ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್, ಎಡಪಂಥೀಯ ಸಾಹಿತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪಠ್ಯ ವಾಪಸ್ ಅಭಿಯಾನ ನಡೆಸುತ್ತಿದ್ದರೆ, ಇದಕ್ಕೆ ತಿರುಗೇಟು ನೀಡುವಂತೆ ಇತ್ತ ರೋಹಿತ್ ಚಕ್ರತೀರ್ಥ ಅವರನ್ನು ಬೆಂಬಲಿಸಿ ಬಿಜೆಪಿಯಿಂದ #AcceptToolkitResignation ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ.
ಈ ಆ್ಯಕ್ಸೆಪ್ಟ್ ಟೂಲ್‍ಕಿಟ್ ರೆಸಿಗ್ನೆಶನ್ ಅಭಿಯಾನಕ್ಕೆ ಬಿಜೆಪಿ ಸಚಿವರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಇದನ್ನು ಬೆಂಬಲಿಸಿ ಕಂದಾಯ ಸಚಿವ ಆರ್. ಅಶೋಕ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಸಚಿವ ಹಾಲಪ್ಪ ಆಚಾರ್, ಸಾರಿಗೆ ಸಚಿವ ಬಿ. ಶ್ರೀರಾಮುಲು, ಕೃಷಿ ಸಚಿವ ಬಿ.ಸಿ. ಪಾಟೀಲ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಸಚಿವ ಪ್ರಭು ಚೌಹಾಣ್ ಸೇರಿದಂತೆ ಅನೇಕ ಸಚಿವರು ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂತೆಗೆದುಕೊಂಡ ಮತ್ತಿಬ್ಬರು ಸಾಹಿತಿಗಳು
Advertisement
Advertisement
ಆರ್. ಅಶೋಕ್:
ಪಠ್ಯವಿರೋಧಿ ತಂತ್ರದ ಎಲ್ಲಾ ಸಾಧನಗಳೂ ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆಯ ದಾಳವಾಗಿ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಈಗ ಛೂ ಬಿಟ್ಟಿದೆ. ಒಬ್ಬರ ಹಿಂದೆ ಒಬ್ಬರಂತೆ ಸಾಹಿತಿಗಳು ಕಾಂಗ್ರೆಸ್ ನೀಡಿದ್ದ ಪದವಿಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಅಂಗೀಕರಿಸಬೇಕು.
Advertisement
ಪಠ್ಯವಿರೋಧಿ ತಂತ್ರದ ಎಲ್ಲ ಸಾಧನಗಳೂ ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆಯ ದಾಳವಾಗಿ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಈಗ ಛೂ ಬಿಟ್ಟಿದೆ. ಒಬ್ಬರ ಹಿಂದೆ ಒಬ್ಬರಂತೆ ಸಾಹಿತಿಗಳು ಕಾಂಗ್ರೆಸ್ ನೀಡಿದ್ದ ಪದವಿಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಅಂಗೀಕರಿಸಬೇಕು!#AcceptToolkitResignation
— R. Ashoka (ಆರ್. ಅಶೋಕ) (@RAshokaBJP) May 31, 2022
ಹಾಲಪ್ಪ ಆಚಾರ್:
