– ಪ್ರತಿ ದಿನ 22.5 ಕಿ.ಮೀ ನಡ್ಕೊಂಡೇ ಬರ್ತಿದ್ದ ಮಹಿಳಾ ವೇಟರ್
– ಕಾರು ಗಿಫ್ಟ್ ನೀಡಿದ್ದರ ಕಾರಣ ಇಲ್ಲಿದೆ
ಟೆಕ್ಸಾಸ್: ಧನ್ಯವಾದ ಹೇಳುವ ರೂಪದಲ್ಲಿ ಇಲ್ಲೊಂದು ಜೋಡಿ ಹೋಟೆಲಿನ ಮಹಿಳಾ ವೇಟರ್ ನ್ನು ನಿಬ್ಬೆರಗಾಗುವಂತೆ ಮಾಡಿದ್ದು, ಕಾರ್ ಉಡುಗೊರೆಯಾಗಿ ನೀಡಿದ್ದಾರೆ.
ಅಮೆರಿಕದ ಟೆಕ್ಸಾಸ್‍ನ ಗ್ಯಾಲ್ವೆಸ್ಟನ್‍ನಲ್ಲಿ ಘಟನೆ ನಡೆದಿದ್ದು, ಆಟ್ರಿಯಾನ್ನಾ ಎಡ್ವರ್ಡ್ಸ್ ಅವರು ಅಮೆರಿಕನ್ ರೆಸ್ಟೋರೆಂಟ್ ಚೈನ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೋಟೆಲಿಗೆ ತಿಂಡಿ ತಿನ್ನಲು ದಂಪತಿ ಬರುತ್ತಾರೆ. ಆಗ ಎಡ್ವರ್ಡ್ಸ್ ಅವರು ದಂಪತಿಗೆ ತಿಂಡಿಯನ್ನು ಸರ್ವ್ ಮಾಡುತ್ತಾರೆ. ಆದರೆ ರಾತ್ರಿ ಊಟದ ಹೊತ್ತಿಗೆ ಈ ದಂಪತಿ ಎಡ್ವರ್ಡ್ಸ್ ಅವರಿಗೆ ಕಾರ್ ಗಿಫ್ಟ್ ನೀಡಿ ಆಶ್ಚರ್ಯವಾಗುವಂತೆ ಮಾಡುತ್ತಾರೆ.
Advertisement
ಅಷ್ಟಕ್ಕೂ ದಂಪತಿ ಏಕೆ ಎಡ್ವರ್ಡ್ಸ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದರು ಎಂಬ ಕಥೆ ಇಲ್ಲಿದೆ. ಹೋಟೆಲಿನಲ್ಲಿ ತಿಂಡಿ ತಿನ್ನುವ ವೇಳೆ ದಂಪತಿ ತಮಗೆ ಆಹಾರ ಸರ್ವ್ ಮಾಡಿದ ಮಹಿಳೆ ಎಡ್ವರ್ಡ್ಸ್ ಅವರ ಬಗ್ಗೆ ತಿಳಿಯುತ್ತಾರೆ. ಈ ವೇಳೆ ಎಡ್ವರ್ಡ್ಸ್ ಅವರು ಕೆಲಸಕ್ಕಾಗಿ ಪ್ರತಿ ನಿತ್ಯ 14 ಮೈಲಿ(22.5 ಕಿ.ಮೀ.) ನಡೆಯುತ್ತಾರೆ. ಇವರು ಇಷ್ಟು ನಡೆಯಲು ಕಾರಣ ತಾವೂ ಕಾರುಕೊಳ್ಳಬೇಕೆಂಬ ಮಹದಾಸೆ. ಇದಕ್ಕಾಗಿ ಹಣ ಉಳಿಸಲು ನಿತ್ಯ 14 ಮೈಲಿ ನಡೆದುಕೊಂಡೇ ಕೆಲಸಕ್ಕೆ ಬರುತ್ತಾರೆ ಎಂಬುದು ದಂಪತಿ ಅರಿವಿಗೆ ಬರುತ್ತದೆ.
