ಬೆಂಗಳೂರಿನಲ್ಲಿ ತಂದೆಯಿಂದಲೇ ಮಗನ ಭೀಕರ ಕೊಲೆ

Public TV
1 Min Read
Kengeri Murder

ಬೆಂಗಳೂರು: ತಂದೆಯೇ (Father) ಮಗನನ್ನು (Son) ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಂಗೇರಿಯ (Kengeri) ನಾಗದೇವನಹಳ್ಳಿಯಲ್ಲಿ ಘಟನೆ ನಡೆದಿದೆ. ರಾಜೇಶ್ ತಂದೆಯಿಂದಲೇ ಕೊಲೆಯಾದ ಮಗ. ತಂದೆ ಲಿಂಗಪ್ಪ ಮಗನ ಕೈಕಾಲು ಕಟ್ಟಿ, ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಬೈಕ್‌ನಲ್ಲಿ ಬಂದು ಪೆಪ್ಪರ್ ಸ್ಪ್ರೇ ಹಾಕಿ ಯುವಕರ ಮೇಲೆ ಹಲ್ಲೆ

ರಾಜೇಶ್ ಕುಡಿದು ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ. ಮಗನ ಕಿರುಕುಳ ಸಹಿಸಲಾಗದೇ ಲಿಂಗಪ್ಪ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಳೆ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆ – ಗ್ರಾಹಕರು ಹೈರಾಣು, ಯಾವ ತರಕಾರಿಗೆ ಎಷ್ಟು ಬೆಲೆ?

Share This Article