ಮನೆಯಲ್ಲಿ ಸಂಜೆಯಾದ್ರೆ ಸೊಳ್ಳೆ ಬರುತ್ತೆ ಅಂತ ಬಾಗಿಲು, ಕಿಟಕಿಗಳನ್ನ ಮುಚ್ಚಿಬಿಡ್ತೀವಿ. ಒಂದು ವೇಳೆ ಅವು ಒಳಗೆ ಬಂದ್ರೂ ಸೊಳ್ಳೇಬತ್ತಿ ಹಚ್ಚಿ ಅಥವಾ ಸೊಳ್ಳೇಬ್ಯಾಟ್ ಹಿಡಿದು ಸೊಳ್ಳೆಗಳನ್ನ ಸದೆಬಡಿಯಲು ನಿಂತುಬಿಡ್ತೀವಿ. ಆದ್ರೆ ಈ ವಿಡಿಯೋ ನೋಡಿದ್ರೆ ಮಾತ್ರ ನೀವು ಹೌಹಾರಿಬಿಡ್ತೀರ.
ಮೀನುಗಾರರೊಬ್ಬರು ರಾತ್ರಿ ವೇಳೆ ಮೀನು ಹಿಡಿಯಲು ಹೋಗಿದ್ದು, ತಮ್ಮ ಕಾರ್ ಕಿಟಕಿ ಮುಚ್ಚೋದನ್ನ ಮರೆತು ಹಾಗೇ ಬಿಟ್ಟು ಹೋಗಿದ್ರು. ಅವರು ವಾಪಸ್ ಬಂದು ನೋಡಿದಾಗ ಕಾರ್ ತುಂಬೆಲ್ಲಾ ಸೊಳ್ಳೆಗಳೇ. ಅದೂ ಹತ್ತೋ ಇಪತ್ತೋ ಸೊಳ್ಳೆಯಲ್ಲ. ಸಾವಿರಾರು ಸೊಳ್ಳೆಗಳು.
ಅದ್ರಲ್ಲೂ ಕಾರ್ನೊಳಗೆ ಲೈಟ್ ಆಫ್ ಆಗಿರಲಿಲ್ಲ. ಆ ವ್ಯಕ್ತಿ ಬಣ್ಣಬಣ್ಣದ ಅಲಂಕಾರಿಕ ಲೈಟ್ ಕೂಡ ಕಾರ್ನೊಳಗೆ ಹಾಕಿದ್ದರಿಂದ ಸೊಳ್ಳೆಗಳು ಅದಕ್ಕೆ ಆಕರ್ಷಿತವಾಗಿ ಕಾರ್ನೊಳಗೆ ನುಗ್ಗಿವೆ. ಇನ್ನು ಆ ಮೀನುಗಾರ ಕಾರಿನ ಬಾಗಿಲು ತೆಗೆದು ಸೀಟ್ ಮೇಲಿದ್ದ ಸೊಳ್ಳೆಗಳನ್ನ ಕೈಯಲ್ಲೇ ತೆಗೆದು ತೋರಿಸ್ತಾರೆ.
https://www.youtube.com/watch?v=mBdqj85o7E0