ಬೀಜಿಂಗ್: ಬಾಲಕಿಯೊಬ್ಬಳು ಆಟ ಆಡುತ್ತಾ 30ನೇ ಅಂತಸ್ತಿನ ಕಿಟಕಿಗೆ ಜೋತು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ನೈಋತ್ಯ ಚೀನಾದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಬಾಲಕಿ ಕಿಟಕಿಗೆ ಅಳವಡಿಸಲಾಗಿದ್ದ ಪ್ರೇಮ್ ಹಿಡಿದುಕೊಂಡು ಜೋತು ಬಿದ್ದಿದ್ದನ್ನು ಕಂಡ ಪಕ್ಕದ ಕಟ್ಟಡದ ಜನರು ಮೊಬೈಲ್ನಲ್ಲಿ ಎಲ್ಲ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾರೆ. ಕಿಟಕಿಯ ಹೊರಭಾಗದಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಒಳಗಿನಿಂದ ಪೋಷಕರು ಎಳೆದುಕೊಂಡು ರಕ್ಷಿಸಿದ್ದಾರೆ. 30ನೇ ಅಂತಸ್ತಿನ ಕಿಟಿಕಿ ಅಂದ್ರೆ ಬರೋಬ್ಬರಿ ನೆಲದಿಂದ ಬರೋಬ್ಬರಿ 295 ಅಡಿಗಳ ಎತ್ತರದಲ್ಲಿ ಬಾಲಕಿ ನೇತಾಡುತ್ತಿದ್ದಳು.
Advertisement
ಹತ್ತಿರದ ಕಟ್ಟಡದಲ್ಲಿದ್ದ ಜನರು ತಾವು ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋ ಜನರು ಬಾಲಕಿಯ ಪೋಷಕರ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ. ಮನೆಯಲ್ಲಿರುವ ಪೋಷಕರು ತಮ್ಮ ಮಕ್ಕಳ ಮೇಲೆ ಗಮನವನ್ನು ಇಟ್ಟಿರಬೇಕು ಅಂತಾ ಕೆಲವರು ಸಲಹೆ ನೀಡಿದ್ರೆ, ಒಂದು ವೇಳೆ ಬಾಲಕಿ ಬಿದ್ದು ಸಾವನ್ನಪ್ಪಿದ್ರೆ, ಒಬ್ಬ ತಾಯಿ ತನ್ನ ಮಗಳನ್ನು ಕಳೆದುಕೊಳ್ಳುತ್ತಿದ್ದಳು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Advertisement
https://www.youtube.com/watch?v=AuPF3PgdBSs