ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಐವರು ಸಾವು, 60 ಮಂದಿಗೆ ಗಾಯ

Public TV
1 Min Read
TamilNadu Accident

ಚೆನ್ನೈ: ಶನಿವಾರ ಮುಂಜಾನೆ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ (Government Bus) ಮತ್ತು ಓಮ್ನಿಬಸ್ (Omnibus) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕನಿಷ್ಠ ಐವರು ಸಾವನ್ನಪ್ಪಿದ್ದು, ಸುಮಾರು 60 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸುಮಾರು 10 ಅಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ತಲುಪಿಸಲು ಸಹಾಯ ಮಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ-ಜೈಪುರ್ ಹೈವೇಯಲ್ಲಿ ಸರಣಿ ಅಪಘಾತ – ನಾಲ್ವರ ದುರ್ಮರಣ

ಸಮೀಪದ ಚೆಟ್ಟಿಯಪ್ಪನೂರಿನಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರಾಜ್ಯ ಎಕ್ಸ್‌ಪ್ರೆಸ್ ಸಾರಿಗೆ ಸಂಸ್ಥೆಯ ಬಸ್ ಮತ್ತು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಓಮ್ನಿಬಸ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ – ಪ್ರಕರಣಕ್ಕೆ ದುಬೈ ಲಿಂಕ್

ಗುಡುವಂಚೇರಿಯ ರಿತಿಕಾ (32), ವಾಣಿಯಂಬಾಡಿಯ ಮೊಹಮ್ಮದ್ ಫಿರೋಜ್ (37), ಎಸ್‌ಇಟಿಸಿ ಬಸ್ ಚಾಲಕ ಕೆ ಎಲುಮಲೈ (47) ಮತ್ತು ಚಿತ್ತೂರಿನ ಬಿ ಅಜಿತ್ (25) ಸ್ಥಳದಲ್ಲೇ ಮೃತಪಟ್ಟರೆ, ಓಮ್ನಿಬಸ್ ಚಾಲಕ ಎನ್ ಸೈಯದ್ ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಡುಗೆ ಮಾಡುವ ಕುಕ್ಕರ್‌ನಲ್ಲೇ ಡ್ರಗ್ಸ್ ತಯಾರಿ – ಬೆಂಗಳೂರಲ್ಲಿ ಪೆಡ್ಲರ್ ಅರೆಸ್ಟ್

ಮುಂಜಾನೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಎಸ್‌ಇಟಿಸಿ ಬಸ್ ಮೀಡಿಯನ್‌ಗೆ ಡಿಕ್ಕಿ ಹೊಡೆದಿದ್ದು, ಬಳಿಕ ಓಮ್ನಿಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗಾಯಾಳುಗಳನ್ನು ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿ ಸರ್ಕಾರಿ ಆಸ್ಪತ್ರೆಗೆ ಮತ್ತು ವೆಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಾಜಿ ಶಾಸಕ ರಘುಪತಿ ಪತ್ನಿ ಆತ್ಮಹತ್ಯೆ ಕೇಸ್‌ – ಆರೋಪಿ ಅತುಲ್ ರಾವ್‌ಗೆ 1 ವರ್ಷ ಜೈಲು

Share This Article