ಬೆಂಗಳೂರು: ನಿಮ್ಮ ಬೈಕ್‍ಗಳನ್ನ ಸುರಕ್ಷಿತವಾದ ಸ್ಥಳದಲ್ಲಿ ಪಾರ್ಕ್ ಮಾಡಿ ಎಂದು ರಸ್ತೆ ಸುರಕ್ಷತೆ ಮತ್ತು ಸಂಚಾರ ಆಯುಕ್ತರಾದ ಡಿ ರೂಪಾ ಟ್ವಿಟ್ಟರ್‍ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ.
ಅಂಗಡಿಯೊಂದರ ಮುಂಭಾಗದಲ್ಲಿ ಬೈಕ್ ಪಾರ್ಕ್ ಮಾಡಲು ಹೋದ ವ್ಯಕ್ತಿ ಬೈಕ್ ಸಮೇತ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಇದನ್ನ ನೋಡಿದ್ರೆ ನಿಜ್ಕಕೂ ಗಾಬರಿಯಾಗುತ್ತೆ. ದಿನಸಿ ಅಂಗಡಿಯೊಂದರ ಬಳಿ ವ್ಯಕ್ತಿ ತಮ್ಮ ಬೈಕ್ ಪಾರ್ಕ್ ಮಾಡಲು ಯತ್ನಿಸಿದ್ದಾರೆ. ಸ್ವಲ್ಪ ಎತ್ತರದಲ್ಲಿದ್ದ ಆ ಜಾಗದಲ್ಲಿ ಈಗಾಗಲೇ ಒಂದು ಬೈಕ್ ನಿಲ್ಲಿಸಲಾಗಿದ್ದು ಅದರ ಪಕ್ಕ ಇವರ ಬೈಕ್ ನಿಲ್ಲಿಸಲು ಮುಂದಾಗಿದ್ದಾರೆ. ಆದ್ರೆ ಈ ವೇಳೆ ಆಯತಪ್ಪಿ ಬೈಕ್ ಸಮೇತ ಕೆಳಗೆ ಬಿದಿದ್ದಾರೆ. ಈ ಎಲ್ಲಾ ದೃಶ್ಯಗಳು ಅಂಡಗಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ವ್ಯಕ್ತಿ ಕೆಳಗೆ ಬಿದ್ದ ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ದೌಡಾಯಿಸಿ ಬೈಕ್ ಸವಾರನನ್ನು ರಕ್ಷಿಸಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅದೃಷ್ಟವಶಾತ್ ಬೈಕ್ ಸವಾರನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.
Advertisement
ವಿಡಿಯೋದಲ್ಲಿರುವ ದಿನಾಂಕದ ಪ್ರಕಾರ ಸೆಪ್ಟೆಂಬರ್ 20 ರಂದು ಈ ಘಟನೆ ನಡೆದಿದೆ. ಆದ್ರೆ ನಿರ್ದಿಷ್ಟವಾಗಿ ಎಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೂ ಈ ವಿಡಿಯೋ 478 ಬಾರಿ ರೀಟ್ವೀಟ್ ಆಗಿದ್ದು 935 ಲೈಕ್‍ಗಳನ್ನು ಪಡೆದಿದೆ. ಬೈಕ್ ಸವಾರನ ನೆರವಿಗೆ ಬಂದ ಜನರ ಬಗ್ಗೆ ಟ್ವಿಟ್ಟರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Park your vehicles in a safe place— pic.twitter.com/mbi1m9JF5k
— D Roopa IPS (@D_Roopa_IPS) October 27, 2017
Advertisement
????. It’s really shocking. But one thing to appreciate is people around tried to help him soon instead of just recording with their mobiles.
— AMRISH REDDY ???????? (@h_amrish) October 27, 2017
https://twitter.com/AbhishekGureja/status/924177037014765568
https://twitter.com/soulstage/status/923948092981878786
https://twitter.com/BhatMaestro/status/923849270842703873
https://twitter.com/Madhavi_Ap/status/923849242669604864