ನವದೆಹಲಿ: ಬಾಲಕೋಟ್ ನಲ್ಲಿ ತರಬೇತಿ ಪಡೆಯುತ್ತಿದ್ದ ಉಗ್ರರು ಭಾರತದ ಒಳಗೆ ನುಸುಳಲು ಪಾಕ್ ಆಕ್ರಮಿತ ಕಾಶ್ಮೀರದಿಂದ ನಾಲ್ಕು ಮಾರ್ಗಗಳನ್ನು ಬಳಸುತ್ತಿದ್ದರು ಎಂಬುದನ್ನು ಸೇನೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಬಾಲಕೋಟ್-ಕೆಲ್-ದುಢ್‍ನಿಯಾಲ್, ಬಾಲಕೋಟ್-ಕೆಲ್-ಕೈಂತಾವಾಲಿ, ಬಾಲಕೋಟ್-ಕೆಲ್-ಲೋಲಾಬ್ ಮತ್ತು ಬಾಲಕೋಟ್-ಕೆಲ್-ಕಚಾಮಾ-ಕ್ರಾಲ್‍ಪೋರಾ ಎಂಬ ನಾಲ್ಕು ಮಾರ್ಗಗಳನ್ನು ಭಾರತದೊಳಗೆ ಬರಲು ಉಗ್ರರು ಬಳಸಿಕೊಳ್ಳುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
Advertisement
Advertisement
ಬಾಲ್‍ಕೋಟ್- ಕೆಲ್ ಪಿಓಕೆಯಲ್ಲಿದ್ದರೆ, ದುಢ್‍ನಿಯಾಲ್ ಕಾಶ್ಮೀರದ ಕುಪ್ವಾರದಲ್ಲಿದೆ. ಕೈಂತಾವಾಲಿ, ಕಚಾಮಾ, ಕ್ರಾಲ್‍ಪೋರಾ ಮತ್ತು ಲೋಲಾಬ್ ಕುಪ್ವಾರದ ಮಗಂ ಅರಣ್ಯದಲ್ಲಿದೆ. ಬಾಲಕೋಟ್ ನಲ್ಲಿ ಮೂರು ತಿಂಗಳು ತರಬೇತಿ ಪಡೆದುಕೊಂಡ ಉಗ್ರರು ಈ ಮಾರ್ಗಗಳ ಮೂಲಕ ಭಾರತ ಪ್ರವೇಶಿಸಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು.
Advertisement
ಗನ್ ಹಿಡಿಯೋದು ಸೇರಿದಂತೆ ಪ್ರಾಥಮಿಕ ತರಬೇತಿ ಪಡೆದ ಉಗ್ರರನ್ನು ಬಾಲಕೋಟ್ ಗೆ ರವಾನಿಸಲಾಗುತ್ತಿತ್ತು ಬಾಲಕೋಟ್ ನಲ್ಲಿ ಉಗ್ರರಿಗೆ ಎಕೆ-47, ಪಿಕಾ, ಎಲ್‍ಎಂಜಿ, ರಾಕೆಟ್ ಉಡಾವಣೆ, ಯುಬಿಜಿಎಲ್ ಮತ್ತು ಗ್ರೆನೆಡ್ ಬಳಕೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಇದೇ ವೇಳೆ ಸ್ವಿಮಿಂಗ್, ಕುದುರೆ ಸವಾರಿ ಮತ್ತು ಕತ್ತಿ ವರಸೆಯನ್ನು ಕಲಿಸಲಾಗುತ್ತಿತ್ತು. ಈ ಉಗ್ರರ ತರಬೇತಿ ಶಿಬಿರವನ್ನು ‘ಮದ್ರಸಾ ಆಯೇಷಾ ಸಾದಿಕ್’ ಹೆಸರಿನಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು.
Advertisement
ಬಾಲಕೋಟ್ ಶಿಬಿರದಲ್ಲಿ 25ರಿಂದ 27 ಜನರ ಮೇಲ್ವಿಚಾರಣೆಯಲ್ಲಿ ಸುಮಾರು 325 ಉಗ್ರರು ತರಬೇತಿ ಪಡೆದುಕೊಳ್ಳುತ್ತಿದ್ದರು. ಫೆಬ್ರವರಿ 14ರದಂದು ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಭಾರತೀಯ ವಾಯುಸೇನೆ ಫೆಬ್ರವರಿ 26ರಂದು ಗಡಿರೇಖೆಯನ್ನು ದಾಟಿ ಮೂರು ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿ ಯಶಸ್ವಿಯಾಗಿ ಹಿಂದಿರುಗಿತ್ತು.
https://www.youtube.com/watch?v=tWx5VyQ388w
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv