ಚಿತ್ರದುರ್ಗ: ಟಿಟಿ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಮೂವರು ಸಾವಿಗೀಡಾಗಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಭೀಕರ ಘಟನೆ ಚಿತ್ರದುರ್ಗ “(Chitradurga) ಜಿಲ್ಲೆಯ ಚಳ್ಳಕೆರೆ(Challakere) ತಾಲೂಕಿನ ಹೆಗ್ಗೆರೆ (Hegger) ಗ್ರಾಮದ ಬಳಿ ನಡೆದಿದೆ.
ಮೃತರನ್ನು ತಿಮ್ಮಣ್ಣನಹಳ್ಳಿಯ ಶಂಕರಿಬಾಯಿ (65), ಕುಮಾರನಾಯ್ಕ್ (46), ಶ್ವೇತಾ (38) ಎಂದು ಗುರುತಿಸಲಾಗಿದೆ. ಇನ್ನುಳಿದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ:43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್ – ಸಿಎಸ್‌ಕೆ ಪರ ಐತಿಹಾಸಿಕ ದಾಖಲೆ ಬರೆದ ಕೂಲ್ ಕ್ಯಾಪ್ಟನ್
ಹೆಗ್ಗೆರೆ ಗ್ರಾಮದ ಬಳಿ ಟಿಟಿ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಟಿ ವಾಹನ ಪಲ್ಟಿ ಹೊಡೆದಿದ್ದು, ಅದರಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಳ್ಳಕೆರೆ ಪೊಲೀಸ್ ಠಾಣೆ (Challakere Police Station) ವ್ಯಾಪ್ತಿಯಲ್ಲಿ ನಡೆದ ಘಟೆನೆ ನಡೆದಿದೆ.ಇದನ್ನೂ ಓದಿ:KD ಲೇಡಿ ರೀಷ್ಮಾಗೆ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎಂದ ಧ್ರುವ ಸರ್ಜಾ