ಬೆಂಗಳೂರು: ಸಿಸಿಬಿ ಪೊಲೀಸರಿಂದ (CCB Police) ಬಂಧನಕ್ಕೊಳಗಾದ ಶಂಕಿತ ಉಗ್ರರ (Suspected Terrorists) ಟಾರ್ಗೆಟ್ ಬೆಂಗಳೂರು (Bengaluru) ಮಾತ್ರವಲ್ಲ ಜೊತೆಗೆ ಹಿಂದೂ ನಾಯಕರನ್ನು (Hindu Leaders) ಗುರಿಯಾಗಿಸಿಕೊಂಡಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ.
ಕೇವಲ ಜನನಿಬಿಡ ಪ್ರದೇಶಗಳಷ್ಟೆ ಇವರ ಟಾರ್ಗೆಟ್ ಆಗಿತ್ತು ಎಂದು ಬಂಧನದ ವೇಳೆ ಹೇಳಲಾಗಿತ್ತು. ಈಗ ಹಿಂದುತ್ವ ಪ್ರತಿಪಾದಿಸುವ ಹಿಂದೂ ಮುಖಂಡರು ಹಾಗೂ ರಾಜಕಾರಣಿಗಳ ಮೇಲೂ ಕಣ್ಣಿಟ್ಟಿದ್ದರು. ಇದೇ ಕಾರಣಕ್ಕೆ ಅಪಾರ ಪ್ರಮಾಣದ ಸ್ಫೋಟಕ ಸಾಮಾಗ್ರಿ ಹಾಗೂ ಪಿಸ್ತೂಲ್‍ಗಳನ್ನು ಸಂಗ್ರಹಿಸಿಕೊಂಡಿದ್ದರು ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ರೌಡಿಗಳಾಗಿ ಜೈಲು ಸೇರಿದ್ದವರಿಗೆ ಸಿಕ್ಕಿತು ಉಗ್ರರ ಪಾಠ!
ಶಂಕಿತರು ಉತ್ತರಪ್ರದೇಶದಿಂದ 7 ಕಂಟ್ರಿ ಮೇಡ್ ಪಿಸ್ತೂಲ್‍ಗಳನ್ನು ಬೆಂಗಳೂರಿಗೆ ತರಿಸಿದ್ದರು. ಗುಂಡುಗಳು ಹಾಗೂ ವಾಕಿ ಟಾಕಿಗಳನ್ನು ಸಹಚರರ ಮೂಲಕ ಶಂಕಿತರಿಗೆ ಜುನೈದ್ ತಲುಪಿಸುತ್ತಿದ್ದ. ವಿಶೇಷವೆಂದರೆ ಮದ್ದು ಗುಂಡುಗಳನ್ನು ತಂದುಕೊಟ್ಟವರು ಯಾರು ಎನ್ನುವ ಮಾಹಿತಿ ತಿಳಿಯದಂತೆ ನೋಡಿಕೊಳ್ಳಲಾಗುತ್ತಿತ್ತು. ಇದೇ ಜಾಗದಲ್ಲಿ ವಿದ್ವಂಸಕ ಕೃತ್ಯ ಎಸಗಬೇಕು ಎಂಬ ಟಾರ್ಗೆಟ್ ಇನ್ನೂ ಫಿಕ್ಸ್ ಮಾಡಿಕೊಳ್ಳದ ಶಂಕಿತರು ಜುನೈದ್‍ನ ಆದೇಶಕ್ಕಾಗಿ ಕಾಯುತ್ತಿದ್ದರು. ಅಲ್ಲದೇ ತಾನೇ ವಿದೇಶದಿಂದ ಬಂದು ಟಾರ್ಗೆಟ್ ನೀಡುವುದಾಗಿ ತಿಳಿಸಿದ್ದ.
ಶಂಕಿತರ ಗುಂಪಿನ ಮಾಸ್ಟರ್ ಮೈಂಡ್ ಜುನೈದ್ ಯಾವುದೇ ಆನ್‍ಲೈನ್ ವ್ಯವಹಾರವನ್ನೂ ಮಾಡುತ್ತಿರಲಿಲ್ಲ. ಬದಲಿಗೆ ವಾಟ್ಸಾಪ್ ಹಾಗೂ ಇನ್ನಿತರೆ ಮೊಬೈಲ್ ಆ್ಯಪ್‌ಗಳ ಮೂಲಕ ಇವರೊಂದಿಗೆ ಸಂಪರ್ಕದಲ್ಲಿದ್ದ. ಶಂಕಿತರ ಮೊಬೈಲ್‍ಗಳಲ್ಲಿ ಹಿಂದುತ್ವವಾದಿಗಳ ಹೆಸರು ಮತ್ತು ಫೋಟೊಗಳು ಶೇರ್ ಆಗಿರುವ ಸಾಧ್ಯತೆ ಇದೆ. ಇದಕ್ಕಾಗಿ ಮೊಬೈಲ್‍ಗಳ ಪರಿಶೀಲನೆಗೆ ಎಫ್‍ಎಸ್‍ಎಲ್‍ಗೆ ಸಿಸಿಬಿ ಪೊಲೀಸರು ಕಳಿಸಿದ್ದಾರೆ. ಇದನ್ನೂ ಓದಿ: 2 ದಿನದೊಳಗೆ ದೊಡ್ಡ ಮಟ್ಟದ ಸ್ಪೋಟಕ್ಕೆ ನಡೆದಿತ್ತು ಸಿದ್ಧತೆ!
Web Stories