ಬ್ಯಾಂಕಾಕ್: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ವ್ಯಕ್ತಿಯೋರ್ವ ಕುಡಿದ ನಶೆಯಲ್ಲಿ ತನ್ನ ಇಬ್ಬರು ಮಕ್ಕಳು ಸೇರಿ ಒಟ್ಟು 6 ಮಂದಿಗೆ ಗುಂಡಿಕ್ಕಿ ಕೊಂದು, ಕೊನೆಗೆ ತಾನು ಗುಂಡು ಹೊಡೆದುಕೊಂಡು ಮೃತಪಟ್ಟ ಅಮಾನವೀಯ ಘಟನೆ ಥೈಲ್ಯಾಂಡ್‍ನ ದಕ್ಷಿಣ ಪ್ರಾಂತ್ಯದ ಚುವ್ಫೋನ್‍ನಲ್ಲಿ ಮಂಗಳವಾರ ನಡೆದಿದೆ.
ಸುಚೀಪ್ ಸಾನ್ರ್ಸುಂಗ್ ಎಂಬ ವ್ಯಕ್ತಿ ಕುಡಿದ ನಶೆಯಲ್ಲಿ ತನ್ನ ಕುಟುಂಬದವರನ್ನೇ ಗುಂಡಿಕ್ಕಿ ಕೊಂದಿದ್ದಾನೆ. ಹೊಸ ವರ್ಷದ ಸಂಭ್ರಮವನ್ನು ಆಚರಿಸಲು ಸುಚೀಪ್ ತನ್ನ ಮಕ್ಕಳು ಹಾಗೂ ಪತ್ನಿಯ ಜೊತೆಗೆ ಆಕೆಯ ತವರು ಮನೆಗೆ ತೆರಳಿದ್ದನು. ಈ ವೇಳೆ ಪತ್ನಿ ಮನೆಯವರು ತನ್ನನ್ನು ಸರಿಯಾಗಿ ಬರಮಾಡಿಕೊಳ್ಳಲಿಲ್ಲ ಎಂದು ಸುಚೀಪ್ ಕೋಪಗೊಂಡಿದ್ದನು. ಇದನ್ನೂ ಓದಿ: 15 ಸೆಕೆಂಡ್‍ನಲ್ಲಿ ಹೋಯ್ತು ಮೂವರ ಪ್ರಾಣ-ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಅದೇ ಕೋಪಕ್ಕೆ ಕಂಠ ಪೂರ್ತಿ ಕುಡಿದಿದ್ದ ಸುಚೀಪ್ ನಶೆಯಲ್ಲಿ ತನ್ನ 9 ವರ್ಷದ ಮಗ ಹಾಗೂ 6 ವರ್ಷದ ಮಗಳಿಗೆ ಗುಂಡಿಕ್ಕಿ ಕೊಂದಿದ್ದಾನೆ. ಆಗ ತಡೆಯಲು ಬಂದ ಪತ್ನಿಯ ಇಬ್ಬರು ಸಹೋದರರು ಹಾಗೂ ಇಬ್ಬರು ಮಹಿಳೆಯರಿಗೂ ಗುಂಡು ಹೊಡೆದು ಸಾಯಿಸಿದ್ದಾನೆ. ತದನಂತರ ತಾನು ಕೂಡ ಅದೇ ಗನ್‍ನಿಂದ ಗುಂಡು ಹಾರಿಸಿಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯಲ್ಲಿ ಪಾರ್ಟಿ ಮುಗಿಸಿದ ಬಳಿಕ ಈ ಘಟನೆ ಸಂಭವಿಸಿದ್ದು, ಸುಮಾರು 10 ನಿಮಿಷದಲ್ಲಿ ಸಂಭ್ರಮದಲ್ಲಿದ್ದ ಮನೆ ಸಾವಿನ ಮನೆ ಆಯಿತು.
ಥೈಲ್ಯಾಂಡ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗನ್ ಬಳಸುತ್ತಾರೆ. ಆದರಿಂದ ಈ ಭಾಗದಲ್ಲಿಯೇ ಗುಂಡು ಹೊಡೆದು ಮೃತಪಟ್ಟ ಪ್ರಕರಣಗಳು ಹೆಚ್ಚಾಗಿ ದಾಖಲಾಗೋದು. ಇಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಗನ್ ಎತ್ತುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv