ವಾಷಿಂಗ್ ಟನ್: ರಾಷ್ಟ್ರದಲ್ಲಿ ಇತ್ತೀಚೆಗೆ ಉಗ್ರರ ದಾಳಿ ಹೆಚ್ಚಾಗುತ್ತಿದ್ದು, ಮತ್ತೆ ಅಮೆರಿಕದಲ್ಲಿ ದಾಳಿಕೋರನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿ ಸುಮಾರು 27 ಮಂದಿಯನ್ನು ಹತ್ಯೆ ಮಾಡಿದ್ದಾನೆ.
ಇಲ್ಲಿಯ ಸುದೆರ್‍ಲ್ಯಾಂಡ್ ಸ್ಪ್ರಿಂಗ್ಸ್‍ನಲ್ಲಿರುವ ಟೆಕ್ಸಾಸ್ ವಿಲ್ಸನ್ ಕೌಂಟಿಯ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚ್‍ನಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ದಾಳಿಯಲ್ಲಿ ಸುಮಾರು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
Advertisement
Advertisement
ಭಾನುವಾರ ಇಲ್ಲಿನ ಚರ್ಚ್‍ನಲ್ಲಿ ಒಬ್ಬದಾಳಿಕೋರ ಬಂದು ಮನೋಇಚ್ಛೆ ಬಂದಂತೆ ಸಿಕ್ಕಸಿಕ್ಕವರಿಗೆಲ್ಲಾ ಗುಂಡು ಹಾರಿಸಿದ್ದಾನೆ. ಪರಿಣಾಮ ಜನರು ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಹಂತಕನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಹಂತಕನ ಗುಂಡಿನ ದಾಳಿಗೆ ಬಲಿಯಾದವರಲ್ಲಿ ಚರ್ಚ್‍ನ ಪಾದ್ರಿಯ ಮಗಳು, ಪತ್ನಿ ಸಹ ಸೇರಿದ್ದಾರೆ. ಮೃತರು 5 ವರ್ಷದ ಮಕ್ಕಳಿಂದ ಹಿಡಿದು 72 ವಯಸ್ಸಿನ ವೃದ್ಧರು ಎಂದು ತಿಳಿದುಬಂದಿದೆ. ದಾಳಿಯಲ್ಲಿ ಗಾಯಗೊಂಡ 10 ಜನರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಯಾನ್ ಆಂಟೋನಿಯೋ ಮಿಲಿಟರಿ ಕೇಂದ್ರಕ್ಕೆ ಸಾಗಿಸಲಾಗಿದೆ ಎಂದು ಹೇಳಿದ್ದಾರೆ.
Advertisement
ಶಂಕಿತ ದಾಳಿಕೋರನನ್ನು 26 ವರ್ಷದ ಡೆವಿನ್ ಪಿ ಕೆಲ್ಲಿ ಎಂದು ಗುರುತಿಸಲಾಗಿದೆ. ಆದರೆ ಇನ್ನು ಆತನ ಗುರುತು ಪತ್ತೆಯಾಗಿಲ್ಲ. ಇದು ಭಯೋತ್ಪಾದನೇ ಆಗಿದೆ ಎಂದು ಶಂಕಿಸಲಾಗಿದೆ. ಆದರೆ ಇನ್ನು ಯಾವುದೇ ಖಚಿತ ಮಾಹಿತಿ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯಕ್ಕೆ ಜಪಾನ್ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಜಪಾನ್‍ನಿಂದಲೇ ಅಮೆರಿಕದಲ್ಲಿನ ಪರಿಸ್ಥಿತಿ ಮೇಲೆ ನಿಗಾ ವಹಿಸಲಾಗುವುದು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಒಂದೇ ವಾರದಲ್ಲಿ ಅಮೆರಿಕದಲ್ಲಿ ನಡೆದ ಮೂರನೇ ದಾಳಿ ಇದಾಗಿದ್ದು, ಅಕ್ಟೋಬರ್ 31 ರಂದು ಲಾಸ್ ವೆಗಸ್‍ನಲ್ಲಿ ಉಗ್ರನೋಬ್ಬ ಟ್ರಕ್ ಹರಿಸಿ 8 ಮಂದಿ ಹತ್ಯೆಗೈದಿದ್ದ. ನಂತರ ಮರುದಿನವೇ ಕೊಲರಾಡೋನಲ್ಲಿ ಭಾರಿ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ಇಬ್ಬರು ಮೃತಪಟ್ಟಿದ್ದರು.
ಇದನ್ನು ಓದಿ: ನ್ಯೂಯಾರ್ಕ್‍ನಲ್ಲಿ ಐಸಿಸ್ ಕೃತ್ಯಕ್ಕೆ 8 ಬಲಿ: ರಸ್ತೆಯಲ್ಲಿ ಉಗ್ರನ ಆಟಾಟೋಪ ನೋಡಿ
Sutherland Springs shooting
• Reports say 27 people dead
• At least 20 injured
• Gunman killed
Follow latest: https://t.co/0RbN7roatU pic.twitter.com/pv1KVb1bzH
— BBC Breaking News (@BBCBreaking) November 5, 2017
At least 27 dead in Texas church shooting, @BBCBarbaraPlett provides updates on events in Sutherland Springs https://t.co/bQ52Gn8sSw pic.twitter.com/G5uXhJu54E
— BBC Breaking News (@BBCBreaking) November 5, 2017
At least 27 people killed in Texas church shooting, police commissioner in Sutherland Springs tells US media https://t.co/jMqknZRezH
— BBC Breaking News (@BBCBreaking) November 5, 2017
Gunman reported to have been killed after mass shooting in Sutherland Springs, Texashttps://t.co/jMqknZRezH
— BBC Breaking News (@BBCBreaking) November 5, 2017
May God be w/ the people of Sutherland Springs, Texas. The FBI & law enforcement are on the scene. I am monitoring the situation from Japan.
— Donald J. Trump (@realDonaldTrump) November 5, 2017