ಪಠ್ಯಪುಸ್ತಕ ಪರಿಷ್ಕರಣೆಯ ಕುರಿತು ಚರ್ಚೆ ನಡೆಸಲು ಸಮಿತಿ ಬಹಳಷ್ಟು ಸಮಯದಿಂದ ಹೇಳುತ್ತಿದೆ. ಕೇವಲ ವಿವಾದ ಸೃಷ್ಟಿಸುವ ಉದ್ದೇಶದಿಂದ ಕಾಂಗ್ರೆಸ್, ಸಾಹಿತಿಗಳನ್ನು ಛೂ ಬಿಟ್ಟಿದೆ. ಪ್ರಶಸ್ತಿ ಹಿಂದಿರುಗಿಸುವ, ಸ್ಥಾನಗಳಿಗೆ ರಾಜೀನಾಮೆ ನೀಡುವ ವ್ಯಕ್ತಿಗಳ ಬ್ಲಾಕ್ಮೇಲ್ಗೆ ಸರ್ಕಾರ ಹೆದರುವುದಿಲ್ಲ. ಇದನ್ನೂ ಓದಿ: ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ
Advertisement
ಪಠ್ಯಪುಸ್ತಕ ಪರಿಷ್ಕರಣೆಯ ಕುರಿತು ಚರ್ಚೆ ನಡೆಸಲು ಸಮಿತಿ ಬಹಳಷ್ಟು ಸಮಯದಿಂದ ಹೇಳುತ್ತಿದೆ. ಕೇವಲ ವಿವಾದ ಸೃಷ್ಟಿಸುವ ಉದ್ದೇಶದಿಂದ ಕಾಂಗ್ರೆಸ್, ಸಾಹಿತಿಗಳನ್ನು ಛೂ ಬಿಟ್ಟಿದೆ. ಪ್ರಶಸ್ತಿ ಹಿಂದಿರುಗಿಸುವ, ಸ್ಥಾನಗಳಿಗೆ ರಾಜೀನಾಮೆ ನೀಡುವ ವ್ಯಕ್ತಿಗಳ ಬ್ಲಾಕ್ಮೇಲ್ಗೆ ಸರ್ಕಾರ ಹೆದರುವುದಿಲ್ಲ.#AcceptToolKitResignation
— Halappa Achar (@HalappaAchar) May 31, 2022
ಬಿ. ಶ್ರೀರಾಮಲು:
ಪಠ್ಯವಿರೋಧಿ ತಂತ್ರದ ಎಲ್ಲ ಸಾಧನಗಳೂ ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆಯ ದಾಳವಾಗಿ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಈಗ ಛೂ ಬಿಟ್ಟಿದೆ. ಒಬ್ಬರ ಹಿಂದೆ ಒಬ್ಬರಂತೆ ಸಾಹಿತಿಗಳು ಕಾಂಗ್ರೆಸ್ ನೀಡಿದ್ದ ಪದವಿಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಅಂಗೀಕರಿಸಬೇಕು.
ಪಠ್ಯವಿರೋಧಿ ತಂತ್ರದ ಎಲ್ಲ ಸಾಧನಗಳೂ ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆಯ ದಾಳವಾಗಿ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಈಗ ಛೂ ಬಿಟ್ಟಿದೆ. ಒಬ್ಬರ ಹಿಂದೆ ಒಬ್ಬರಂತೆ ಸಾಹಿತಿಗಳು ಕಾಂಗ್ರೆಸ್ ನೀಡಿದ್ದ ಪದವಿಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಅಂಗೀಕರಿಸಬೇಕು!#AcceptToolkitResignation
— B Sriramulu (@sriramulubjp) May 31, 2022
ಶಿವರಾಮ್ ಹೆಬ್ಬಾರ್:
ಬುದ್ಧಿಜೀವಿಗಳೆಂದು ಕರೆದುಕೊಳ್ಳುವ ಕೆಲವರಿಗೆ ಪದವಿ ನೀಡಿ, ತಮ್ಮ ರಾಜಕೀಯ ಚಾಕರಿ ಮಾಡಿಸಿಕೊಳ್ಳುವುದು ಕಾಂಗ್ರೆಸ್‍ನ ಹಳೆಯ ಚಾಳಿ. ಪಠ್ಯ ವಿರೋಧಿಸುವ ತಂತ್ರಗಳಿಗೆ ಬೆಲೆ ಸಿಗದಿದ್ದಾಗ ಇವರಿಂದ ರಾಜೀನಾಮೆ ಕೊಡಿಸುವ ನಾಟಕ ಆರಂಭಿಸಿದ್ದಾರೆ. ಸರ್ಕಾರ ಈ ಎಲ್ಲಾ ಟೂಲ್ ಕಿಟ್ ಸಾಹಿತಿಗಳ ರಾಜೀನಾಮೆಗಳನ್ನು ಅಂಗೀಕರಿಸಲಿ.
