram
ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ವಿಕ್ರಮ್ ಅವರು ಬಾಲಿವುಡ್‍ನ ರಾವಣ ಚಿತ್ರದಲ್ಲಿ ನಟಿಸಿದ್ದರು. ವಿಕ್ರಮ್ ಅವರು ಮಹೇಂದ್ರಸಿಂಗ್ ಧೋನಿಯ ಅಭಿಮಾನಿಯಾಗಿದ್ದಾರೆ. ವಿಕ್ರಮ್ ಅವರ ಮಹಾನ್ ಚಿತ್ರದ ಟೀಸರ್ ಬಿಡುಗಡೆಯಾದ ದಿನದಂದು ಭೇಟಿಯಾಗಿದ್ದಾರೆ. ಇದನ್ನೂ ಓದಿ: ಖ್ಯಾತ ಯೂಟ್ಯೂಬರ್ ಹಿಂದೂಸ್ತಾನಿ ಭಾವು ಅರೆಸ್ಟ್
ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮುಂಬರುವ ಐಪಿಎಲ್ 2022 ರ ಮೆಗಾ ಹರಾಜಿಗೆ ತಯಾರಿ ನಡೆಸಲು ಧೋನಿ ಪ್ರಸ್ತುತ ಚೆನ್ನೈನಲ್ಲಿದ್ದಾರೆ. ಈ ಬಾರಿಯ ಐಪಿಎಲ್ ಟೀಂನಲ್ಲಿ ಚೈನ್ನೈ ಸೂಪರ್‍ಕಿಂಗ್ಸ್ ಧೋನಿ, ರವೀಂದ್ರ ಜಡೇಜಾ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡಿದೆ. ಇದನ್ನೂ ಓದಿ: ಒಡಿಶಾದ ಕೋವಿಡ್ ಸೋಂಕಿತ ಸರ್ಕಾರಿ ನೌಕರರಿಗೆ ಒಂದು ವಾರ ರಜೆ