ನವದೆಹಲಿ: ಧರ್ಮನಿಂದನೆ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಹಿಂದೂ ಡಾಕ್ಟರ್ ಒಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ಈ ಘಟನೆ ಹಿಂದೂಗಳೇ ಹೆಚ್ಚಾಗಿ ವಾಸ ಮಾಡುವ ಪಾಕಿಸ್ತಾನದ ದಕ್ಷಿಣ ಸಿಂಧು ಪ್ರಾಂತ್ಯದಲ್ಲಿ ನಡೆದಿದ್ದು, ಬಂಧನಕ್ಕೊಳಪಟ್ಟ ಹಿಂದೂ ಪಶು ವೈದ್ಯನನ್ನು ರಮೇಶ್ ಕುಮಾರ್ ಎಂದು ಗುರುತಿಸಲಾಗಿದೆ.
Advertisement
ಸ್ಥಳೀಯ ಮಸೀದಿಯೊಂದರ ಮುಖ್ಯಸ್ಥ ಮೌಲ್ವಿ ಇಶಾಕ್ ನೂಹಿ, ಪಶು ವೈದ್ಯ ರಮೇಶ್ ತಮ್ಮ ಧರ್ಮದ ಪವಿತ್ರ ಪುಸ್ತಕದ ಹಾಳೆಯನ್ನು ಹರಿದು ಅದರಲ್ಲಿ ಔಷಧಿಗಳನ್ನು ಸುತ್ತಿ ಜನರಿಗೆ ನೀಡಿದ್ದಾರೆ. ಈ ಮೂಲಕ ನಮ್ಮ ಧರ್ಮದ ನಿಂದನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
Advertisement
ಈ ದೂರಿನ ಅನ್ವಯ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಈ ವಿಚಾರ ತಿಳಿದು ಕೋಪಗೊಂಡ ಮುಸ್ಲಿಮರು ಸಿಂಧು ಪ್ರಾಂತ್ಯದಲ್ಲಿರುವ ಹಿಂದೂ ಧರ್ಮದವರ ಅಂಗಂಡಿಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ಸಂಬಂಧ ಈಗ ಸಿಂಧು ಪ್ರಾಂತ್ಯದಲ್ಲಿ ಉದ್ವಿಗ್ನ ಪರಿಸ್ಥತಿ ಉಂಟಾಗಿದೆ.
Advertisement
ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಅಹಿದ್ ಹುಸೇನ್ ಲೆಘಾರಿ, ಮೌಲ್ವಿ ನೂಹಿ ಅವರು ನೀಡಿದ್ದ ದೂರಿನ ಅನ್ವಯ ರಮೇಶ್ ಕುಮಾರ್ ಎಂಬ ಪಶು ವೈದ್ಯರನ್ನು ಬಂಧಿಸಲಾಗಿದೆ. ನಗರದಲ್ಲಿ ಅಶಾಂತಿ ಉಂಟಾದ ಕಾರಣ ಅವರನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಮಾಡಿ ಕ್ರಮಕೈಗೊಳ್ಳಲಾಗುತ್ತೆದೆ ಎಂದು ಹೇಳಿದ್ದಾರೆ.
https://twitter.com/timesofpak123/status/1132965562852810754
ಪಾಕ್‍ನ ಸಿಂಧು ಪ್ರಾಂತ್ಯದಲ್ಲಿ ಅಪಾರ ಸಂಖ್ಯೆಯ ಹಿಂದೂ ಧರ್ಮದವರು ವಾಸಮಾಡುತ್ತಿದ್ದು, ನಮ್ಮ ಮೇಲೆ ಮುಸ್ಲಿಂ ಸಮುದಾಯದವರು ವೈಯಕ್ತಿಕ ದ್ವೇಷವನ್ನು ಇಟ್ಟಿಕೊಂಡಿದ್ದಾರೆ. ಈ ದ್ವೇಷದ ಪ್ರತೀಕಾರವನ್ನು ತೀರಿಸಿಕೊಳ್ಳಲು ಧರ್ಮನಿಂಧನೆ ಮಾಡಿದ್ದೇವೆ ಎಂದು ಆರೋಪ ಮಾಡಿ ನಮ್ಮನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಪಾಕ್‍ನಲ್ಲಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.
ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸವಿದ್ದಾರೆ. ಇದರಲ್ಲಿ 1987 ರಿಂದ 2016 ವರೆಗೆ ಸುಮಾರು 1,472 ಹಿಂದೂಗಳನ್ನು ಧರ್ಮನಿಂದನೆಯ ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗಿದೆ ಎಂದು ಲಾಹೋರ್ ನ ವಕೀಲರ ಸಂಘವೊಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿತ್ತು.