ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್, ಎಡಪಂಥೀಯ ಸಾಹಿತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರವನ್ನು ತರಾಟೆಗೆ ತೆಗದುಕೊಳ್ಳುತ್ತಿದ್ದರೆ ಇತ್ತ ರೋಹಿತ್ ಚಕ್ರತೀರ್ಥ ಅವರನ್ನು ಬೆಂಬಲಿಸಿ ಅಭಿಯಾನ ನಡೆಯುತ್ತಿದೆ.
ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮತ್ತು ಪಠ್ಯಪುಸ್ತಕ ಕೇಸರೀಕರಣದ ಆರೋಪದ ವಿರುದ್ಧ ಎಡಪಂಥೀಯ ಸಾಹಿತಿಗಳು ಆರಂಭಿಸಿರುವ ಪಠ್ಯ ವಾಪಸ್ ಅಭಿಯಾನ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ 6ಕ್ಕೂ ಹೆಚ್ಚು ಎಡಪಂಥೀಯ ಸಾಹಿತಿಗಳು ಪಠ್ಯ ವಾಪಸ್ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರಿಗೆ ತಮ್ಮ ಪಠ್ಯ ಕೈಬಿಡುವಂತೆ ಸಾಹಿತಿಗಳ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೇ ಇನ್ನೂ ಕೆಲವು ಸಾಹಿತಿಗಳು ಸರ್ಕಾರದ ಅಧೀನ ಪ್ರತಿಷ್ಠಾನಗಳಿಗೂ ರಾಜೀನಾಮೆ ನೀಡಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ನಾನು ಕುವೆಂಪು ನಾಡಗೀತೆಯನ್ನು ಅಪಮಾನ ಮಾಡಿಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ
Advertisement
Advertisement
ದೇವನೂರು ಮಹಾದೇವ, ಸರಜೂ ಕಾಟ್ಕರ್, ಎಸ್.ಜಿ. ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಚಂದ್ರಶೇಖರ್ ತಾಳ್ಯ, ಈರಪ್ಪ ಎಂ ಕಂಬಳಿ, ರೂಪಾ ಹಾಸನ, ಬೋಳುವಾರು ಮಹಮದ್ ಅವರು ಕೃತಿ ಬಳಸಲು ಅನುಮತಿ ನೀಡಿದನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂತೆಗೆದುಕೊಂಡ ಮತ್ತಿಬ್ಬರು ಸಾಹಿತಿಗಳು
Advertisement
ಹಂಪಾ ನಾಗರಾಜಯ್ಯ, ಕುವೆಂಪು ಪ್ರತಿಷ್ಠಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರೊ.ಕೆ.ಎಸ್. ಮಧುಸೂದನ್ ಒಂಬತ್ತನೇ ತರಗತಿ ಪಠ್ಯ ಪುಸ್ತಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Advertisement
ಬೇಡಿಕೆ ಏನು?:
ಪಠ್ಯದಿಂದ ಆರ್‌ಎಸ್‍ಎಸ್ ಸಂಸ್ಥಾಪಕ ಕೇಶವ್ ಹೆಡ್ಗೆವಾರ್ ಪಠ್ಯವನ್ನು ಕೈ ಬಿಡಬೇಕು. ಇದರ ಜೊತೆಗೆ ಪಠ್ಯದಲ್ಲಿ ಕೇಸರೀಕರಣ ತುಂಬುವುದನ್ನು ಕೈಬಿಡಬೇಕು. ಅಷ್ಟೇ ಅಲ್ಲದೇ ಸರ್ಕಾರ ಹೊಸ ಪಠ್ಯಪುಸ್ತಕ ಪರಿಷ್ಕರಣೆ ವರದಿ ತಿರಸ್ಕಾರ ಮಾಡಬೇಕು. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಬೊಮ್ಮಾಯಿಗೆ ಪತ್ರ ಬರೆದ ಡಿಕೆಶಿ
ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯಪುಸ್ತಕವನ್ನು ಮುಂದುವರಿಸಬೇಕು. ಜೊತೆಗೆ ರೋಹಿತ್ ಚಕ್ರತೀರ್ಥರನ್ನು ಪರಿಷ್ಕರಣೆ ಸಮಿತಿಯಿಂದ ವಜಾ ಮಾಡಬೇಕು. ಲಂಕೇಶ್, ಸಾರಾ ಅಬೂಬುಕ್ಕರ್ ಸೇರಿದಂತೆ ಕೈಬಿಟ್ಟಿರುವ ಹಲವು ಸಾಹಿತಿಗಳ ಪಠ್ಯ ಮತ್ತೆ ಸೇರ್ಪಡೆ ಮಾಡಬೇಕು. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ವಜಾ? – ಸಚಿವರ ವರದಿ ಆಧರಿಸಿ ಕ್ರಮ ಕೈಗೊಳ್ತೇನೆಂದ ಸಿಎಂ
ಎಡಪಂಥೀಯ ವಾದಿಗಳಿಂದ ವಿರೋಧ ವ್ಯಕ್ತವಾಗಿದ್ದರೆ ಬರಹಗಾರ ರೋಹಿತ್ ಚಕ್ರತೀರ್ಥ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಗೊಂಡಿದೆ. ಪಠ್ಯದಲ್ಲಿ ಸುಳ್ಳುಗಳನ್ನು ಸೇರಿಸಲಾಗಿತ್ತು. ಈ ಸುಳ್ಳುಗಳನ್ನು ತೆಗೆದಿದ್ದಕ್ಕೆ ರೋಹಿತ್ ಚಕ್ರತೀರ್ಥ ಅವರನ್ನು ಗುರಿ ಮಾಡಲಾಗಿದೆ. ಆರಂಭದಲ್ಲಿ ಪಠ್ಯ ತೆಗೆದಿದ್ದಕ್ಕೆ ವಿರೋಧ ಮಾಡಿದರು. ಬಳಿಕ ಕುವೆಂಪುಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು. ಇವುಗಳನ್ನು ಬರಗೂರು ರಾಮಚಂದ್ರಪ್ಪನವರ ಸಮಿತಿ ಮಾಡಿದೆ ಎಂದು ಗೊತ್ತಾದ ಬಳಿಕ ಈಗ ರೋಹಿತ್ ಚಕ್ರತೀರ್ಥ ಅವರನ್ನು ಗುರಿ ಮಾಡಿ ವೈಯಕ್ತಿಕ ಟೀಕೆ ಮಾಡಿ ತೇಜೋವಧೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