ಚಿಯಾಂಗ್ ರಾಯ್: ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ ಸದ್ಯ 6 ಬಾಲಕರನ್ನು ರಕ್ಷಣೆ ಮಾಡಲಾಗಿದೆ.
ಜೂನ್ 26ರಂದು ಕೋಚ್ ಸೇರಿದಂತೆ ಫುಟ್‍ಬಾಲ್ ಜೂನಿಯರ್ ತಂಡ 12 ಬಾಲಕರು ಗುಹೆ ಸೇರಿದ್ದರು. ಕಳೆದ 14 ದಿನಗಳಿಂದ ಕೋಚ್ ಹಾಗೂ ಬಾಲಕರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗಿದ್ದು, ಸದ್ಯ 6 ಬಾಲಕರು ಜೀವಂತವಾಗಿ ಸಿಕ್ಕಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ನಡೆದಿದ್ದು ಏನು?
ಕೋಚ್ ಸಮೇತ ತಂಡದ ಎಲ್ಲಾ ಆಟಗಾರರು ಕಾಡಿನಲ್ಲಿ ಸುತ್ತಾಡಲು ಹೋದಾಗ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಪ್ರವಾಸದ ವೇಳೆ ಬೃಹತ್ ಗುಹೆಯೊಳಗೆ ಪ್ರವೇಶ ಪಡೆದಿದ್ದ ಆಟಗಾರರು ಬಳಿಕ ಉಂಟಾದ ಪ್ರವಾಹದಿಂದ ಕೊಚ್ಚಿ ಹೋಗಿದ್ದರು. ಘಟನೆ ಬೆಳಕಿಗೆ ಬಂದ ನಂತರ ಅಲ್ಲಿನ ಸರ್ಕಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಸತತ 9 ದಿನಗಳ ಕಠಿಣ ಕಾರ್ಯಾಚರಣೆಯ ಬಳಿಕ ಎಲ್ಲರನ್ನು ಒಟ್ಟಾಗಿ ರಕ್ಷಣೆ ಮಾಡಿದ್ದಾರೆ. ಕಾರ್ಯಾಚರಣೆಗೆ ಬ್ರಿಟಿಷ್ ಗುಹಾ ಮುಳುಗು ತಜ್ಞರನ್ನು ಬಳಕೆ ಮಾಡಿಕೊಳ್ಳಲಾಗಿತ್ತು.
Advertisement
ಕಾಣೆಯಾದ ಆಟಗಾರರು 9 ದಿನಗಳ ಆಹಾರವಿಲ್ಲದೇ ಪರದಾಟ ನಡೆಸಿದ್ದು, ಆದರೆ ಎಲ್ಲರೂ ಒಟ್ಟಿಗೆ ಪ್ರಯಾಣ ನಡೆಸಿದ್ದರು. ಆಟಗಾರರು ಪ್ರವಾಸ ತೆರಳಿದ ಬಳಿಕ ಪ್ರವಾಹವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮೊದಲು ಗುಹೆಯಲ್ಲಿ ಕಾರ್ಯಾಚರಣೆ ನಡೆಸಲು ಅಡ್ಡಿಯಾಗಿದ್ದ ನೀರನ್ನು ಹೊರಹಾಕಿದ ರಕ್ಷಣಾ ಸಿಬ್ಬಂದಿ ಬಳಿಕ ಗುಹೆಯೊಳಗೆ ಪ್ರವೇಶಿಸಿದ್ದರು.
Advertisement
ಸದ್ಯ ಈ ಕುರಿತು ವಿಡಿಯೋವನ್ನು ಸಲ್ಲಿನ ಸರ್ಕಾರ ಬಿಡುಗಡೆ ಮಾಡಿದ್ದು ರಕ್ಷಣೆ ಮಾಡಿರುವ ಎಲ್ಲಾ ಆಟಗಾರಿಗೆ ಆಹಾರ ಹಾಗೂ ಆಮ್ಲಜನಕ ಪೂರೈಸಿ ಬಳಿಕ ಹೊರ ತಂದಿದೆ.
Advertisement
ಆರಂಭದಲ್ಲಿ ಈ ಕಾರ್ಯಾಚರಣೆ ವಿಫಲವಾಗುತ್ತದೆ ಎಂದೇ ಹಲವರು ವಿಶ್ಲೇಷಿಸಿದ್ದರು. ಆಟಗಾರರು ನಾಪತ್ತೆಯಾದ ಬಳಿಕ ಆ ಪ್ರದೇಶದಲ್ಲಿ ಪ್ರತಿದಿನವೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿತ್ತು. ಸದ್ಯ ಆಟಗಾರರ ರಕ್ಷಣೆಯಿಂದ ಪೋಷಕರು ಆತಂಕದಿಂದ ದೂರವಾಗಿದ್ದು, ಸಂತಸ ವ್ಯಕ್ತಪಡಿಸಿದ್ದರು.