ಬ್ಯಾಂಕಾಕ್: ಕೊರೊನಾ ವೈರಸ್ ಭೀತಿಯಿಂದ ಹೋಂ ಕ್ವಾರಂಟೈನ್‍ನಲ್ಲಿರುವವರು ತಮ್ಮ ಮನೆಯವರಿಂದಲೇ ದೂರ ಒಂದು ರೂಮಿನಲ್ಲಿದ್ದಾರೆ. ಆದರೆ ಥೈಲ್ಯಾಂಡ್ ಮಹಾರಾಜ ಭವ್ಯವಾದ ಹೋಟೆಲ್‍ನಲ್ಲಿ ಅದರಲ್ಲೂ ಜೊತೆಗೆ 20 ಮಹಿಳೆಯರ ಜೊತೆ ಐಸೋಲೇಶನ್‍ನಲ್ಲಿದ್ದಾರೆ ಎಂದು ವರದಿಯಾಗಿದೆ.
ರಾಜ ಮಹಾ ವಾಜಿರಲಾಂಗ್ ಕಾರ್ನ್ ಕೊರೊನಾ ವೈರಸ್ ಸಮಯದಲ್ಲಿ ತನ್ನ ದೇಶವನ್ನು ಬಿಟ್ಟು ಜರ್ಮನಿಗೆ ಹೋಗಿದ್ದಾರೆ. ಕೊರೊನಾದಿಂದ ಯಾರೂ ಕೂಡ ಮನೆಯಿಂದ ಹೊರ ಬರುತ್ತಿಲ್ಲ. ಆದರೆ ರಾಜ ಮಾತ್ರ ಪ್ರತ್ಯೇಕವಾಗಿ ಜರ್ಮನಿಗೆ ಹೋಗಿ ಐಸೋಲೇಶನ್‍ನಲ್ಲಿದ್ದಾರೆ. ಬವೇರಿಯಾದ ಐಷಾರಾಮಿ ಹೋಟೆಲ್‍ನಲ್ಲಿ ಉಳಿದಿದ್ದಾರೆ. ಅಲ್ಲದೇ ಇಡೀ ಹೋಟೆಲ್ ಅನ್ನು ರಾಜನೇ ಕಾಯ್ದಿರಿಸಿದ್ದಾರೆ. ಈ ವಾಸ್ತವ್ಯಕ್ಕಾಗಿ ಅವರು ಜಿಲ್ಲಾ ಕೌನ್ಸಿಲ್‍ನಿಂದ ವಿಶೇಷ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.
Advertisement
Advertisement
ಆಶ್ಚರ್ಯಕರ ವಿಚಾರವೆಂದರೆ ರಾಜನ ಜೊತೆಗೆ 20 ಮಹಿಳೆಯರು ಸಹ ಈ ಹೋಟೆಲ್‍ನಲ್ಲಿ ಉಳಿದಿದ್ದಾರೆ. ಅಷ್ಟೇ ಅಲ್ಲದೇ ರಾಜ ಹೆಚ್ಚಿನ ಸಂಖ್ಯೆಯ ಸೇವಕರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ರಾಜನ 4ನೇ ಪತ್ನಿ ಹೋಟೆಲ್‍ನಲ್ಲಿ ಇದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ರಾಜ ಜರ್ಮನಿಯಲ್ಲಿ ವಾಸ್ತವ್ಯ ಮಾಡಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ, ಥೈಲ್ಯಾಂಡ್ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಥೈಲ್ಯಾಂಡ್‍ನಲ್ಲಿ ರಾಜನನ್ನು ಟೀಕಿಸಿದ್ದಕ್ಕಾಗಿ 15 ವರ್ಷಗಳ ಜೈಲು ಶಿಕ್ಷೆ ಇದೆ. ಆದರೂ ‘ನಮಗೆ ರಾಜ ಏಕೆ ಬೇಕು?’ ಎಂದು ಟ್ವಿಟ್ಟರಿನಲ್ಲಿ ರಾಜನನ್ನು ಟೀಕೆ ಮಾಡಲಾಗುತ್ತಿದೆ.
Advertisement
ಇದುವರೆಗೂ ಥೈಲ್ಯಾಂಡ್‍ನಲ್ಲಿ 1,524ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ರೋಗಿಗಳು ಕಂಡುಬಂದಿದ್ದಾರೆ. ಇಲ್ಲಿಯವರೆಗೂ ಒಂಭತ್ತು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ವಜಿರಲೊಂಗ್ ಕಾರ್ನ್ ಅವರಿಗೆ ಈ ಹಿಂದೆಯೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 2019 ರಲ್ಲಿ 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದರು.