– ಪಹಲ್ಗಾಮ್ ಜೊತೆಗೆ ನಾಲ್ಕು ತಾಣಗಳಲ್ಲಿ ದಾಳಿಗೆ ಹೊಂಚು ಹಾಕಿದ್ದ ಭಯೋತ್ಪಾದಕರು
ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terror Attack) ತನಿಖೆಗಿಳಿದಿರುವ ತನಿಖಾ ಸಂಸ್ಥೆಗಳು ಹಲವಾರು ಅಚ್ಚರಿದಾಯಕ ಅಂಶಗಳನ್ನು ಬಹಿರಂಗಪಡಿಸಿವೆ. ಭಯೋತ್ಪಾದಕರು ಪಹಲ್ಗಾಮ್ ಜೊತೆ ಇನ್ನೂ ಮೂರು ತಾಣಗಳನ್ನು ಟಾರ್ಗೆಟ್ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಏಪ್ರಿಲ್ 22 ರಂದು 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯನ್ನು ನಡೆಸಿದ ಭಯೋತ್ಪಾದಕರು ಘಟನೆಗೆ ಎರಡು ದಿನಗಳ ಮೊದಲೇ ಬೈಸರನ್ ಕಣಿವೆಯಲ್ಲಿ ಇದ್ದರು ಎಂದು ಮೂಲಗಳು ತಿಳಿಸಿವೆ. ಬೈಸರನ್ ವ್ಯಾಲಿಯಲ್ಲಿ ದಾಳಿಗೂ ಮುನ್ನ ಉಗ್ರರು ಪರಿಶೀಲನೆ ನಡೆಸಿದ್ದರು. ದಾಳಿಗೆ ಪಕ್ಕಾ ಪ್ಲ್ಯಾನ್ ಮಾಡಿದ್ದರು ಎಂಬ ವಿಚಾರವನ್ನು ದಾಳಿಗೆ ಸಂಬಂಧಿಸಿದಂತೆ ಬಂಧಿತ ಓವರ್ ಗ್ರೌಂಡ್ ವರ್ಕರ್ (OGW) ಗಳಲ್ಲಿ ಒಬ್ಬನಾದ ಸ್ಥಳೀಯ ವ್ಯಕ್ತಿ ಬಾಯ್ಬಿಟ್ಟಿದ್ದಾನೆ. ಈತ ಉಗ್ರರಿಗೆ ಸಹಾಯ ಮಾಡಿದ್ದ. ಇದನ್ನೂ ಓದಿ: ಐಎಸ್ಐ ಮುಖ್ಯಸ್ಥನನ್ನು ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಿಸಿದ ಪಾಕ್
ಆಯ್ಕೆ 4, ಟಾರ್ಗೆಟ್ 1
ಉಗ್ರರು ಪಹಲ್ಗಾಮ್ ಬೈಸರನ್ ವ್ಯಾಲಿ ಜೊತೆಗೆ ಅರು ವ್ಯಾಲಿ, ಸ್ಥಳೀಯ ಅಮ್ಯೂಸ್ ಮೆಂಟ್ ಪಾರ್ಕ್, ಬೇತಾಬ್ ವ್ಯಾಲಿ (ಪುಣೆ ವ್ಯಕ್ತಿಯ ಮಗಳು ರೀಲ್ಸ್ ಮಾಡಿದ್ದ ಜಾಗ)ಯನ್ನೂ ದಾಳಿಗೆ ಗುರಿಯಾಗಿಸಿದ್ದರು. ಆದರೆ, ಕೊನೆಗೆ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದಾರೆ.
ಪಹಲ್ಗಾಮ್ ಹೊರತುಪಡಿಸಿ ಉಳಿದ ಎಲ್ಲ ಕಡೆ ಬಿಗಿ ಭದ್ರತೆ ಇತ್ತು. ಹೀಗಾಗಿ, ಕೊನೆಗೆ ಬೈಸರನ್ ವ್ಯಾಲಿಯಲ್ಲಿ ದಾಳಿ ನಡೆಸುವ ಪ್ಲ್ಯಾನ್ ಅನ್ನು ಉಗ್ರರು ಫೈನಲ್ ಮಾಡಿದ್ದರು. ನಾಲ್ವರು ಸ್ಥಳೀಯರಿಂದ (Over Ground Workers or OGWs) ಉಗ್ರರಿಗೆ ಸಹಾಯ ಸಿಕ್ಕಿತ್ತು. ಲಾಜಿಸ್ಟಿಕ್ ವ್ಯವಸ್ಥೆ ಮಾಡಿಕೊಡಲಾಗಿತ್ತು. ಇದನ್ನೂ ಓದಿ: ಪಹಲ್ಗಾಮ್ ದಾಳಿ ಹಿಂದಿನ ‘ನೀನು ಹಿಂದೂನಾ’ ಅಂತ ಒಬ್ಬ ನನಗೆ ಕೇಳಿದ್ದ – ಉಗ್ರನ ಬಗ್ಗೆ ಪ್ರವಾಸಿಗರೊಬ್ಬರ ಸ್ಫೋಟಕ ಹೇಳಿಕೆ
ಸ್ಥಳೀಯ 20 ಮಂದಿಯು ಉಗ್ರರಿಗೆ ಸಹಾಯ ಮಾಡಿದ್ದಾರೆ. ಇವರಲ್ಲಿ ಕೆಲವರನ್ನು ಬಂಧಿಸಿರುವ ಎನ್‌ಐಎ ಇನ್ನೂ ಕೆಲ ಶಂಕಿತರ ಮೇಲೆ ಕಣ್ಗಾವಲು ಇರಿಸಿದೆ. ದಾಳಿಗೂ ಮುನ್ನ ಈ ಏರಿಯಾದಲ್ಲಿ ಮೂರು ಸ್ಯಾಟಲೈಟ್ ಫೋನ್‌ಗಳ ಬಳಕೆಯಾಗಿವೆ. ಇದರಲ್ಲಿ 2 ಫೋನ್‌ಗಳ ಸಿಗ್ನಲ್ ಟ್ರೇಸ್ ಮಾಡುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.
ಇದುವರೆಗೆ 2,500 ಜನರ ವಿಚಾರಣೆ ನಡೆಸಲಾಗಿದೆ. 186 ಮಂದಿಯನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಇದನ್ನೂ ಓದಿ: ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ – LOCಯಲ್ಲಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