ತಮಿಳಿನ ಸ್ಟಾರ್ ನಟ ಸೂರ್ಯ (Suriya) ಸೂರರೈ ಪೊಟ್ರು, ಜೈ ಭೀಮ್ ಸಿನಿಮಾಗಳ ಸಕ್ಸಸ್ ನಂತರ ಈಗ ‘ಕಂಗುವ’ (Kanguva) ಸಿನಿಮಾದ ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಸಿನಿಮಾದ ದೃಶ್ಯವೊಂದಕ್ಕೆ ಹತ್ತು ಸಾವಿರ ಜನ ಜ್ಯೂನಿಯರ್ಸ್ ಬಳಕೆಯಾಗಿದ್ದಾರಂತೆ. ಈ ದೃಶ್ಯದಲ್ಲಿ ಬಾಬಿ ಡಿಯೋಲ್ (Bobby Deol) ಮತ್ತು ಸೂರ್ಯ ಎದುರಾಗಿದ್ದಾರೆ. ಇದೊಂದು ಹೊಡೆದಾಟದ ಸನ್ನಿವೇಶವಂತೆ.
ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ನಟಿಸಿರುವ ಬಗ್ಗೆ ಸೂರ್ಯ ಬಿಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ. ಅದರ ಪೋಸ್ಟರ್ ಕೂಡ ನಟ ಹಂಚಿಕೊಂಡಿದ್ದಾರೆ.
ಇದೀಗ ‘ಕಂಗುವ’ ಸಿನಿಮಾದಲ್ಲಿ ಡಿಫರೆಂಟ್ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಎರಡು ತದ್ವಿರುದ್ಧ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಂದರಲ್ಲಿ ಪುರಾತನ ಕಾಲದ ವ್ಯಕ್ತಿಯಂತೆ ಕಾಣಿಸಿಕೊಂಡಿದ್ದರೆ, ಇನ್ನೊಂದರಲ್ಲಿ ಗನ್ ಹಿಡಿದು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಎರಡರಲ್ಲಿ ಒಂದು ಪಾತ್ರಕ್ಕೆ ನೆಗೆಟಿವ್ ಶೇಡ್ ಇದ್ಯಾ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಚಿತ್ರದ ಪೋಸ್ಟರ್ ಮೆಚ್ಚುಗೆಯ ಜೊತೆ ಚರ್ಚೆ ಕೂಡ ಶುರುವಾಗಿದೆ.
‘ಕಂಗುವ’ ಚಿತ್ರವು ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಭಾಷೆಗಳಿಗೂ ಕನೆಕ್ಟ್ ಆಗುವಂತಹ ಶೀರ್ಷಿಕೆಯೊಂದರ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ಆ ಶೀರ್ಷಿಕೆ ಕೊನೆಗೂ ಸಿಕ್ಕಿದ್ದು, ‘ಕಂಗುವ’ ಎಂದರೆ, ಬೆಂಕಿಯ ಶಕ್ತಿಯುಳ್ಳವನು ಎಂದರ್ಥ. ಇಲ್ಲಿ ನಾಯಕ ಒಬ್ಬ ಸೂಪರ್ ಹೀರೋ ಆಗಿದ್ದು, ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾನೆ.
ಈ ಸಿನಿಮಾದಲ್ಲಿ ಸೂರ್ಯಗೆ ನಾಯಕಿಯಾಗಿ ದಿಶಾ ಪಟಾನಿ (Disha Patani) ನಟಿಸಿದ್ದಾರೆ. ‘ಅನಿಮಲ್’ (Animal) ಚಿತ್ರದ ವಿಲನ್ ಬಾಬಿ ಡಿಯೋಲ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 10 ಭಾಷೆಗಳಲ್ಲಿ ಈ ವರ್ಷ ಸಿನಿಮಾ ರಿಲೀಸ್ ಆಗುವ ಬಗ್ಗೆ ಸೂರ್ಯ ಮಾಹಿತಿ ನೀಡಿದ್ದಾರೆ. ಆದರೆ ಎಂಬುದು ನಿಗದಿ ಪಡಿಸಿಲ್ಲ. ಈ ಚಿತ್ರ 3D ವರ್ಷನ್‌ನಲ್ಲಿಯೂ ಕೂಡ ರಿಲೀಸ್ ಆಗುತ್ತಿದೆ.