ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉಗ್ರರ ಜಾಡು ಪತ್ತೆಯಾಗಿದ್ದು, ಆರ್‌ಎಸ್‌ಎಸ್ ನಾಯಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಹೇಳಿದೆ.
ಬೆಂಗಳೂರಿನಲ್ಲಿ ಐಸಿಸ್ ಹಾಗೂ ಜೆಎಂಬಿ(ಜಮಾತ್ ಉಲ್ ಮುಜಾಹಿದ್ದೀನ್) ಉಗ್ರರು ಬೀಡು ಬಿಟ್ಟಿದ್ದಾರೆ. ಕರ್ನಾಟಕ, ಕೇರಳದಲ್ಲಿ ಜೆಎಂಬಿ ಉಗ್ರರು ಸಕ್ರಿಯರಾಗಿದ್ದಾರೆ. ಆರ್‌ಎಸ್‌ಎಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಿದ್ದಾರೆ ಎಂದು ಎನ್‍ಐಎ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ರಾಜ್ಯ ರಾಜಧಾನಿಯಲ್ಲೇ ಉಗ್ರರ ಬಗ್ಗೆ ಮಾಹಿತಿ ಪತ್ತೆಯಾಗಿದ್ದು, 125 ಶಂಕಿತ ಉಗ್ರರ ಬಗ್ಗೆ ಎನ್‍ಐಎ ಮಾಹಿತಿ ಸಂಗ್ರಹಿಸಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ತನಿಖಾ ದಳ ಹೈ ಅಲರ್ಟ್ ನೀಡಿದ್ದು, ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮುಖ್ಯಸ್ಥರ ಸಭೆಯಲ್ಲಿ ಎನ್‍ಐಎ ಮುಖ್ಯಸ್ಥ ಅಲೋಕ್ ಮಿತ್ತಲ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
Advertisement
ಬೆಂಗಳೂರು ಮತ್ತು ಸುತ್ತಮುತ್ತ 20, 22 ಅಡಗುದಾಣಗಳನ್ನು ಪತ್ತೆ ಹಚ್ಚಲಾಗಿದ್ದು, ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿಯೂ ಜೆಎಂಬಿ ಉಗ್ರರು ಸಕ್ರಿಯರಾಗಿರಾಗಿದ್ದಾರೆ ಎಂದು ತಿಳಿದು ಬಂದಿದೆ.