ಬ್ಯಾಂಕ್ ಲಾಕರ್‌ನಲ್ಲಿಟ್ಟ ದುಡ್ಡಿಗೆ ಗೆದ್ದಲು – 8 ಲಕ್ಷ ಢಮಾರ್!

Public TV
1 Min Read
Termites eat Rs 8 lakh money in bank locker Mangaluru

ಬೆಂಗಳೂರು: ಬ್ಯಾಂಕ್‌ ಲಾಕರ್‌ನಲ್ಲಿ (Bank Locker) ಇಟ್ಟಿದ್ದ 8 ಲಕ್ಷ ರೂಪಾಯಿ ಗೆದ್ದಲಿಗೆ ಬಲಿಯಾಗಿದ್ದಕ್ಕೆ ಗ್ರಾಹಕರೊಬ್ಬರು ಈಗ ಬೆಂಗಳೂರಿನ ಪ್ರಧಾನ ಕಚೇರಿಗೆ ದೂರು ನೀಡಿದ್ದಾರೆ.

ಸಫಲ್‌ ಮಂಗಳೂರಿನ (Mangaluru) ಕೋಟೆಕಾರ್‌ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ 8 ಲಕ್ಷ ರೂ. ಇಟ್ಟಿದ್ದರು. 6 ತಿಂಗಳ ಬಳಿಕ ಔಷಧಿಗಾಗಿ ದುಡ್ಡು ತೆಗೆಯಲು ಲಾಕರ್‌ ತೆರೆದಿದ್ದಾರೆ.

ಬ್ಯಾಂಕ್ ನವರೇ ಖುದ್ದಾಗಿ ಲಾಕರ್ ಓಪನ್ ಮಾಡಿದ್ದಾರೆ. ಲಾಕರ್ ಮಳೆನೀರಿನಲ್ಲಿ ನೆಂದ ಸ್ಥಿತಿಯಲ್ಲಿದ್ದರೆ ದುಡ್ಡು ಸಂಪೂರ್ಣವಾಗಿ ಕಪ್ಪಾಗಿ ಹುಡಿ ಹುಡಿಯಾಗಿ ಗೆದ್ದಲು ಹಿಡಿದು ಚೂರಾಗಿ ಬಿದ್ದಿದೆ. ಎಂಟು ಲಕ್ಷ ರೂ. ದುಡ್ಡು ಇದೇ ರೀತಿ ಆಗಿದೆ. ಇದನ್ನೂ ಓದಿ: ದತ್ತಪೀಠದ ತಪ್ಪಲಿನಲ್ಲಿ ಕಾಡ್ಗಿಚ್ಚು – ಹೊತ್ತಿ ಉರಿದ ಅಪರೂಪದ ಶೋಲಾರಣ್ಯ

 

ಆರ್‌ಬಿಐ ನಿಯಮದ ಪ್ರಕಾರ ಪ್ರಕಾರ ದುಡ್ಡನ್ನು ಲಾಕರ್‌ನಲ್ಲಿ ಇಡುವಂತಿಲ್ಲ ಹೀಗಾಗಿ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಹೀಗಾಗಿ ಸಫಲ್ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿ ಪ್ರಧಾನ ಕಚೇರಿಗೆ ದೂರು ನೀಡಿ, ಹಳೆಯ ಕಟ್ಟಡ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಹೀಗಾಗಿ ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಲಾಕರ್‌ನಲ್ಲಿ ಹಣ ಇಡಬಾರದು ನಿಜ. ಆದರೆ ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಸೇಫ್‌ ಎಂಬ ನಂಬಿಕೆಯಿದೆ. ಆದರೆ ನಿರ್ವಹಣೆ ಕೊರತೆಯಿಂದ ಈ ರೀತಿ ಸಮಸ್ಯೆಯಾದರೆ ಹೊಣೆ ಯಾರು ಎನ್ನುವುದೇ ಪ್ರಶ್ನೆ.

 

Share This Article