ಬೆಂಗಳೂರು: ಕಾಂಗ್ರೆಸ್ (Congress) ನೇತೃತ್ವದ ಸರ್ಕಾರವು ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಣೆ (Textbook Revision) ಮಾಡಿದ್ದು, ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ‘ತಾಯಿ ಭಾರತೀಯ ಅಮರಪುತ್ರರು’ ಪಠ್ಯವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.
ಪರಿಷ್ಕೃತ ಪಠ್ಯ ಪುಸ್ತಕದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಸರ್ಕಾರ, 2022-23 ನೇ ಸಾಲಿನಲ್ಲಿ 1 ರಿಂದ 10ನೇ ತರಗತಿ ಕನ್ನಡ ಭಾಷಾ ಮತ್ತು 6 ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ, 2023-24ನೇ ಶೈಕ್ಷಣಿಕ ಸಾಲಿಗೆ ಮುದ್ರಿಸಿ ಎಲ್ಲಾ ಶಾಲೆಗಳಿಗೆ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಅವಧಿಯ ಪಠ್ಯಗಳಿಗೆ ಸರ್ಕಾರ ಕತ್ತರಿ- ಹೆಡ್ಗೆವಾರ್, ಸಾವರ್ಕರ್, ಸೂಲಿಬೆಲೆ ಪಠ್ಯಕ್ಕೆ ಬ್ರೇಕ್
Advertisement
Advertisement
ಬಿಜೆಪಿ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಪರಿಷ್ಕರಿಸಿದೆ. 10 ನೇ ತರಗತಿಯ ಕನ್ನಡ ಭಾಷಾ ವಿಷಯದಲ್ಲಿದ್ದ ಚಕ್ರವರ್ತಿ ಸೂಲಿಬೆಲೆ ಪಠ್ಯ ಕೈಬಿಟ್ಟಿದೆ. ಜೊತೆಗೆ ಕನ್ನಡದಲ್ಲಿ 9 ಹೊಸ ಪಠ್ಯಗಳನ್ನು ಸೇರ್ಪಡೆ ಮಾಡಿದೆ. ಸಮಾಜ ವಿಜ್ಞಾನದಲ್ಲಿ 9 ಪಠ್ಯಗಳ ಪರಿಷ್ಕರಣೆ ಮತ್ತು ತಿದ್ದುಪಡಿ ಮಾಡಲಾಗಿದೆ.
Advertisement
Advertisement
ಈ ಹಿಂದೆ ಇದ್ದ ಬಿಜೆಪಿ ನೇತೃತ್ವದ ಸರ್ಕಾರ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ತನಗೆ ಬೇಕಾದ ಕೆಲವು ಪಾಠಗಳನ್ನು ಸೇರಿಸಿತ್ತು. ತನ್ನ ಸಿದ್ಧಾಂತಕ್ಕೆ ಒಗ್ಗದ ಕೆಲವು ಪಾಠಗಳನ್ನು ಆಗಿನ ಸರ್ಕಾರ ಕೈಬಿಟ್ಟಿತ್ತು. ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ
Web Stories