ರಾಯಚೂರು: ಕಾರು (Car) ಹಾಗೂ ಲಾರಿ (Lorry) ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರು (Raichur) ಜಿಲ್ಲೆ ಸಿರವಾರ (Sirwar) ತಾಲೂಕಿನ ಕಲ್ಲೂರು ಬಳಿ ನಡೆದಿದೆ.
ಮಾನ್ವಿ ಪಟ್ಟಣದ ಮೆಕಾನಿಕ್‌ಗಳಾದ ಯಾಸಿನ್, ಮಕ್ಬಲ್, ಹರ್ಷದ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾರು ಮಾನ್ವಿಯಿಂದ ರಾಯಚೂರು ಕಡೆ ಹೊರಟಿತ್ತು. ಲಾರಿ ರಾಯಚೂರಿನಿಂದ ಮಾನ್ವಿ ಕಡೆ ಹೊರಟಿದ್ದ ಸಂದರ್ಭ ಭೀಕರ ಅಪಘಾತ ಸಂಭವಿಸಿದೆ. ಇತ್ತೀಚೆಗೆ ಶಾಲಾ ವಾಹನ ಹಾಗೂ ಸರ್ಕಾರಿ ಬಸ್ ನಡುವೆ ಅಪಘಾತವಾಗಿದ್ದ ರಸ್ತೆ ಮಾರ್ಗದಲ್ಲೇ ಘಟನೆ ನಡೆದಿದೆ. ಇದನ್ನೂ ಓದಿ: ವಿನಯ್ ಕುಲಕರ್ಣಿ ವರ್ಚಸ್ಸಿಗೆ ಧಕ್ಕೆ ತರುವ ಹುನ್ನಾರ ನಡೆದಿದೆ: ಏಗನಗೌಡರ
ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಘಟನಾ ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ರಾಯಚೂರು – ಮಾನ್ವಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇದನ್ನೂ ಓದಿ: Valmiki Scam | ನಾಗೇಂದ್ರಗೆ ಬಿಗ್ ರಿಲೀಫ್ – ಜಾಮೀನು ಮಂಜೂರು