– ವಿಡೀಯೊ ವೈರಲ್ ಆಗುತ್ತಿದ್ದಂತೆ ಯುವಕ ಅರೆಸ್ಟ್
– 30 ದಿನ ಜೈಲು, 73 ಸಾವಿರ ರೂ. ದಂಡ ವಿಧಿಸಿದ ಕೋರ್ಟ್
ವಾಷಿಂಗ್ಟನ್: ಸೂಪರ್ ಮಾರ್ಕೆಟ್‍ನಲ್ಲಿ ಉದ್ಯೋಗಿಯೊಬ್ಬ ಐಸ್‍ಕ್ರೀಮ್ ನೆಕ್ಕಿ ಮತ್ತೆ ಫ್ರಿಜ್‍ನಲ್ಲಿ ಇಟ್ಟ ಘಟನೆ ಅಮೆರಿಕದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಅಮೆರಿಕದ ಹ್ಯೂಸ್ಟನ್ ನಗರದ ಸಮೀಪ ನಿವಾಸಿ ಆಂಡರ್ಸನ್ (24) ಜೈಲು ಸಿಕ್ಷೆಗೆ ಗುರಿಯಾದ ಆರೋಪಿ. ಹೂಸ್ಟನ್ ನಗರದಿಂದ 145 ಕಿಲೋಮೀಟರ್ ದೂರದಲ್ಲಿರುವ ಪೋರ್ಟ್ ಅರ್ಥರ್ ನ ವಾಲ್ಮಾರ್ಟ್ ಸೂಪರ್ ಮಾರ್ಕೆಟ್‍ನಲ್ಲಿ ಕಳೆದ ವರ್ಷ ಆಗಸ್ಟ್ 26ರಂದು ಘಟನೆ ನಡೆದಿದೆ. ಆರೋಪಿಯು ಅದೇ ಸೂಪರ್ ಮಾರ್ಕೆಟ್‍ನ ಉದ್ಯೋಗಿ ಆಗಿದ್ದ.
Advertisement
#DAdrienAnderson aka ‘Ice cream licker’ gets off lightly with a 30 day jail sentence, $1,000 fine, $1,565 to #BlueBell + 2 yr probation ???????? #icecream #JeffersonCounty #texas https://t.co/94jXchvtah
— Mwiinga ???????? (@Thearchct) March 6, 2020
Advertisement
ಆರೋಪಿ ಆಂಡರ್ಸನ್ ಆಗಸ್ಟ್ 26ರಂದು ಸೂಪರ್ ಮಾರ್ಕೆಟ್‍ನಲ್ಲಿದ್ದ ಫ್ರಿಜ್‍ನಿಂದ ಐಸ್‍ಕ್ರೀಮ್ ಎತ್ತಿಕೊಂಡು ನೆಕ್ಕಿ ಮತ್ತೆ ಅದರಲ್ಲೇ ಇಟ್ಟಿದ್ದ. ಈ ದೃಶ್ಯವು ಸೂಪರ್ ಮಾರ್ಕೆಟ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಇದಕ್ಕೂ ಮುನ್ನ ಸೂಪರ್ ಮಾರ್ಕೆಟ್ ಅಧಿಕಾರಿಗಳು ವಿಡಿಯೋ ನೋಡಿ ಆರೋಪಿಯನ್ನು 6 ತಿಂಗಳು ವಜಾಗೊಳಿಸಿತ್ತು. ಅಷ್ಟೇ ಅಲ್ಲದೆ 100 ಗಂಟೆಗಳ ಕಾಲ ಉಚಿತವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿತ್ತು. ಆರೋಪಿಯ ಕೃತ್ಯದಿಂದಾಗಿ ಸೂಪರ್ ಮಾರ್ಕೆಟ್‍ನಲ್ಲಿದ್ದ ಸುಮಾರು 1,15,363 ರೂಪಾಯಿ ಮೌಲ್ಯದ ಐಸ್ ಕ್ರೀಮ್ ಅನ್ನು ಕಸಕ್ಕೆ ಹಾಕಿದ್ದರು.
Advertisement
ಮತ್ತೊಂದು ವಿಡಿಯೋ ವೈರಲ್:
ಆಂಡರ್ಷನ್ ವಿಡಿಯೋವನ್ನು ಹೋಲುವ ಮತ್ತೊಂದು ವಿಡಿಯೋ ಒಂದು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಅಪ್ರಾಪ್ತ ಹುಡುಗಿ ವಾಲ್ಮಾರ್ಟ್ ಅಂಗಡಿಯಿಂದ ಐಸ್‍ಕ್ರೀಮ್ ಟಬ್ ತೆಗೆದುಕೊಂಡು ಅದನ್ನು ನೆಕ್ಕುತ್ತಾ ಮತ್ತೆ ಅದೇ ಸ್ಥಳದಲ್ಲಿ ಇಟ್ಟಿದ್ದಳು.
Woman seen licking Blue Bell ice cream at a Walmart in Texas faces second-degree felony charge. The charge comes with a 2 to 20 Years in prison & $10,000 in fines.
All Products of the food tampering" have been pulled from store shelves. #FridayThoughts pic.twitter.com/MEpkU6yQc0
— ∼Marietta (@ThisIsMarietta) July 5, 2019