Operation Akhal | ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿ

Public TV
2 Min Read
Jammu And Kashmir 1

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ʻಆಪರೇಷನ್‌ ಅಖಾಲ್‌ʼ (Operation Akhal) ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆಗೀಡಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ (South Kashamir) ಕುಲ್ಗಾಮ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಗುಪ್ತಚರ (Intelligence) ಮಾಹಿತಿ ಪಡೆದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ʻಆಪರೇಷನ್‌ ಅಖಾಲ್‌ʼ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿತು. ಅರಣ್ಯ ಪ್ರದೇಶ ಸುತ್ತುವರಿದು ಶೋಧ ಆರಂಭಿಸಿದ ಭದ್ರತಾ ಪಡೆಗಳು ಓರ್ವ ಉಗ್ರನನ್ನ ಹತ್ಯೆಗೈದಿವೆ ಎಂದು ಪೊಲೀಸ್‌ (J&K Police) ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ – ಡೊನಾಲ್ಡ್‌ ಟ್ರಂಪ್‌

Indian Army

ಶೋಧ ನಡೆಯುತ್ತಿದ್ದಂತೆಯೇ ಉಗ್ರರು ಗುಂಡಿನ ದಾಳಿ ನಡೆಸಲು ಮುಂದಾದ್ರು. ಇದರಿಂದ ಯೋಧರು ಪ್ರತಿದಾಳಿಗೆ ಮುಂದಾದರು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿಯಿತು, ಗುಂಡಿನ ಸದ್ದು ಮೊಳಗುತ್ತಿದ್ದರಿಂದ ಸ್ಥಳೀಯರಿಗೂ ಈ ಪ್ರದೇಶದತ್ತ ಸುಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಈವರೆಗೆ ಓರ್ವ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ʻಆಪರೇಷನ್‌ ಅಖಾಲ್‌ʼ ಮುಂದುವರಿದಿದೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ (Chinar Corps) ತಿಳಿಸಿದೆ.  ಇದನ್ನೂ ಓದಿ: ಪಾಕ್‌ ಬೆಂಬಲಿಸಿದ ಟರ್ಕಿಗೆ ಶಾಕ್‌ – ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತ

Jammu And Kashmir

ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಲಿಡ್ವಾಸ್‌ ಪ್ರದೇಶದ ದಚಿಗಮ್ ಅರಣ್ಯ ಪ್ರದೇಶದಲ್ಲಿ ʻಆಪರೇಷನ್‌ ಮಹಾದೇವ್‌ʼ (Operation MAHADEV) ಕಾರ್ಯಾಚರಣೆ ನಡೆಸಿದ್ದ ಚಿನಾರ್‌ ಕಾರ್ಪ್ಸ್‌ ಮೂವರು ವಿದೇಶಿ ಉಗ್ರರನ್ನ ಬೇಟೆಯಾಡಿತ್ತು. ಈ ಪೈಕಿಯಲ್ಲಿ ಹೊಬ್ಬ ಪಹಲ್ಗಾಮ್‌ ನರಮೇಧಕ್ಕೆ ಕಾರಣವಾದ ಉಗ್ರನಾಗಿದ್ದ. ಈ ಬೆನ್ನಲ್ಲೇ ಮತ್ತು ಕಾರ್ಯಾಚರಣೆ ಕೈಗೊಂಡಿದೆ.  ಇದನ್ನೂ ಓದಿ: 8 ಪುರುಷರ ಮದುವೆಯಾಗಿ ಲಕ್ಷಾಂತರ ಹಣ ವಸೂಲಿ – 9ನೇ ಮದುವೆಯಾಗಲು ಮಾತುಕತೆಗೆ ಹೊರಟಿದ್ದವಳು ಸಿಕ್ಕಿಬಿದ್ಳು!

Share This Article