ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಎಲಾನ್ ಮಸ್ಕ್ (Elon Musk) ಅವರನ್ನು ಅಮೆರಿಕದಲ್ಲಿ ಭೇಟಿಯಾದ ಬೆನ್ನಲ್ಲೇ ಮಹತ್ವದ ಬೆಳವಣಿಗೆಗಳು ಕಂಡುಬಂದಿವೆ. ಮಸ್ಕ್ ನೇತೃತ್ವದ ಟೆಸ್ಲಾ ಕಂಪನಿ ಮುಂದಿನ ಏಪ್ರಿಲ್ ವೇಳೆಗೆ ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನ (Tesla Electric Car) ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.
Advertisement
ಮೂಲಗಳ ಪ್ರಕಾರ, ರಿಟೇಲ್ ಉದ್ಯಮ ಶುರು ಮಾಡಲು ಮುಂದಾಗಿರುವ ಟೆಸ್ಲಾ ಕಂಪನಿಯು ತನ್ನ ಬರ್ಲಿನ್ ಪ್ಲ್ಯಾಂಟ್‌ನಿಂದ ಎಲೆಕ್ಟ್ರಿಕ್ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಶೋರೂಮ್‌ಗಾಗಿ ಮುಂಬೈನ (Munbai) ಬಾಂದ್ರಾನಲ್ಲಿ ಮತ್ತು ದೆಹಲಿಯ ಏರೋಸಿಟಿಯಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಆದ್ರೆ ಭಾರತದಲ್ಲಿ (India) ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಯಾವುದೇ ಯೋಜನೆಯನ್ನ ಟೆಸ್ಲಾ ಸದ್ಯಕ್ಕೆ ಹೊಂದಿಲ್ಲ. ಇದನ್ನೂ ಓದಿ: ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು
Advertisement
Advertisement
ಆರಂಭಿಕ ಬೆಲೆ ಹೇಗೆ?
ಸದ್ಯ ರಿಟೇಲ್ ವ್ಯಾಪಾರಕ್ಕೆ ಮುಂದಾಗಿರುವ ಟೆಸ್ಲಾ, 25,000 ಡಾಲರ್ (ಸುಮಾರು 22 ಲಕ್ಷ ರೂ.) ಆರಂಭಿಕ ಬೆಲೆಯಿಂದ ಮಾರಾಟ ಪ್ರಾರಂಭಿಸಲು ಪ್ಲ್ಯಾನ್ ಮಾಡಿದೆ. ಇದರೊಂದಿಗೆ 2025ರ ಅಂತ್ಯದ ವೇಳೆಗೆ 1 ಶತಕೋಟಿ ವಹಿವಾಟು ನಡೆಸುವ ಗುರಿ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರ್ ಇ ವಿಟಾರಾ ಅನಾವರಣ; 500 ಕಿಮೀ ರೇಂಜ್
Advertisement
ಭಾರತದಲ್ಲಿ ಟೆಸ್ಲಾ ನೇಮಕಾತಿ ಶುರು:
ಅಮೆರಿಕದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಅವರ ಭೇಟಿ ಬಳಿಕ, ಟೆಸ್ಲಾ ಆಟೋಮೊಬೈಲ್ ಸಂಸ್ಥೆಯು ಭಾರತದಲ್ಲಿ ನೇಮಕಾತಿಯನ್ನು ಆರಂಭಿಸಿದೆ. ಟೆಸ್ಲಾ ಕಂಪನಿಯು ಗ್ರಾಹಕ ಸಂಪರ್ಕ ಮತ್ತು ಆಡಳಿತ ಸೇರಿದಂತೆ ಒಟ್ಟು 13 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮುಂಬೈ ಮತ್ತು ದೆಹಲಿ ಕೇಂದ್ರಿತ ನೇಮಕಾತಿಗಳಿಗೆ ಟೆಸ್ಲಾ ಮುಂದಡಿ ಇಟ್ಟಿದೆ. ಇದನ್ನೂ ಓದಿ: ಮಾರುತಿಯ 40 ವರ್ಷದ ಓಟಕ್ಕೆ ಟಾಟಾ ಬ್ರೇಕ್ – ಪಂಚ್ ದೇಶದ ನಂ.1 ಕಾರು!