ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು ಲಾಸ್ಟ್ – ಷರತ್ತಿನೊಂದಿಗೆ ನೂತನ ಕಸದ ಟೆಂಡರ್‌ಗೆ BBMP ಸಿದ್ಧತೆ

Public TV
2 Min Read
BBMP LORRY 2

ಬೆಂಗಳೂರು: ಕಸದಿಂದಲೇ (Waste) ಕಾಸು ಎಂಬ ಚರ್ಚೆ ಮತ್ತೆ ಶುರುವಾಗಿದೆ. ಸ್ವಚ್ಛ ನಗರ ಪಟ್ಟಿಯಲ್ಲಿ ಬೆಂಗಳೂರು (Bengaluru) ಕೊನೆಯ ಸ್ಥಾನದಲ್ಲಿರುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಂಗಳದಲ್ಲಿ ಕಸದ ಟೆಂಡರ್‌ ಸದ್ದು ಮಾಡುತ್ತಿದೆ. ಕಸದ ಮಾಫಿಯಾಕ್ಕೆ ಲಗಾಮು ಹಾಕಲು ಪಾಲಿಕೆ ದೊಡ್ಡ ಅಸ್ತ್ರ ಸಿದ್ಧಪಡಿಸಿದೆ.

BBMP

ಒಂದು ದಶಕಗಳ ಬಳಿಕ ಬಿಬಿಎಂಪಿ ಕಸ ಸಾಗಣಿಕೆಗೆ ಟೆಂಡರ್ ಕರೆದಿದೆ. ವಿಚಿತ್ರವೆಂದರೆ ಟೆಂಡರ್ ವಿರುದ್ಧ ಅಸಮಾಧಾನದ ಕೂಗು ಶುರುವಾಗಿದೆ. ಕಸದ ಟೆಂಡರ್ ಷರತ್ತು ಹೊರ ಬೀಳುವ ಮುನ್ನವೇ ವಿರೋಧ ಶುರುವಾಗಿದ್ದು, ಗುತ್ತಿಗೆದಾರರಿಗೆ ಕಸದ ಷರತ್ತುಗಳು ಕಬ್ಬಿಣದ ಕಡಲೆಯಂತಾಗಿದೆ. ಇದನ್ನೂ ಓದಿ: ಸಾರಿಗೆ ಇಲಾಖೆಯಿಂದ ಡೆಡ್‍ಲೈನ್- ಓಲಾ, ಉಬರ್ ಕಳ್ಳಾಟಕ್ಕೆ ಬೀಳುತ್ತಾ ಬ್ರೇಕ್?

WASTE

ಕಸ ಸಾಗಾಣಿಕೆಗೆ ಷರತ್ತುಗಳು:
ಟೆಂಡರ್ ಪಡೆಯುವವರು 500 ಕಾಂಪ್ಯಾಕ್ಟರ್, 5 ಸಾವಿರ ಆಟೋಗಳು ಹೊಸದಾಗಿ ಖರೀದಿಗೆ ಷರತ್ತು ವಿಧಿಸಿದೆ, ಬಿಎಸ್ 7, ಎಲೆಕ್ಟ್ರಿಕ್ ಕಂ ಫ್ಯೂಯೆಲ್ ವೆಹಿಕಲ್ ಖರೀದಿ, ಹಸಿ, ಒಣ, ಸ್ಯಾನಿಟರಿ, ಕಮರ್ಷಿಯಲ್ ಕಸಕ್ಕೆಲ್ಲ ಒಂದೇ ಟೆಂಡರ್ ಮೂಲಕ ಏಕಗವಾಕ್ಷಿ ಟೆಂಡರ್‌ಗೆ ಪಾಲಿಕೆ ಆಸಕ್ತಿ ತೋರಿದೆ. ಇದನ್ನೂ ಓದಿ: ಅಪ್ಪು ಮಗನೇ ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

bbmp

ಕಸದ ಕ್ಯಾಟಗರಿ ರೂಲ್ಸ್:
ಕಸದ ಎಲ್ಲಾ ವಾಹನಗಳಿಗೂ ಜಿಪಿಎಸ್ (GPS) ಅಳವಡಿಕೆ ಮಾಡಬೇಕು. ಡ್ರೈವರ್‌ಗಳ ಮಾಹಿತಿ ನೀಡಬೇಕು. ಡ್ರೈವರ್‌ಗೆ ಸ್ಮಾರ್ಟ್‍ಫೋನ್, ಸಿಮ್ ಕೊಡಬೇಕು. ಪಿಎಫ್ (PF), ಇಎಸ್‍ಐ (ESI) ನೀಡಬೇಕಾದ್ರೆ ಚಾಲಕರು ಪದೇ ಪದೇ ಬದಲಾಗಬಾರದು. ಬದಲಾದರೂ 24 ಗಂಟೆಯೊಳಗೆ ಆರೋಗ್ಯಾಧಿಕಾರಿಗೆ ಮಾಹಿತಿ ಕೊಡಬೇಕು. ಡ್ರೈವರ್ ವಿರುದ್ಧ ದೂರು ಬಂದರೆ 500 ರಿಂದ 5 ಸಾವಿರ ರೂ.ವರೆಗೂ ದಂಡ ವಿಧಿಸಲು ನಿರ್ಧರಿಸಿದೆ.

ಕಸದ ಆಟೋಗಳಿಗೂ ಪ್ರತ್ಯೇಕ ರೂಲ್ಸ್:
2 ತಿಂಗಳಲ್ಲಿ 100 ದೂರು ಬಂದರೆ ಬ್ಲಾಕ್ ಲಿಸ್ಟ್. ದೂರು ಬಂದ 1 ಗಂಟೆಯೊಳಗೆ ಸಮಸ್ಯೆ ಬಗೆಹರಿಸಬೇಕು. ಏರಿಯಾದಲ್ಲಿ ಎಲ್ಲೇ ಕಸ ಬಿದ್ದರೂ ತೆಗೆಯಲೇಬೇಕು. ಕಾರ್ಮಿಕ ತಪ್ಪು ಮಾಡಿದರೆ 5 ಸಾವಿರ ರೂ. ದಂಡ. ಪ್ರಾಣಿ ತ್ಯಾಜ್ಯ ಇತ್ರಿಶ್ರೀ ಹಾಡಲು 4 ಗಂಟೆಗಳ ಡೆಡ್‍ಲೈನ್ ಸಹ ಅಳವಡಿಸಲಾಗಿದೆ. ಪ್ರಾಣಿ ತ್ಯಾಜ್ಯ ಡೆಡ್‍ಲೈನ್ ನೀಡಿರುವ ಪ್ರಕಾರ 4 ಗಂಟೆ ಒಳಗೆ ತೆಗೆಯಬೇಕು. ದೂರು ಬಂದಾಗ ಅಟೆಂಡ್ ಮಾಡದಿದ್ದರೆ ಪ್ರತಿ ದೂರಿಗೆ 100 ರೂ. ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *