CrimeCrime NewsInternationalLatestMain Post

ಜಗಳವಾಡುತ್ತಿದ್ದಾಗ ಗುಂಡಿನ ದಾಳಿ ಮಾಡಿ ಪರಾರಿಯಾದ ವಿದ್ಯಾರ್ಥಿ

ಆಸ್ಟಿನ್: ವಿದ್ಯಾರ್ಥಿಗಳು ಜಗಳವಾಡುತ್ತಿದ್ದಾಗ ಇನ್ನೊಬ್ಬ ವಿದ್ಯಾರ್ಥಿ ಅಲ್ಲಿಂದ ಇಬ್ಬರ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಟೆಕ್ಸಾಸ್ ನ ಟಿಂಬರ್‌ವ್ಯೂ ಪ್ರೌಢ ಶಾಲೆಯಲ್ಲಿ ನಡೆದಿದೆ.

ಆರ್ಲಿಂಗ್ಟನ್ ಸಹಾಯಕ ಪೊಲೀಸ್ ಮುಖ್ಯಸ್ಥ ಕೆವಿನ್ ಕೋಲ್ಪೈ ಈ ಕುರಿತು ಮಾತನಾಡಿದ್ದು, ವಿದ್ಯಾರ್ಥಿಗಳು ಜಗಳವಾಡುತ್ತಿದ್ದು, ಈ ವೇಳೆ ಇಬ್ಬರ ಮೇಲೆ ಗುಂಡಿನ ದಾಳಿಯಾಗಿದ್ದು, ಇನ್ನಿಬ್ಬರಿಗೆ ಜಗಳವಾಡುತ್ತಿದ್ದ ಸಮಯದಲ್ಲಿ ಗಾಯಗಳಾಗಿವೆ. ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇನ್ನೊಬ್ಬ ಚಿಕಿತ್ಸೆಯನ್ನು ನಿರಾಕರಿಸಿದನು ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆ – ವಿದ್ಯುತ್ ಅಭಾವದ ಆತಂಕ

ಶಂಕಿತ ಆರೋಪಿಯನ್ನು 18 ವರ್ಷದ ತಿಮೋತಿ ಜಾರ್ಜ್ ಸಿಂಪ್ಕಿನ್ಸ್ ಎಂದು ಗುರುತಿಸಲಾಗಿದೆ. ಆತನು 2018ರ ಸಿಲ್ವರ್ ಡಾಡ್ಜ್ ಚಾರ್ಜರ್ ಪರವಾನಗಿ ಪಡೆದಿದ್ದು, ಪ್ಲೇಟ್ ಸಂಖ್ಯೆ ಪಿಎಫ್‍ವೈ-6260 ಚಾಲನೆ ಮಾಡುತ್ತಿದ್ದನು. ಶಂಕಿತ ಶೂಟರ್‍ಗಾಗಿ ನಾವು ಹುಡುಕುತ್ತಿದ್ದು, ಬಹಳ ಬೇಗನೆ ಪತ್ತೆಯಾಗುತ್ತಾನೆ ಎಂದು ನಮಗೆ ವಿಶ್ವಾಸವಿದೆ ಎಂದು ತಿಳಿಸಿದರು.

ಜಗಳ ಆರಂಭವಾದ ನಂತರ ಗುಂಡಿನ ದಾಳಿ ನಡೆದಿದೆ. ಇಲ್ಲಿ ನಡೆದ ಗುಂಡಿನ ದಾಳಿ ಯಾರೋ ಬಂದು ಮಾಡಿಲ್ಲ. ಈ ಜಗಳ ಏಕೆ ಆಗಿದೆ ಎಂದು ಇನ್ನೂ ತಿಳಿದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: 12 ಲಕ್ಷ ಮೌಲ್ಯದ ಅಕ್ಕಿ, ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು ಮಾಡಿದ್ದ ಮಾಲೀಕ ಅರೆಸ್ಟ್

ಟಿಂಬರ್‌ವ್ಯೂ 9ನೇ ತರಗತಿಯಿಂದ 12ನೇ ತರಗತಿವರೆಗೆ ಇದ್ದು, ಸುಮಾರು 1,900 ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಯನ್ನು 2004 ರಲ್ಲಿ ತೆರೆಯಲಾಗಿದೆ. ಈ ಗುಂಡಿನ ದಾಳಿ ಸುದ್ದಿ ತಿಳಿದ ನಂತರ, ಕ್ಯಾಂಪಸ್‍ನಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಸೇರಿಕೊಂಡಿದ್ದು, ಎಲ್ಲ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕಳುಹಿಸಲಾಯಿತು ಎಂದು ತಿಳಿಸಿದರು.

Leave a Reply

Your email address will not be published.

Back to top button