ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಶೋಪಿಯಾನ್‍ನ ಕಥೋಹಾಲನ್‍ನಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು (Police) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್‍ನ (TRF) ಉಗ್ರನನ್ನು ಹೊಡೆದುರುಳಿಸಿವೆ.
ಹತ್ಯೆಗೀಡಾದ ಭಯೋತ್ಪಾದಕನನ್ನು ಮೈಸರ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ. ಎನ್‍ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಉಗ್ರರು ಅಡಗಿರುವ ಶಂಕೆ ಮೇಲೆ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿವೆ. ಇದನ್ನೂ ಓದಿ: ಐಸಿಸ್ ಸೇರಲು ಯುವಕರಿಗೆ ಪ್ರಚೋದನೆ – ಇಬ್ಬರು ಉಗ್ರರ ಅರೆಸ್ಟ್
ಅಲ್ಲದೇ ಈ ಪ್ರದೇಶದಲ್ಲಿ ಇತ್ತೀಚೆಗೆ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದರು. ಇದಾದ ಬಳಿಕ ಉಗ್ರರ ವಿರುದ್ಧ ಸೇನೆ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಅಲ್ಲದೇ ಭಯೋತ್ಪಾದಕರ ದಾಳಿಗಳ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದನ್ನೂ ಓದಿ: Diwali: ದೀಪಾವಳಿಗೆ ಅಯೋಧ್ಯೆಯಲ್ಲಿ ಬೆಳಗಲಿವೆ 24 ಲಕ್ಷ ದೀಪಗಳು – ವಿಶ್ವ ದಾಖಲೆಗೆ ವೇದಿಕೆ ಸಜ್ಜು