Connect with us

Latest

ಮೈಕ್ ಟೈಸನ್‍ರಿಂದ ಬಾಕ್ಸಿಂಗ್ ಕಲಿಯುತ್ತಿದ್ದಾರೆ ಟೆನ್ನಿಸ್ ತಾರೆ ಸೆರೆನಾ

Published

on

ವಾಷಿಂಗ್ಟನ್: ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ಗೆ ಭರ್ಜರಿ ಅಭ್ಯಾಸ ಪ್ರಾರಂಭಿಸಿದ್ದಾರೆ. ಈ ಮಧ್ಯೆ ಅವರು ಅಮೆರಿಕದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಅವರಿಂದ ಬಾಕ್ಸಿಂಗ್ ಕಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಮೆರಿಕದ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿವಿಧ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಏಳು ಬಾರಿ ಚಾಂಪಿಯನ್ ಆಗಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನ್ನಿಸ್‍ನಲ್ಲಿ ಗೆಲುವು ಸಾಧಿಸಲು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪ್ಯಾಟ್ರಿಕ್ ಮೊರಾಟೊಗ್ಲೊ ತರಬೇತಿ ನೀಡುತ್ತಿದ್ದಾರೆ.

ಸೆರೆನಾ ವಿಲಿಯಮ್ಸ್ ಅವರನ್ನು ಈ ಬಾರಿ ವಿಭಿನ್ನವಾಗಿ ಸಿದ್ಧಪಡಿಸುತ್ತಿರುವ ಪ್ಯಾಟ್ರಿಕ್ ಮೊರಾಟೊಗ್ಲೊ, ಬಾಕ್ಸಿಂಗ್ ಕೂಡ ಕಲಿಸುತ್ತಿದ್ದಾರೆ. ಸೆರೆನಾ ಅಮೆರಿಕದ ಶ್ರೇಷ್ಠ ಬಾಕ್ಸರ್ ಮೈಕ್ ಟೈಸನ್ ಅವರೊಂದಿಗೆ ಬಾಕ್ಸಿಂಗ್ ತರಬೇತಿ ಪಡೆದಿದ್ದಾರೆ.

ಸಾಂಪ್ರದಾಯಿಕ ತರಬೇತಿ ನೀಡಲು ನನಗೆ ಇಷ್ಟವಿಲ್ಲ. ಆದ್ದರಿಂದ ಆಟಗಾರರಿಗಾಗಿ ವಿಶೇಷ ರೀತಿಯಲ್ಲಿ ತರಬೇತಿ ನೀಡುತ್ತಿರುವೆ. ಇದರಲ್ಲಿ ಹಿರಿಯ ಆಟಗಾರರಲ್ಲದೆ ಯುವಕರು ಇದ್ದಾರೆ. ಬಾಕ್ಸಿಂಗ್ ಅಷ್ಟೇ ಅಲ್ಲದೆ ಮನರಂಜನೆ ನೀಡಲಾಗುತ್ತಿದೆ. ಜೊತೆಗೆ ವಿಶ್ವದ ಕ್ರೀಡಾ ದಿಗ್ಗಜರನ್ನು ಕರೆಸಿ ಆಟಗಾರರಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಪ್ಯಾಟ್ರಿಕ್ ಮೊರಾಟೊಗ್ಲೊ ತಿಳಿಸಿದ್ದಾರೆ.

ಸೆರೆನಾ ಅತ್ಯಂತ ಯಶಸ್ವಿ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಆಟಗಾರ್ತಿ ಆಗಿದ್ದಾರೆ. ಸೆರೆನಾ ಈವರೆಗೂ 7 ಬಾರಿ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಚಾಂಪಿಯನ್ ಆಗಿದ್ದಾರೆ. 2019 ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ನವೋಮಿ ಒಸಾಕಾ ಅವರು ಪೆಟ್ರಾ ಕ್ವಿಟೋವಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.

Click to comment

Leave a Reply

Your email address will not be published. Required fields are marked *