ಲಂಡನ್: ಟೀಂ ಇಂಡಿಯಾ ಅಂಡರ್ 19 ತಂಡದ ನಾಯಕತ್ವ ವಹಿಸಿದ್ದ ಪೃಥ್ವಿ ಶಾ ವಿಶ್ವಕಪ್ ಗೆದ್ದ ಬಳಿಕ ಉತ್ತಮ ಅವಕಾಶ ಪಡೆಯುತ್ತಿದ್ದು, ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಟೀಂ ಇಂಡಿಯಾ ಇಂಗ್ಲೆಂಡ್ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದು, ಸಮಸ್ಯೆ ಬಗೆಹರಿಸಲು ಆರಂಭಿಕ ಕೆಎಲ್ ರಾಹುಲ್ ಸ್ಥಾನದಲ್ಲಿ ಪೃಥ್ವಿ ಶಾಗೆ ಅಂತಿಮ ಟೆಸ್ಟ್ ಪಂದ್ಯಕ್ಕೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ಇಂಗ್ಲೆಂಡ್ ಟೂರ್ನಿಯಲ್ಲಿ ಆರಂಭಿಕ ಮುರಳಿ ವಿಜಯ್ ಸ್ಥಾನದಲ್ಲಿ ಆಯ್ಕೆಯಾದ ಕನ್ನಡಿಗ ಕೆಎಲ್ ರಾಹುಲ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಸಾಬೀತು ಪಡಿಸಲು ಉತ್ತಮ ಅವಕಾಶ ಪಡೆದಿದ್ದರು. ಆದರೆ ಸದ್ಯ ಕಳೆದ 8 ಇನ್ನಿಂಗ್ಸ್ ಗಳಲ್ಲಿ 113 ರನ್ ಮಾತ್ರ ಗಳಿಸಿದ್ದಾರೆ. ಆದರೆ ಇದೇ ವೇಳೆ ಕ್ಷೇತ್ರ ರಕ್ಷಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಹಲವು ಪ್ರಮುಖ ಕ್ಯಾಚ್ ಪಡೆದು ಗಮನಸೆಳೆದಿದ್ದರು.
Advertisement
So now @PrithviShaw will debut at the Oval. We need to have better openers and a better lower middle order. Top bowling unit and the best batsman in Virat, need better starts. Pandya onwards clearly fragile.
— Boria Majumdar (@BoriaMajumdar) September 2, 2018
Advertisement
ಉಳಿದಂತೆ ಸರಣಿಯಲ್ಲಿ ಆರಂಭಿಕ ಮುರಳಿ ವಿಜಯ್ ಕೂಡ ಉತ್ತಮ ಪ್ರದರ್ಶನ ನೀಡುವುದಲ್ಲಿ ವಿಫಲರಾಗಿದ್ದಾರೆ. ಇಬ್ಬರು ಆರಂಭಿಕರು ಫೇಲ್ ಆಗಿರುವ ಕಾರಣ ಯುವ ಆರಂಭಿಕ ಆಟಗಾರ ಪೃಥ್ವಿ ಶಾಗೆ ಸ್ಥಾನ ನೀಡುವ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
Advertisement
ಟೀಂ ಇಂಡಿಯಾ `ಎ’ ತಂಡದಲ್ಲಿ ಪೃಥ್ವಿ ಶಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಡೆದ ವಿಂಡೀಸ್ ಎ ತಂಡದ ವಿರುದ್ಧದ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ 188 ಸಿಡಿಸಿದ್ದರು. ಇದುವೆರಗೂ ಪೃಥ್ವಿ ಶಾ 14 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 56.72 ಸರಾಸರಿಯಲ್ಲಿ 1,418 ರನ್ ಗಳಿಸಿದ್ದಾರೆ.
Advertisement
Prithvi Shaw with #TeamIndia's captain, Virat Kohli at a mall in Southampton. pic.twitter.com/5tBVDw3qrZ
— Circle of Cricket (@circleofcricket) September 3, 2018
ಟೀಂ ಇಂಡಿಯಾ ಇಂಗ್ಲೆಂಡ್ ಟೂರ್ನಿಯಲ್ಲಿ ಬ್ಯಾಂಟಿಂಗ್ ವೈಫಲ್ಯ ಸಮಸ್ಯೆ ಎದುರಿಸಿದ್ದು, ಟೆಸ್ಟ್ ಸರಣಿಯಲ್ಲಿ ಕಳೆದು ಕೊಂಡಿದೆ. ಉಳಿದಂತೆ ಟೀಂ ಇಂಡಿಯಾ ಬೌಲಿಂಗ್ ಪಡೆ ಅದರಲ್ಲೂ ವೇಗದ ಬೌಲರ್‍ಗಳು ಉತ್ತಮ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಟೂರ್ನಿಯ ಅಂತಿಮ ಪಂದ್ಯ ಸೆಪ್ಟೆಂಬರ್ 7 ರಿಂದ ಆರಂಭಗೊಳ್ಳಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
???????? @PrithviShaw – the next Sachin?
Will he make his Test debut today? pic.twitter.com/qWsTagJWQA
— ICC (@ICC) August 30, 2018