ಶ್ರೀನಗರ: ಅಮರನಾಥ ಯಾತ್ರೆ ಮೇಲೆ ದಾಳಿಗೆ ಯೋಜನೆ ಮಾಡಿದ್ದ ಪಾಕಿಸ್ತಾನದ ಭಯೋತ್ಪಾದಕ ಸೇರಿದಂತೆ ಇಬ್ಬರು ಎಲ್ಇಟಿ ಭಯೋತ್ಪಾದಕರನ್ನು ಪೊಲೀಸರು ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ.
ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಒಬ್ಬ ಪಾಕಿಸ್ತಾನದ ಭಯೋತ್ಪಾದಕ ಸೇರಿದಂತೆ ಇಬ್ಬರು ಎಲ್ಇಟಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 4 ಸಾವಿರ ಕಿ.ಮೀಟರ್ ಕ್ರಮಿಸಿ ಮರಳಿ ದುಬಾರೆಗೆ ಬಂದ ಕುಶ
Advertisement
#Pakistan based handlers had sent two #Pakistani #terrorists of LeT #terror outfit along with one local terrorist Adil Hussain Mir of Pahalgam #Anantnag, who has been in #Pakistan since 2018 (now all 3 killed), with the intention to attack #Yatra: IGP Kashmir@JmuKmrPolice
— Kashmir Zone Police (@KashmirPolice) June 13, 2022
Advertisement
ಮೃತ ಭಯೋತ್ಪಾದಕರು ಜೂನ್ 6 ರಂದು ಸೊಪೂರ್ ಅರಣ್ಯದಲ್ಲಿ ಸಿಕ್ಕ ಗುಂಪಿನ ಭಾಗವಾಗಿದ್ದರು. ಗುಂಡಿನ ದಾಳಿಯಲ್ಲಿನ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಹಂಜಲ್ಲಾ ಮೃತಪಟ್ಟಿದ್ದಾನೆ. ಮುಂಬರುವ ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಉಗ್ರರ ಗುಂಪೊಂದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಮಾತನಾಡಿ, ಶ್ರೀನಗರ ಪೊಲೀಸರು ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಒಬ್ಬ ಪಾಕಿಸ್ತಾನದ ಭಯೋತ್ಪಾದಕ ಸೇರಿದಂತೆ ಇಬ್ಬರು ಎಲ್ಇಟಿ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಇದೇ ಭಯೋತ್ಪಾದಕರ ಗುಂಪು, ಸೊಪೂರ್ ಎನ್ಕೌಂಟರ್ನಿಂದ ತಪ್ಪಿಸಿಕೊಂಡಿತ್ತು. ನಾವು ಅವರ ಚಲನವಲನದ ಮೇಲೆ ನಿಗಾ ಇರಿಸಿ ಹತ್ಯೆ ಮಾಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಪೊಲೀಸ್ ಇಲಾಖೆ ಸಿಬ್ಬಂದಿ ವಿರುದ್ಧ ಪೋಸ್ಟ್ – ಕಾನ್ಸ್ಟೇಬಲ್ ಅಮಾನತು