ಬೆಂಗಳೂರು: ನೆಹರೂ ಮನೆತನ 37 ವರ್ಷ ದೇಶವನ್ನು ಆಳಿದ್ದು, ಇವರ ಆಡಳಿತ ದೇಶಕ್ಕೆ ಶಾಪ ಆಯ್ತು. ನೆಹರು ಮನೆತನದವರಿಂದ ದೇಶದಲ್ಲಿ ಭಯೋತ್ಪಾದನೆ ಹುಟ್ಟಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಡುಗೋಡಿ ಮುನಿಚಿನ್ನಪ್ಪ ಕ್ರೀಡಾಂಗಣದಲ್ಲಿ ಮೋದಿ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ನವರು ರೈತರ ಬೆನ್ನು ಮುರಿದವರು. ದಲಿತರ ಉದ್ದಾರ ಮಾಡದೇ ಅವರನ್ನ ಹೆಸರಿಗೆ ಬಳಸಿಕೊಂಡಿದ್ದಾರೆ. ದಲಿತ ಅಭಿವೃದ್ದಿ ಮಾಡಿಲ್ಲ ಅಂತಾ ಕಾಂಗ್ರೆಸ್ ವಿರುದ್ಧ ಸಿಡಿಮಿಡಿಗೊಂಡರು.
ಮೋದಿಯವರಿಗೆ ದೇಶದ ಬಡವರ ಕಷ್ಟ-ಸುಖ ಗೊತ್ತು. ಹೀಗಾಗಿ ದೇಶಕ್ಕೆ ಅನೇಕ ಅಭಿವೃದ್ಧಿ ಕಾರ್ಯಕ್ರಮ ಕೊಟ್ಟಿದ್ದಾರೆ. ಹಿಂದೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಕಾರ್ಯಕ್ರಮ ಜಾರಿಗೆ ತಂದ್ರು. ಆದ್ರೆ ಅದನ್ನ ಅನುಷ್ಠಾನ ಮಾಡಿಲ್ಲ. ಮೋದಿ ಸೈಲೈಂಟ್ ಆಗಿ ಎಲ್ಲ ಯೋಜನೆಗಳಿಗೆ ಅನುಷ್ಠಾನ ಮಾಡ್ತಿದ್ದಾರೆ. ಕಾಂಗ್ರೆಸ್ ಮಾಡದ ಕೆಲಸವನ್ನ ಬಿಜೆಪಿಯ ಮೋದಿ ಸರ್ಕಾರ ಮಾಡ್ತಿದೆ ಅಂತಾ ಹೇಳಿದ್ರು.
ಬಳಿಕ ಮಾಜಿ ಡಿಸಿಎಂ ಆರ್ ಅಶೋಕ್ ಮಾತನಾಡಿ, 10 ವರ್ಷ ಕಾಂಗ್ರೆಸ್ ಮನಮೋಹನ್ ಸಿಂಗ್ ಸರ್ಕಾರ ಇತ್ತು ಅಂತ ಯಾರಿಗೂ ಅನ್ನಿಸಿರಲಿಲ್ಲ. ಸೋನಿಯಾ ಗಾಂಧಿ ಸರ್ಕಾರ ಅಂತ ಎಲ್ಲರಿಗೂ ಅನ್ನಿಸಿತ್ತು. ಇವತ್ತು ಮೋದಿ ಸರ್ಕಾರ ಜನರ ಸರ್ಕಾರವಾಗಿದೆ. ಮೋದಿ ವಿಶ್ವಮಟ್ಟದಲ್ಲಿ ದೇಶದ ಕೀರ್ತಿ ಹಾರಿಸಿದ್ದಾರೆ. ಕರ್ನಾಟಕದ ವಿದ್ಯಾರ್ಥಿಯೊಬ್ಬಳು ಮೋದಿಗೆ ಪತ್ರ ಬರೆದು ಫ್ಲೈ ಓವರ್ ಬೇಕು ಅಂತಾ ಕೇಳಿದ್ದಾಳೆ. ಪ್ರಧಾನಿ ಮೋದಿ ಅದಕ್ಕೆ ಸ್ಪಂದನೆಯನ್ನೂ ನೀಡಿದ್ದಾರೆ. ಮನಮೋಹನ್ ಸಿಂಗ್ ಸೀನಿಯರ್ ಸಿಟಿಜನ್ ಹೋದ್ರು ಏನು ಮಾಡ್ತಿರಲಿಲ್ಲ ಅಂತಾ ಹೇಳಿದ್ರು.
ಕಾಳಧನಿಕರಿಗೆ ಮೋದಿ ತಕ್ಕ ಪಾಠ ಕಲಿಸಿದ್ದಾರೆ. ದೇಶಕ್ಕೆ ಮೋದಿ ಏನಾದ್ರು ಮಾಡ್ತಾರೆ ಅಂತಾ ಬಡವರು, ರೈತರಿಗೆ ಗೊತ್ತು. ಕಾಂಗ್ರೆಸ್, ಜೆಡಿಎಸ್ ಅವ್ರನ್ನ ಆಫ್ ದ ರೆಕಾರ್ಡ್ ಕೇಳಿ ಅವರೇ ಮೋದಿ ಜನರ ಮನಸ್ಸಿಗೆ ಹೋಗಿದ್ದಾರೆ ಅಂತಾರೆ. ರಾಜ್ಯದಲ್ಲಿ ನಿದ್ರೆ ಮಾಡೋ ಸಿದ್ರಾಮಯ್ಯ ಸರ್ಕಾರ ಇದೆ. 4 ವರ್ಷದಿಂದ ನಿದ್ರೆಯಿಂದ ಎದ್ದೇಳಿ ಅಂದ್ರು ಇನ್ನೂ ಸಿದ್ದರಾಮಯ್ಯ ಎದ್ದಿಲ್ಲ. ಕಾಂಗ್ರೆಸ್ ಉಸ್ತುವಾರಿ ಪಕ್ಕದಲ್ಲೇ ಸಿದ್ದರಾಮಯ್ಯ ನಿದ್ರೆ ಮಾಡ್ತಾರೆ. ಎಲ್ಲಿ ಮೋದಿ, ಎಲ್ಲಿ ಸಿದ್ದರಾಮಯ್ಯ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ ಅಂತಾ ಅಶೋಕ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಶಾಸಕರಾದ ರಘು, ಬಿ.ಎನ್.ವಿಜಯಕುಮಾರ್, ವಿಧಾನಪರಿಷತ್ ಸದಸ್ಯರಾದ ವಿ.ಸೋಮಣ್ಣ, ತಾರಾ, ಲೆಹರ್ ಸಿಂಗ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.