ಮಡಿಕೇರಿ: ಪಠ್ಯ ಪುಸ್ತಕ ಪರಿಷ್ಕರಣೆಗೆ ಮತ್ತೊಂದು ಸಮಿತಿ ಮಾಡುವ ವಿಚಾರ ಹಿನ್ನೆಲೆಯಲ್ಲಿ ಅಂತಹ ಯಾವುದೇ ನಿರ್ಧಾರ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದರು.
ಕೊಡಗಿನ ಕುಶಾಲನಗರದಲ್ಲಿ ಮಾತಾನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಡಯಟ್ ಪ್ರಾಂಶುಪಾಲರು ಮತ್ತು ಶಿಕ್ಷಕರ ನೇತೃತ್ವದಲ್ಲಿ ಬಸವಣ್ಣನವರ ಪಠ್ಯವೊಂದನ್ನು ಮಾತ್ರ ಸರಿಪಡಿಸಲಾಗುವುದು. ಉಳಿದಂತೆ ಎಲ್ಲವೂ ಹಾಗೆಯೇ ಮುಂದುವರಿಯಲಿದೆ. ಈಗಾಗಲೇ ರಾಜ್ಯದಲ್ಲಿ ಶೇ 80% ವಿದ್ಯಾರ್ಥಿಗಳಿಗೆ ಪುಸ್ತಕ ವಿಸ್ತರಣೆ ಆಗಿದೆ. ಕಲಿಕಾ ಚೇತರಿಕೆ ಆದ ಬಳಿಕ ಎಂದಿನಂತೆ ಪಾಠಗಳು ನಡೆಯಲಿವೆ ಎಂದು ತಿಳಿಸಿದರು. ಇದನ್ನೂ ಓದಿ: ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಶಾಲಾ ಬಾಲಕಿ ಸಾವು
Advertisement
Advertisement
ಇನ್ನೂ ಶ್ರೀರಂಗಪಟ್ಟಣದ ಗಾಂಜಾಂನಲ್ಲಿ ಮುಸ್ಲಿಮ್‍ರು ಸಮಾವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಸಾಕಷ್ಟು ಎಚ್ಚೆತ್ತುಕೊಂಡಿದೆ. ಈಗಾಗಲೇ ಕುಮಾರಸ್ವಾಮಿ ಕೂಡ ಅದು ಆಂಜನೇಯಸ್ವಾಮಿ ದೇವಾಲಯವಾಗಿತ್ತು ಎಂದಿದ್ದಾರೆ. ಆದರೆ ಸರ್ಕಾರ ಅದರ ಸಂಬಂಧ ಯಾವುದೇ ನಿರ್ಧಾರ ಮಾಡಿಲ್ಲ. ಮುಸ್ಲಿಮ್‍ರು ಈ ಕುರಿತು ಕೋರ್ಟಿಗೆ ಕೂಡ ಹೋಗುವ ಸಾಧ್ಯತೆಯೂ ಇದೆ. ನೋಡೋಣ ಮುಂದೆ ಏನಾಗುತ್ತದೆ. ಅಲ್ಲಿ ನಡೆಸುತ್ತಿರುವ ಸಮಾವೇಶ ಸಂಬಂಧ ಭದ್ರತೆಗೆ ಸಂಬಂಧಿಸಿದಂತೆ ಆಯಾ ಇಲಾಖೆ ನೋಡಿಕೊಳ್ಳುತ್ತದೆ ಎಂದರು. ಇದನ್ನೂ ಓದಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?