– ತಂದೆ ಫೋಟೋ ಪೋಸ್ಟ್ ಮಾಡಿ ಹೆಮ್ಮೆ ಪಟ್ಟ ಪತ್ರಕರ್ತೆ
ಟೆಕ್ಸಾಸ್: 73ರ ಇಳಿ ವಯಸ್ಸಿನಲ್ಲೂ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ತಮ್ಮ ತಂದೆಯ ಫೋಟೋವನ್ನು ಅಮೆರಿಕಾದ ಪತ್ರಕರ್ತೆಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋ ಈಗ ಸಖತ್ ವೈರಲ್ ಆಗಿದೆ.
ಅಮೆರಿಕಾದ ಪತ್ರಕರ್ತೆ ಕ್ರಿಸ್ಟಿನ್ ಫಿಶರ್ ಅವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ವೈದ್ಯ ತಂದೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ನಾನು ಏನೂ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ನಮ್ಮ ತಂದೆ ಈ ಫೋಟೋ ಕಳಿಸಿದರು. ಇದನ್ನು ನೋಡಿ ನನಗೆ ಕಣ್ಣೀರು ಬಂತು ಎಂದು ಅವರು ಬರೆದುಕೊಂಡಿದ್ದಾರೆ.
Advertisement
This is my Dad. He’s a 73 year old Emergency Room physician in Texas who loves his job and will never retire.
He texted me this picture tonight after I’d asked him how he was doing, and I burst into tears the second I saw it. My reaction came out of nowhere… pic.twitter.com/YOiMT5sImy
— Kristin Fisher (@KristinFisher) March 17, 2020
Advertisement
ತಮ್ಮ ತಂದೆ ಮಾಸ್ಕ್ ಧರಿಸಿ ನಿಂತಿರುವ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿರುವ ಫಿಶರ್, ಇದು ನನ್ನ ತಂದೆ, ಅವರಿಗೆ ಈಗ 73 ವರ್ಷ ಅವರು ಟೆಕ್ಸಾಸ್‍ನ ಆಸ್ಪತ್ರೆಯ ತುರ್ತು ವಾರ್ಡಿನ ವೈದ್ಯರಾಗಿದ್ದಾರೆ. ಅವರು ತಮ್ಮ ಕೆಲಸವನ್ನು ಪ್ರೀತಿಸುತ್ತಾರೆ ಮತ್ತು ಎಂದಿಗೂ ನಿವೃತ್ತರಾಗುವುದಿಲ್ಲ ಎನ್ನುತ್ತಾರೆ. ನಾನು ನೀವು ಏನ್ ಮಾಡುತ್ತಿದ್ದೀರಾ ಎಂದು ಇಂದು ರಾತ್ರಿ ಕೇಳಿದಾಗ ಈ ಫೋಟೋವನ್ನು ಕಳುಹಿಸಿದರು. ಅದನ್ನು ನೋಡಿದ ನನಗೆ ಕಣ್ಣೀರು ಬಂತು ಎಂದು ಬರೆದುಕೊಂಡಿದ್ದಾರೆ.
Advertisement
God bless your Dad. We need doctors like him. Prayers for his safety and for safety of all medical professionals at this tough time. ????❤️
— Sarah Donahue (@sdonahu2) March 17, 2020
Advertisement
ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಫಿಶರ್ ತಂದೆಯ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು, ದೇವರು ನಿಮ್ಮ ತಂದೆಯನ್ನು ಚೆನ್ನಾಗಿ ಇಟ್ಟಿರಲಿ. ನಮಗೆ ಅವರಂತಹ ವೈದ್ಯರು ಬೇಕು. ಈ ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ತಂದೆ ಮತ್ತು ವೃತ್ತಿಪರ ವೈದ್ಯರು ಸುರಕ್ಷತೆಗಾಗಿ ನಾವು ದೇವರನ್ನು ಬೇಡಿಕೊಳ್ಳೋಣ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ನಿಮ್ಮ ತಂದೆ ನಿಜವಾದ ಹೀರೋ ಎಂದು ಹೇಳಿದ್ದಾರೆ.
https://twitter.com/LoveCovfefe2020/status/1239954689782759430
ಒಟ್ಟು 173 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 2,18,455 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,245 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 8,938 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 85,664 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,23,853 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.