ಬೆಂಗಳೂರು: 200 ಯೂನಿಟ್ ಉಚಿತ ವಿದ್ಯುತ್ (Free Power) ನೀಡುವ ಗೃಹಜ್ಯೋತಿ (Grihajyothi) ಯೋಜನೆಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಈಗ ಅದನ್ನು ಸರಿಪಡಿಸಲು ಮುಂದಾಗಿದೆ.
ಸ್ವಂತ ಮನೆಯವರಿಗೆ ಹೇಗೆ?
ಆರ್.ಆರ್. ನಂಬರ್‌ನೊಂದಿಗೆ ಆಧಾರ್ (Aadhar) ಲಿಂಕ್ ಮಾಡಬೇಕು. ಒಂದಕ್ಕಿಂತ ಹೆಚ್ಚು ಮನೆಯಿದ್ದರೆ ಒಂದು ಮನೆಗೆ ಮಾತ್ರ ಅವಕಾಶ. ಎರಡು ಮೀಟರ್ ಹೊಂದಿದ್ದರೆ ಯಾವುದಾದರೂ ಒಂದಕ್ಕೆ ಮಾತ್ರ ಉಚಿತ ವಿದ್ಯುತ್ ಸಿಗಲಿದೆ. ಇದನ್ನೂ ಓದಿ: Aadhaar Card: ಉಚಿತವಾಗಿ ನಿಮ್ಮ ಆಧಾರ್ ವಿವರ ಅಪ್ಡೇಟ್ ಮಾಡಿಸಲು ಇನ್ನು 8 ದಿನವಷ್ಟೇ ಬಾಕಿ
Advertisement
Advertisement
ಬಾಡಿಗೆದಾರರಿಗೆ ಹೇಗೆ?
ವಾಸವಿರುವ ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ತಮ್ಮ ಆಧಾರ್ ಲಿಂಕ್ ಮಾಡಬೇಕು. ಇದಕ್ಕೆ ಬಾಡಿಗೆ ಮನೆಯ ಕರಾರು ಪತ್ರವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಈ ಒಂದು ದಾಖಲೆಯನ್ನು ಒಂದು ಮೀಟರ್‌ನೊಂದಿಗೆ ಮಾತ್ರ ಲಿಂಕ್ ಮಾಡಲು ಅವಕಾಶ. ಮನೆ ಬದಲಾಯಿಸಿದರೆ, ಹಿಂದಿನ ಮನೆಯ ಮೀಟರ್‌ನೊಂದಿಗಿನ ಲಿಂಕ್ ತಗೆಯಬೇಕು. ಹೊಸ ಬಾಡಿಗೆ ಮನೆಯ ಆರ್.ಆರ್. ನಂಬರ್ ಮತ್ತು ಆಧಾರ್ ಕಾರ್ಡ್ ಪುನಃ ಲಿಂಕ್ ಮಾಡಬೇಕು.
Advertisement
Advertisement
ಉಚಿತ ವಿದ್ಯುತ್ ಹೇಗೆ?
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಪೂರ್ಣವಾಗಿ ಜಾರಿ ಮಾಡುತ್ತಿಲ್ಲ. ದುರ್ಬಳಕೆ ತಡೆಯಲು ಒಂದು ವರ್ಷದ ಸರಾಸರಿ ಬಳಕೆ ಲೆಕ್ಕ ಹಾಕಲಾಗುತ್ತದೆ. ಸರಾಸರಿ ವಿದ್ಯುತ್ ಬಳಕೆಯ 10% ರಷ್ಟು ಹೆಚ್ಚು ಬಳಸಲು ಅವಕಾಶವಿದೆ. ಜುಲೈ ತಿಂಗಳಿನಿಂದ ಈ ಯೋಜನೆ ಜಾರಿಯಾಗಲಿದ್ದು, ಆಗಸ್ಟ್ ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿಸುವ ಅಗತ್ಯವಿಲ್ಲ. ಎಪಿಎಲ್, ಬಿಪಿಎಲ್ ಎಂಬ ಬೇಧಭಾವ ಇಲ್ಲ. ಆದರೆ ಗೃಹ ಬಳಕೆಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.
ಹೆಚ್ಚು ವಿದ್ಯುತ್ ಬಳಸಿದ್ರೆ ಬಿಲ್ ಪಾವತಿಸಬೇಕು
12 ತಿಂಗಳ ವಿದ್ಯುತ್ ಬಿಲ್‍ನ ಸರಾಸರಿ ಪರಿಗಣಿಸಿ ಹೆಚ್ಚುವರಿಯಾಗಿ 10% ರಷ್ಟು ಬಳಸಲು ಅವಕಾಶವಿದೆ. ಉದಾಹರಣೆಗೆ ಸರಾಸರಿ 100 ಯೂನಿಟ್ ಬಳಸಿದ್ದಲ್ಲಿ ಅಂದಾಜು 110 ಯೂನಿಟ್‍ವರೆಗೆ ಬಳಸಬಹುದು. 110 ಯೂನಿಟ್‍ಗಿಂತ ಜಾಸ್ತಿ ಬಳಸಿದ್ರೆ ಬಿಲ್ ಕಟ್ಟಬೇಕಾಗುತ್ತದೆ.