ಲಕ್ನೋ: ನೂಪುರ್ ಶರ್ಮಾರನ್ನ ಹತ್ಯೆ ಮಾಡಲು ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಹಾಗೂ ತಹ್ರಿಖ್-ಎ-ತಾಲಿಬಾನ್ ಸಂಘಟನೆಗಳಿಂದ ಸುಪಾರಿ ಪಡೆದಿದ್ದ ಭಯೋತ್ಪಾದಕ ಮೊಹಮ್ಮದ್ ನದೀಮ್‌ನನ್ನು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳವು ಬಂಧಿಸಿದೆ.
Uttar Pradesh | Terrorist Muhammad Nadeem was in direct contact with Pakistan-based terrorist outfits JeM & TTP. He was given the task by JeM to kill Nupur Sharma: UP ATS https://t.co/o9EUvPObyh
— ANI UP/Uttarakhand (@ANINewsUP) August 12, 2022
Advertisement
ಪಾಕಿಸ್ತಾನ ಮೂಲದ ಜೆಎಂಇ ಹಾಗೂ ಟಿಟಿಪಿ ಭಯೋತ್ಪಾದನಾ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ನದೀಮ್ ನೂಪರ್ ಶರ್ಮಾರನ್ನು ಕೊಲ್ಲುವ ಕೆಲಸ ವಹಿಸಿಕೊಂಡಿದ್ದ. ಅವನನ್ನು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್ ಹೇಳಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಏನ್ ಬಿಚ್ಚಿಡುತ್ತಾರೋ ಬಿಚ್ಚಿಡಲಿ: ಸುಧಾಕರ್ ತಿರುಗೇಟು
Advertisement
Advertisement
ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ಮುಸ್ಲಿಂ ರಾಷ್ಟ್ರಗಳಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೆಲ ಪಾಕಿಸ್ತಾನಿ ಸಂಘಟನೆಗಳು ನೂಪುರ್ ಶರ್ಮಾರನ್ನ ಕೊಲ್ಲುವುದಕ್ಕೆ ಬಹಿರಂಗವಾಗಿ ಆಫರ್‌ಗಳನ್ನು ಘೋಷಣೆ ಮಾಡಿದ್ದವು. ದೇಶದ ವಿವಿಧ ರಾಜ್ಯಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದವು. ಇದೀಗ ಸುಪ್ರೀಂ ಕೋರ್ಟ್ ಅವರ ವಿರುದ್ಧದ ಎಲ್ಲ ಕೇಸ್‌ಗಳನ್ನು ದೆಹಲಿಗೆ ವರ್ಗಾಯಿಸಲಾಗಿದೆ.