ಮೈಸೂರು: ಅರಮನೆ ಆವರಣದಲ್ಲಿ ಕಾಡಿನ ಮಕ್ಕಳಿಗೆ ಟೆಂಟ್ ಶಾಲೆ ಆರಂಭವಾಗಿದ್ದು, ಇನ್ನೊಂಡೆ ಫಿರಂಗಿ ತಾಲೀಮಿಗಾಗಿ ಅರಮನೆಯಲ್ಲಿ ಫಿರಂಗಿ ಪೂಜೆ ನಡೆದಿದೆ.
ಗಜಪಡೆಯ ಜೊತೆ ಇರುವ ಕಾಡಿನ ಜನರ ಮಕ್ಕಳಿಗಾಗಿ ಈ ಟೆಂಟ್ ಶಾಲೆ ಆರಂಭಿಸಲಾಗಿದೆ. ಕಾಡಿನ ಮಕ್ಕಳು ಒಂದು ತಿಂಗಳು ಶಾಲೆಯಿಂದ ದೂರ ಇರಬಾರದೆಂದು ಎಂಬ ಉದ್ದೇಶದಿಂದ ಈ ಟೆಂಟ್ ಶಾಲೆ ತೆರೆಯಲಾಗಿದೆ. ಆನೆಗಳ ಕಾವಾಡಿ ಮತ್ತು ಮಾವುತರ 20 ಮಕ್ಕಳು ಈ ಶಾಲೆಗೆ ಬರುತ್ತಾರೆ ಎಂದು ಟೆಂಟ್ ಶಾಲೆ ಶಿಕ್ಷಕಿ ನೂರ್ ಫಾತಿಮಾ ಹೇಳಿದ್ದಾರೆ.
ಇತ್ತ ದಸರಾ ಜಂಬೂ ಸವಾರಿ ದಿನ 21 ಕುಶಲತೋಪು ಸಿಡಿಸಲಾಗುತ್ತದೆ. ಆ ಸಿಡಿತದ ಸದ್ದಿಗೆ ಆನೆಗಳು ಬೆಚ್ಚದಂತೆ ಅವುಗಳಿಗೆ ಸದ್ದನ್ನು ಪರಿಚಯಿಸಲು ಫಿರಂಗಿ ತಾಲೀಮು ಮಾಡಲಾಗುತ್ತದೆ. ಇವತ್ತು ಅರಮನೆ ಮುಂಭಾಗದಲ್ಲಿನ ಫಿರಂಗಿಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಫಿರಂಗಿ ತಾಲೀಮಿಗೆ ಚಾಲನೆ ನೀಡಲಾಯಿತು.
ಇಂದು ಬೆಳಗ್ಗೆ ಪ್ರವಾಸೋದ್ಯಮ ಇಲಾಖೆಯೂ, ದಸರಾ ಹಾಗೂ ರಾಜ್ಯದ ಪ್ರವಾಸೋದ್ಯಮದ ಪ್ರಚಾರಕ್ಕಾಗಿ ಗಜಪಡೆಯ ಫೋಟೋ ಶೂಟ್ ಅನ್ನು ಅರಮನೆ ಮುಂಭಾಗ ನಡೆಸಿದೆ. ಆರು ಆನೆಗಳು ಫೋಟೋಗೆ ಫೋಸ್ ನೀಡಿದವು. ಈ ಆನೆಗಳ ಮುಂದೆ ಮಾಡೆಲ್‍ಗಳು, ಭರತನಾಟ್ಯ ಕಲಾವಿದೆಯರು ನಿಂತು ಕ್ಯಾಮಾರಾಗೆ ಫೋಸ್ ನೀಡಿದರು.
ಒಂದು ಕಡೆ ದಸರಾ ಗಜಪಡೆಯ ತಾಲೀಮು ದಿನ ದಿನಕ್ಕೂ ಬಿರುಸುಗೊಳ್ಳುತ್ತಿದೆ. ಮತ್ತೊಂದು ಕಡೆ ದಸರಾ ಸಿದ್ಧತೆ ಕಾರ್ಯಗಳು ಚುರುಕುಗೊಳ್ಳುತ್ತಿವೆ. ಇದರಿಂದ ಮೈಸೂರಿನ ಅರಮನೆ ಅಂಗಳದಲ್ಲಿ ಈಗ ದಸರಾದ ವಾತಾವರಣ ನಿಧನವಾಗಿ ಕಳೆಕಟ್ಟುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv