ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಿದೆ: ಟ್ರುಡೊ ವಿರುದ್ಧ ಲಂಕಾ ಸಚಿವ ವಾಗ್ದಾಳಿ

Public TV
2 Min Read
Ali Sabry justin trudeau

ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಕುರಿತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಭಾರತದ ವಿರುದ್ಧ ನೀಡಿದ ಹೇಳಿಕೆ ಎರಡು ದೇಶಗಳ ರಾಜತಾಂತ್ರಿಕ ಬಿರುಕಿಗೆ ಕಾರಣವಾಗಿದೆ. ಕೆಲವು ಭಯೋತ್ಪಾದಕರಿಗೆ (Terrorist) ಕೆನಡಾದಲ್ಲಿ (Canada) ಸುರಕ್ಷಿತ ನೆಲೆ ಸಿಕ್ಕಿದೆ ಎಂದು ಶ್ರೀಲಂಕಾದ (Sri Lanka) ವಿದೇಶಾಂಗ ಸಚಿವ ಅಲಿ ಸೆಬ್ರಿ (Ali Sabry) ಹೇಳುವ ಮೂಲಕ ಭಾರತವನ್ನು ಬೆಂಬಲಿಸಿದ್ದಾರೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ವಾಗ್ದಾಳಿ ನಡೆಸಿದ ಸೆಬ್ರಿ, ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಂತಾಗಿದೆ. ಕೆನಡಾದ ಪ್ರಧಾನಿ ಯಾವುದೇ ಆಧಾರಗಳಿಲ್ಲದೆ ಭಾರತದ ವಿರುದ್ಧ ಅತಿರೇಕದ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶ್ರೀಲಂಕಾದ ವಿರುದ್ಧವೂ ಹಿಂದೆ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಶ್ರೀಲಂಕಾದಲ್ಲಿ ಭಯಾನಕ ನರಮೇಧವಾಗಿತ್ತು ಎಂಬ ಹೇಳಿಕೆ ಸಂಪೂರ್ಣ ಸುಳ್ಳು. ನಮ್ಮ ದೇಶದಲ್ಲಿ ಅಂತಹ ಯಾವುದೇ ನರಮೇಧ ನಡೆದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು. ಇದನ್ನೂ ಓದಿ: ಜಾಗರೂಕರಾಗಿರಿ! – ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಕೆನಡಾ ಎಚ್ಚರಿಕೆ

ಟ್ರುಡೊ 2ನೇ ಮಹಾಯುದ್ಧದ ಸಮಯದಲ್ಲಿ ಹಿಂದೆ ನಾಜಿಗಳೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬರಿಗೆ ಅದ್ದೂರಿ ಸ್ವಾಗತ ನೀಡಿದ್ದರು. ಇದು ಪ್ರಶ್ನಾರ್ಹ ವಿಚಾರ. ಕೆಲವೊಮ್ಮೆ ಟ್ರುಡೊ ಅತಿರೇಕದ ಹಾಗೂ ಆಧಾರರಹಿತ ಆರೋಪಗಳನ್ನು ಮಾಡುವ ವಿಚಾರ ಹೊಸದೇನಲ್ಲ ಎಂದಿದ್ದಾರೆ. ಇದನ್ನೂ ಓದಿ: ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ CWRC ಆದೇಶ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article