ಬುದ್ಧಿಜೀವಿಗಳೆಂದು ಕರೆದುಕೊಳ್ಳುವ ಕೆಲವರಿಗೆ ಪದವಿ ನೀಡಿ,ತಮ್ಮ ರಾಜಕೀಯ ಚಾಕರಿ ಮಾಡಿಸಿಕೊಳ್ಳುವುದು ಕಾಂಗ್ರೆಸ್ ನ ಹಳೆಯ ಚಾಳಿ. ಪಠ್ಯವಿರೋಧಿಸುವ ತಂತ್ರಗಳಿಗೆ ಬೆಲೆ ಸಿಗದಿದ್ದಾಗ ಇವರಿಂದ ರಾಜೀನಾಮೆ ಕೊಡಿಸುವ ನಾಟಕ ಆರಂಭಿಸಿದ್ದಾರೆ.
ಸರ್ಕಾರ ಈ ಎಲ್ಲ ಟೂಲ್ ಕಿಟ್ ಸಾಹಿತಿಗಳ ರಾಜೀನಾಮೆಗಳನ್ನು ಅಂಗೀಕರಿಸಲಿ!#AcceptToolkitResignation
— Shivaram Hebbar (@ShivaramHebbar) May 31, 2022
ಬಿ.ಸಿ ಪಾಟೀಲ್:
ಟ್ವೀಟ್ ಮಾಡಿ, ಕಾಂಗ್ರೆಸ್ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಛೂ ಬಿಡುವುದು ಇದೇ ಮೊದಲೇನಲ್ಲ. ಪಠ್ಯ ವಿರೋಧಿ ತಂತ್ರದ ಎಲ್ಲ ಸಾಧನಗಳೂ ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆದಾಳವಾಗಿ ಸಾಹಿತಿಗಳನ್ನು ಛೂಬಿಟ್ಟಿದೆ. ಈಗ ಅವರು ಕಾಂಗ್ರೆಸ್ ನೀಡಿದ್ದ ಪದವಿಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ ಅಷ್ಟೇ.
ಕಾಂಗ್ರೆಸ್ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಛೂ ಬಿಡುವುದು ಇದೇ ಮೊದಲೇನಲ್ಲ.
ಪಠ್ಯವಿರೋಧಿ ತಂತ್ರದ ಎಲ್ಲ ಸಾಧನಗಳೂ ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆ ದಾಳವಾಗಿ ಸಾಹಿತಿಗಳನ್ನು ಛೂಬಿಟ್ಟಿದೆ. ಈಗ ಅವರು ಕಾಂಗ್ರೆಸ್ ನೀಡಿದ್ದ ಪದವಿಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ ಅಷ್ಟೆ.#AcceptToolkitResignation
— Kourava B.C.Patil (@bcpatilkourava) May 31, 2022
ಕೊಟ ಶ್ರೀನಿವಾಸ್ ಪೂಜಾರಿ: ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ವಿನಾಕಾರಣ ರಾಜಕೀಯ ಪ್ರೇರಿತ ಹೇಳಿಕೆಯನ್ನು ವಿರೋಧ ಪಕ್ಷಗಳು ಸೃಷ್ಟಿ ಮಾಡುತ್ತಿದೆ. ಜನ ಸಾಮಾನ್ಯರಲ್ಲಿ ಯಾವುದೇ ಗೊಂದಲದ ಅಗತ್ಯವಿಲ್ಲ. ಪಠ್ಯಪುಸ್ತಕ ರಾಷ್ಟ್ರೀಯತೆಯ ವಿಚಾರವನ್ನೊಳಗೊಂಡು ಮುದ್ರಣವಾಗುತ್ತಿದೆ. ಮತ್ತು ರಾಷ್ಟ್ರಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ತುಂಬುತ್ತಿದೆ. ಜನರು ಸರ್ಕಾರವನ್ನು ಬೆಂಬಲಿಸಿದ್ದನ್ನು ಸಹಿಸದ ವಿರೋಧ ಪಕ್ಷಗಳು ಅಡ್ಡದಾರಿ ಹಿಡಿದಿರುವುದು ಖಂಡನೀಯ. ಸಮರ್ಥ ಭಾರತ ಸಮೃದ್ಧ ಭಾರತಕ್ಕೆ ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಬದ್ಧವಾಗಿದೆ. ವೃಥಾ ಗೊಂದಲ ಬೇಡ.