Advertisement
‘I FEEL LIKE I’M DREAMING.’ This Galveston woman walked 14 miles to and from work. That all changed after two customers changed her life. After serving the couple, they returned with a car. Watch the perfect pre-Thanksgiving story only on @abc13houston at 6pm. pic.twitter.com/EnUlXxrsKb
— Nick Natario (@NickABC13) November 27, 2019
Advertisement
ತಕ್ಷಣವೇ ದಂಪತಿ ಬ್ರೋಡ್ ವೇ ರಸ್ತೆಯಲ್ಲಿರುವ ಕ್ಲಾಸಿಕ್ ಗ್ಯಾಲ್ವೆಸ್ಟನ್ ಆಟೋ ಗ್ರೂಪ್‍ಗೆ ತೆರಳಿ ಅಡ್ವಡ್ರ್ಸ್‍ಗಾಗಿ ಕಾರು ಖರೀದಿಸುತ್ತಾರೆ. ಹಲವು ಗಂಟೆಗಳ ನಂತರ ದಂಪತಿ ಡೆನ್ನೀಸ್ ಹೋಟೆಲ್‍ಗೆ ಆಗಮಿಸಿ ಅಡ್ವಡ್ರ್ಸ್ ಅವರಿಗೆ 2011 ನಿಸ್ಸಾನ್ ಸೆಂಟ್ರಾ ಕಾರನ್ನು ಉಡುಗೊರೆಯಾಗಿ ನೀಡುತ್ತಾರೆ.
Advertisement
ಎಡ್ವರ್ಡ್ಸ್ ತುಂಬಾ ಅಳುತ್ತಿದ್ದಳು, ಇದನ್ನು ನನಗೆ ಸಹಿಸಲಾಗಲಿಲ್ಲ. ಹೀಗಾಗಿ ಕಾರ್ ಉಡುಗೊರೆಯಾಗಿ ನೀಡಿದೆ ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಕಾರು ಖರೀದಿಸಿ ಉಡುಗೊರೆಯಾಗಿ ನೀಡಿದ ಮಹಿಳೆ ತಿಳಿಸಿದ್ದಾರೆ.
ಈ ಉಡುಗೊರೆಯಿಂದಾಗಿ ಎಡ್ವರ್ಡ್ಸ್ ಅವರ ಪ್ರಯಾಣ 5 ಗಂಟೆಯಿಂದ 30 ನಿಮಿಷಕ್ಕೆ ಇಳಿದಿದೆ. ಯಾವುದೇ ಸಂಬಂಧವಿಲ್ಲದಿದ್ದರೂ, ಅವರು ಕೇಳದಿದ್ದರೂ ಸಹ ಅವಳ ಒಳ್ಳೆಯ ಗುಣವನ್ನು ಹಾಗೂ ಆಕೆಯ ಛಲವನ್ನು ನೋಡಿ ದಂಪತಿ ಈ ಉಡುಗೊರೆಯನ್ನು ನೀಡಿದ್ದಾರೆ. ಎಡ್ವರ್ಡ್ಸ್ ನಮಗೆ ಆಭಾರಿಯಾಗಿದ್ದರೆ ಅಷ್ಟೇ ಸಾಕು ಎಂದು ದಂಪತಿ ತಿಳಿಸಿದ್ದಾರೆ.
ನಾನಿನ್ನೂ ಕನಸು ಕಾಣುತ್ತಿದ್ದೇನೆ ಎಂದು ನನಗನ್ನಿಸುತ್ತಿದೆ. ಯಾರಿಗಾದರೂ ಸಹಾಯ ಮಾಡುವುದು ನನ್ನ ಸ್ವಭಾವ. ಸಹಾಯ ಮಾಡಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಎಡ್ವರ್ಡ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಅಲಬಾಮಾ ವ್ಯಕ್ತಿಯೊಬ್ಬ ಕೆಲಸದ ಮೊದಲ ದಿನದಂದು ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು 32 ಕಿ.ಮೀ.ನಡೆದಿದ್ದ. ಕೆಲಸದ ಮೊದಲ ದಿನವೇ ಕಂಪನಿ ಮಾಲೀಕ ಅವನಿಗೆ ಕಾರ್ ಉಡುಗೊರೆಯಾಗಿ ನೀಡಿದ್ದ.