ಶ್ರೀನಗರ: ಇಡೀ ದೇಶಕ್ಕೆ ದೇಶವೇ ಅಭಿನಂದನ್ ಸ್ವಾಗತಕ್ಕೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಆದರೆ ಕಣಿವೆ ನಾಡಿನಲ್ಲಿ ಉಗ್ರರು ತಮ್ಮ ಕುತಂತ್ರಿ ಬುದ್ಧಿ ಮುಂದುವರಿಸಿದ್ದು, ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಐವರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ.
ಉಗ್ರರು ಮತ್ತು ಸೇನಾಪಡೆಗಳ ನಡುವೆ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಐವರು ಸೇನಾಧಿಕಾರಿಗಳು ಹುತಾತ್ಮರಾಗಿದ್ದು, ಓರ್ವ ನಾಗರಿಕ ಕೂಡ ಸಾವನ್ನಪ್ಪಿದ್ದಾರೆ.
Advertisement
Advertisement
ಗುಂಡಿನ ದಾಳಿಯಲ್ಲಿ ಉಗ್ರಗಾಮಿಯೋರ್ವ ಸತ್ತಂತೆ ನಟಿಸಿದ್ದು, ಹತ್ತಿರ ಬರುತ್ತಿದ್ದ ಸೇನಾಪಡೆ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಈ ವೇಳೆ ಸಿಆರ್‍ಪಿಎಫ್ ಇನ್ಸ್ ಪೆಕ್ಟರ್ ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇತ್ತ ಸತ್ತಂತೆ ನಟಿಸಿ ಯೋಧರನ್ನು ಕೊಂದ ಉಗ್ರ ಕೂಡ ಫಿನೀಶ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.
Advertisement
ಭಾರತ ಮತ್ತು ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದ್ದರೂ ಪಾಕಿಸ್ತಾನ ತನ್ನ ಕುತಂತ್ರಿ ಬುದ್ಧಿ ಬಿಟ್ಟಿಲ್ಲ. ಉಗ್ರರ ಮೂಲಕ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಶಾಂತಿ ಕದಡುತ್ತಿದೆ.
Advertisement
ಗಡಿಯಲ್ಲಿನ ಕೊನೆಯ ಹಳ್ಳಿಗಳಲ್ಲಿ ವಾಸವಾಗಿರುವವರ ಭದ್ರತೆಗಾಗಿ ಪೂಂಚ್ ಸೆಕ್ಟರ್‍ನಲ್ಲಿ ಸೇನಾ ಬಂಕರ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಸೇನೆ ನಮ್ಮ ಸುತ್ತಮುತ್ತಲೇ ಇರುವುದರಿಂದ ನಮಗೆ ಪಾಕಿಸ್ತಾನ ನೀಡುತ್ತಿದ್ದ ಭೀತಿ ದೂರಾಗಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ. ಈ ಮಧ್ಯೆ ಗಡಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿ ಹುತಾತ್ಮರಾದ ಇಬ್ಬರು ಪೈಲಟ್‍ಗಳ ಅಂತ್ಯಕ್ರಿಯೆ ಹುಟ್ಟೂರುಗಳಲ್ಲಿ ಸೇನಾ ಗೌರವದೊಂದಿಗೆ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv